Spiritual: ಮಹಾಭಾರತ ಶುರುವಾಗುವುದೇ ಶಕುನಿಯ ಕುತಂತ್ರದ ಜೂಜಾಟದಿಂದ. ಜೂಜಿನಲ್ಲಿ ದ್ರೌಪದಿಯನ್ನು ಪಣಕ್ಕಿಟ್ಟು ಅವಮಾನವಾದ ಬಳಿಕ, ಮಹಾಭಾರತ ಯುದ್ಧಕ್ಕೆ ನಾಂದಿ ಹಾಡಲಾಗುತ್ತದೆ. ಹಾಗಾದ್ರೆ ಯುಧಿಷ್ಠಿರ ದ್ರೌಪದಿಯನ್ನು ಪಣಕ್ಕಿಡಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಸದಾ ಪ್ರಾಮಾಣಿಕನಾಗಿದ್ದ ಯುಧಿಷ್ಠಿರ ಕೌರವರ ಜತೆ ಪಗಡೆಯಾಡಲು ಸಜ್ಜಾದಾಗ, ಸೋಲನ್ನಪ್ಪುತ್ತಾನೆ. ಹಾಗೆ ಸೋಲನ್ನಪ್ಪಿದಾಗ, ಕೌರವರು ಅವನ ಎಲ್ಲ ಸಹೋದರರನ್ನು ಒಬ್ಬ“ಬ್ಬರನ್ನಾಗಿ ಪಣಕ್ಕಿಡಲು ಹೇಳುತ್ತಾರೆ.
ಬಳಿಕ ತಾನ“ಬ್ಬನೇ ಉಳಿದಾಗ, ಶಕುನಿ, ನೀನು ದ್ರೌಪದಿಯನ್ನು ಪಣಕ್ಕಿರಿಸಿ, ನಿನ್ನ ಸಹೋದರರನ್ನು ಬಿಡಿಸಿಕ“ಳ್ಳಬಹುದು. ಬಳಿಕ ಆಡಿ, ಗೆದ್ದರೆ, ದ್ರೌಪದಿಯನ್ನು ಬಿಡುತ್ತೇವೆ ಎನ್ನುತ್ತಾನೆ. ಹೇಗಾದರೂ ಮಾಡಿ, ಈ ಬಾರಿ ಗೆಲ್ಲಲೇಬೇಕು ಎಂದು, ಯುಧಿಷ್ಠಿರ ದಾಳ ಉರುಳಿಸುತ್ತಾನೆ. ಆದರೆ ಈ ಬಾರಿ ಸೋತು, ದ್ರೌಪದಿಯನ್ನೂ ಸೋಲುತ್ತಾನೆ.
ಈ ವೇಳೆ ದ್ರೌಪದಿಗೆ ಕೌರವರು ಅವಮಾನ ಮಾಡಿ, ಅಪಹಾಸ್ಯ ಮಾಡಿ, ತುಂಬಿದ ಸಭೆಯಲ್ಲಿ ವಸ್ತ್ರಾಪಹರಣ ಮಾಡುತ್ತಾರೆ. ಈ ವೇಳೆ ದ್ರೌಪದಿ ಕೃಷ್ಣನನ್ನು ನೆನೆದು, ತನ್ನ ರಕ್ಷಣೆಗೆ ಕರೆಯುತ್ತಾಳೆ. ಆಗ ಶ್ರೀಕೃಷ್ಣ ದ್ರೌಪದಿಯ ಮಾನ ಕಾಪಾಡುತ್ತಾನೆ.
ಹಾಗಾದ್ರೆ ಯುಧಿಷ್ಠಿರ ಎಡವಿದ್ದೆಲ್ಲಿ..? ಏಕೆ ಆತ ಪಗಡೆಯಾಡುವಲ್ಲಿ ಸೋತ ಎಂದರೆ, ಆ ಪಗಡೆಗೆ ಬಳಸಿದ ದಾಳ ಶಕುನಿಯದ್ದಾಗಿತ್ತು. ಅದು ಶಕುನಿಯ ಮಾತು ಕೇಳುವ ದಾಳವಾಗಿತ್ತು. ತನ್ನ ತಂದೆ ಮತ್ತು ವಂಶದವರ ಸಾವಿಗೆ ಕಾರಣರಾದ ಕುರುವಂಶವನ್ನು ನಾಶ ಮಾಡಲೆಂದೆ, ಶಕುನಿಯ ತಂದೆ ತನ್ನ ಮೂಳೆಯಿಂದ ದಾಳ ಮಾಡು ಎಂದು ಸಲಹೆ ನೀಡಿ, ಮಾಡಿಸಿದ ದಾಳ ಅದಾಗಿತ್ತು.
ಹಾಗಾಗಿ ಶಕುನಿ ಕೌರವ ಮತ್ತು ಪಾಂಡವರ ಮಧ್ಯೆ ಪಗಡೆಯಾಡುವಂತೆ ಮಾಡಿ, ತನ್ನ ದಾಳವನ್ನು ಬಳಸಿ, ಪಾಂಡವರು ಸೋಲುವಂತೆ ಮಾಡಿದ್ದ. ಬಳಿಕ ದ್ರೌಪದಿಯ ವಸ್ತ್ರಾಪಹರಣವಾಗುವಂತೆ ಮಾಡಿ, ಅಲ್ಲಿಯೇ ಕುರುಕ್ಷೇತ್ರ ಯುದ್ಧಕ್ಕೆ ನಾಂದಿ ಹಾಡಿದ್ದ.
ಮಹಾಭಾರತ ಯುದ್ಧಕ್ಕೆ ದ್ರೌಪದಿಯ ಕೋಪ ಹೇಗೆ ಕಾರಣವೋ, ಆ ಕೋಪ ಬರಿಸಲು ಕಾರಣನಾಗಿದ್ದವನು ಶಕುನಿ. ಇನ್ನು ಪಗಡೆಯಾಡುವಾಗ, ಆ ಆಟದ ಬಗ್ಗೆ ತಿಳಿದಿದ್ದ ಕೃಷ್ಣನೇಕೆ ಪಾಂಡವರ ರಕ್ಷಣೆಗೆ ಬರಲಿಲ್ಲವೆಂಬ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ.