Friday, August 29, 2025

Latest Posts

ಯುಧಿಷ್ಠಿರ ದ್ರೌಪದಿಯನ್ನು ಜೂಜಿನಲ್ಲಿ ಪಣಕ್ಕಿಡಲು ಕಾರಣವೇನು..?- ಭಾಗ 2

- Advertisement -

Spiritual: ಇದರ 1ನೇ ಭಾಗದಲ್ಲಿ ನಾವು ಯುಧಿಷ್ಠಿರ ಜೂಜಿನಲ್ಲಿ ದ್ರೌಪದಿಯನ್ನು ಪಣಕ್ಕಿಡಲು ಕಾರಣವೇನು ಅಂತಾ ಹೇಳಿದೆವು. ಆದರೆ ಎಲ್ಲವನ್ನು ಬಲ್ಲ ಶ್ರೀಕೃಷ್ಣ ಪಾಂಡವರು ಪಗಡೆಯಾಡುವ ಸಂದರ್ಭದಲ್ಲಿ ಏಕೆ ಮೌನವಾಗಿದ್ದ. ಕಾಪಾಡಲು ಬರದಿರಲು ಕಾರಣವೇನು..?

ಶ್ರೀಕೃಷ್ಣ ಸದಾಕಾಲ ಪಾಂಡವರ ಸಂಗವೇ ಇದ್ದಿದ್ದ. ನೆನೆದಾಗೆಲ್ಲ ಪಾಂಡವರ ಎದುರು ಬರುತ್ತಿದ್ದ. ಆದರೆ ಪಗಡೆಯಾಡುವಾಗ ಮಾತ್ರ ಕೃಷ್ಣ ಪಾಂಡವರ ಬಳಿ ಬರಲಿಲ್ಲವೇಕೆ..? ಎಲ್ಲವನ್ನೂ ತಿಳಿದ ಚತುರನಾಗಿದ್ದ ಕೃಷ್ಣನಿಗೆ ಪಗಡೆಯ ಬಗ್ಗೆ ತಿಳಿದಿರಲಿಲ್ಲವೇ..? ಹಾಗಾದ್ರೆ ಪಾಂಡವರ ರಕ್ಷಣೆಗೆ ಕೃಷ್ಣ ಏಕೆ ಬರಲಿಲ್ಲವೆಂದು ತಿಳಿಯೋಣ ಬನ್ನಿ..

ಶ್ರೀಕೃಷ್ಣ ಸರ್ವಾಂತರ್ಯಾಮಿ. ಆತ ಲೋಕದ ಕಣ ಕಣದಲ್ಲಿ ನೆಲೆಸಿರುವನು. ಅಂಥ ಶ್ರೀಕೃಷ್ಣ ಪಾಂಡವರು ಜೂಜಾಡುವ ಸಮಯದಲ್‌ಲಿ ಬಂದು ದ್ರೌಪದಿ ಮತ್ತು ಪಾಂಡವರ ರಕ್ಷಣೆ ಏಕೆ ಮಾಡಲಿಲ್ಲವೆಂಬ ಪ್ರಶ್ನೆ ಹಲವರಲ್ಲಿ ಮೂಡಿರಬಹುದು.

ಇದಕ್ಕೆ ಉತ್ತರ, ಶ್ರೀಕೃಷ್ಣ ಖಂಡಿತ ಬರುತ್ತಿದ್ದ. ಆದರೆ ಪಾಂಡವರ್ಯಾರು ಆ ಸಂದರ್ಭದಲ್ಲಿ ಶ್ರೀಕೃಷ್ಣನನ್ನು ನೆನೆದಿರಲಿಲ್ಲ. ಕರೆದಿರಲಿಲ್ಲ. ಕಾಪಾಡು ಎಂದು ಕೇಳಿರಲಿಲ್ಲ. ಪಾಂಡವರು ಕೌರವರನ್ನು ಸೋಲಿಸುವ ಭರದಲ್ಲಿ, ತಾವು ಗೆಲ್ಲಬೇಕು ಎಂಬ ತವಕದಲ್ಲಿ ಆಡುತ್ತಿದ್ದರು. ಅವರಿಗೆ ಇದು ಕಪಟದಾಟ. ಇಲ್ಲಿ ಶಕುನಿಯ ದಾಳ ಆತ ಹೇಳಿದಂತೆ ಕೇಳುತ್ತದೆ ಎಂಬ ಸತ್ಯವೇ ತಿಳಿದಿರಲಿಲ್ಲ.

ಹಾಗಾಗಿ ಆ ಅತೀಯಾದ ವಿಶ್ವಾಸವೇ ಪಾಂಡವರಿಗೆ ಶ್ರೀಕೃಷ್ಣನನ್ನೇ ಮರೆಸುವಂತೆ ಮಾಡಿತ್ತು. ಆದರೆ ಯಾವಾಗ ಕೌರವರು ದ್ರೌಪದಿಯ ವಸ್ತ್ರಾಪಹರಣ ಮಾಡಲು ಯತ್ನಿಸಿದರೋ, ಆಗ ದ್ರೌಪದಿ ಶ್ರೀಕೃಷ್ಣನನ್ನು ಕರೆದಳು, ಶ್ರೀಕೃಷ್ಣ ಬಂದು ಆಕೆಯ ಮಾನ ಕಾಪಾಡಿದ. ಹಾಗಾಗಿಯೇ ನಮಗೆ ಕಷ್ಟ ಬಂದಾಗ, ನಾವು ಅದನ್ನು ಎದುರಿಸುವ ಪ್ರಯತ್ನ ಮಾಡಬೇಕು. ಆದರೆ ಅತೀಯಾದ ವಿಶ್ವಾಸ ಇರಿಸಿದೇ, ದೇವರನ್ನು ಕೂಡ ಸ್ಮರಿಸಬೇಕು.

- Advertisement -

Latest Posts

Don't Miss