Sandalwood: ನಟ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರಿಗೆ ಹಲವು ಬಾರಿ ಬಿಗ್ಬಾಸ್ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕರೂ ಅವರು ಅದನ್ನು ನಿರಾಕರಿಸಿದ್ದರಂತೆ. ಹಾಗಾದ್ರೆ ಯಾಕೆ ರಘು ಬಿಗ್ಬಾಸ್ಗೆ ಹೋಗೋದಕ್ಕೆ ನಿರಾಕರಿಸಿದ್ರು ಅಂತಾ ಅವರೇ ಹೇಳಿದ್ದಾರೆ ಕೇಳಿ.
ಈ ಬಗ್ಗೆ ಮಾತನಾಡಿರುವ ರಘು, ಬಿಗ್ಬಾಸ್ ಹೋಗೋ ಬದಲು, ಇಲ್ಲೇ ಇದ್ದು ಏನಾದ್ರೂ ಮಾಡೋಣ. ಬೇರೆ ಕೆಲಸ ಮಾಡೋಣವೆಂದು ಹೋಗಲಿಲ್ಲ ಎಂದಿದ್ದಾರೆ. ಆದರೆ ಬಿಗ್ಬಾಸ್ಗೆ ಹೋಗಲು ಹಲವರು ತುದಿಗಾಲಲ್ಲಿ ನಿಲ್ಲುತ್ತಾರೆ. ನೀವು ಸಿಕ್ಕ ಅವಕಾಶ ಬೇಡ ಎನ್ನಲು ಕಾರಣವೇನು ಎಂದು ಕೇಳಿದಾಗ, ಹೆಸರು ಮಾಡಲು ಬಿಗ್ಬಾಸ್ಗೆ ಹೋಗಬೇಕು ಅಂತೇನಿಲ್ಲ.
ನಮ್ಮ ಕ್ಷೇತ್ರದಲ್ಲಿ ಮಾಡುವಂಥ ಕೆಲಸಗಳು ತುಂಬಾ ಇದೆ. ನಾವು ಮಾಡುವ ಕೆಲಸಗಳು ಸಮಾಜಕ್ಕೆ ಮಾದರಿಯಾಗಿರಬೇಕು. ನಮ್ಮಿಂದ ಕೆಲವರಿಗೆ ಸಹಾಯವಾಗಬೇಕು. ಆ ರೀತಿ ನಮ್ಮ ನಡುವಳಿಕೆ ಇರಬೇಕು ಅಂತಾರೆ ರಘು ರಾಮಪ್ಪ. ಅಲ್ಲದೇ ನನಗೆ ಹಲವಾರು ಕನಸುಗಳಿದೆ. ಅದರ ಮೇಲೆ ಕೆಲಸ ಮಾಡಿ, ಅದನ್ನು ಕಾರ್ಯ ರೂಪಕ್ಕೆ ತರಬೇಕು ಎಂದು ರಘು ಹೇಳಿದ್ದಾರೆ. ಹಲವು ದೇಶಗಳಿಗೆ ಹೋಗಿ, ಅಲ್ಲಿ ಸ್ಪರ್ಧೆಗೆ ಸೇರಬೇಕು ಎಂದು ಹೇಳಿದ್ದಾರೆ ರಘು ರಾಮಪ್ಪ.




