Spiritual: 1 ದಿನ ದೇವಸ್ಥಾನದಲ್ಲಿ ಕಸ ಗುಡಿಸುವ ವ್ಯಕ್ತಿ, ದೇವರನ್ನು ಕಂಡು, ದೇವರೇ ನೀನು ಇಡೀ ದಿನ ಹೀಗೆ ನಿಂತು ನಿಂತು ಅದೆಷ್ಟು ಸುಸ್ತಾಗಿರ್ತೀಯಾ..? ನಿನ್ನ ಜಾಗದಲ್ಲಿ ನಾನು ನಿಲ್ಲುತ್ತೇನೆ. ನೀನು ಸ್ವಲ್ಪ ಸುತ್ತಾಡಿ ಬಾ ಎಂದು ಹೇಳುತ್ತಾನೆ.
ಅವನ ಮಾತನ್ನು ಕೇಳಿದ ದೇವರು, ಸರಿ ಹಾಗಾದ್ರೆ, ನಾನು ಸ್ವಲ್ಪ ಊರು ಸುತ್ತಿ ಬರುತ್ತೇನೆ. ನೀನು ಇಲ್ಲೇ ಬರುವ ಭಕ್ತರ ಮುಂದೆ ಸುಮ್ಮನೆ ನಿಲ್ಲಬೇಕು. ನಿನ್ನ ಮುಂದೆ ಏನೇ ಆದರೂ, ನೀನು ಅದನ್ನು ನೋಡಿ, ಸುಮ್ಮನೆ ನಿಂತಿರಬೇಕು. ಅಧಿಕಪ್ರಸಂಗತನ ಮಾಡಬಾರದು ಎನ್ನುತ್ತಾನೆ. ಭಕ್ತ ನೀನು ಹೇಳಿದ ಹಾಗೇ ಆಗಲಿ ಎಂದು ನಿಲ್ಲುತ್ತಾನೆ.
ಭಕ್ತ ದೇವರ ಸ್ಥಾನದಲ್ಲಿ ಸುಮ್ಮನೆ ನಿಂತಿರುತ್ತಾನೆ. ಹಲವಾರು ಭಕ್ತರು ಬಂದು, ದರ್ಶನ ಮಾಡಿ ತೆರಳುತ್ತಾರೆ. ಆಗ ಅಲ್ಲಿ ಬರುವ ಓರ್ವ ಶ್ರೀಮಂತ ದೇವರಿಗೆ ಭಕ್ತಿಯಿಂದ ಕೈ ಮುಗಿದು ಹೋಗುತ್ತಾನೆ. ಆಗ ಅವನ ಜೇಬಿನಿಂದ 1 ಕಟ್ಟು ದುಡ್ಡು ಕೆಳಗೆ ಬೀಳುತ್ತದೆ. ಇನ್ನೇನು ನಿನ್ನ ದುಡ್ಡು ಬಿತ್ತು ಎಂದು ಹೇಳಬೇಕು ಎನ್ನುವಷ್ಟರಲ್ಲಿ ದೇವರ ಸ್ಥಾನದಲ್ಲಿದ್ದ ಭಕ್ತನಿಗೆ ತಾನೀಗ ಭಗವಂತ ಮತ್ತು ಭಗವಂತ ಸುಮ್ಮನಿರಬೇಕು ಎಂದಿದ್ದಾನೆ. ಹಾಗಾಗಿ ನಾನು ಸುಮ್ಮನಿರಬೇಕು ಎಂಬುದು ನೆನಪಿಗೆ ಬರುತ್ತದೆ.
ಬಳಿಕ ದೇವರ ಮುಂದೆ ಬರುವ ಓರ್ವ ಬಡ ಭಕ್ತ, ದೇವರೇ ಇವತ್ತು ನನ್ನ ಮನೆಯ ಜನಕ್ಕೆ ಆಹಾರ ನೀಡಲು ಕೂಡ ನನ್ನ ಬಳಿ ಹಣವಿಲ್ಲ. ಹೇಗಾದರೂ ನನ್ನ ಮನೆಯವರ ಆಹಾರಕ್ಕಾಗಿ ದಾರಿ ತೋರಿಸು ಎಂದು ಪ್ರಾರ್ಥಿಸಿ ಹೋಗುತ್ತಾನೆ. ಹೋಗುವಾಗ, ಅಲ್ಲೇ ಬಿದ್ದಿದ್ದ ಆ ಹಣ ಬಡವನ ಕಣ್ಣಿಗೆ ಬೀಳುತ್ತದೆ. ಬಡವ ದೇವರು ತನ್ನ ಪ್ರಾರ್ಥನೆ ಕೇಳಿಸಿಕ“ಂಡನೆಂದು ತಿಳಿದು, ಧನ್ಯವಾದ ಹೇಳಿ ಹಣ ತೆಗೆದುಕ“ಂಡು ಮನೆಗೆ ಹೋಗುತ್ತಾನೆ.
ಬಳಿಕ ಓರ್ವ ಮೀನು ಹಿಡಿಯುವವ ಬರುತ್ತಾನೆ. ದೇವರೇ ನಾನಿಂದು, ಮೀನು ಹಿಡಿಯಲು ಸಮುದ್ರಕ್ಕೆ ಹೋಗುತ್ತಿರುವೆ. ಪ್ರಾಣ ಉಳಿಸಿ ಮನೆಗೆ ಬರುವ ಹಾಗೆ ಮಾಡು. ನನ್ನ ಪ್ರಾಣಕ್ಕೇನೂ ಅಪಾಯ ಬಾರದ ಹಾಗೆ ಮಾಡು ಎಂದು ಬೇಡುತ್ತಾನೆ. ಅಷ್ಟೋತ್ತಿಗೆ ಹಣ ಕಳೆದುಕ“ಂಡ ಶ್ರೀಮಂತ, ತನ್ನ ಹಣ ಹುಡುಕಿ, ಆ ದೇವಸ್ಥಾನಕ್ಕೆ ಮತ್ತೆ ಮರಳಿ ಬರುತ್ತಾನೆ.
ಆಗ ದೇವರಲ್ಲಿ ಪ್ರಾರ್ಥಿಸುತ್ತಿದ್ದ ಮೀನುಗಾರನನ್ನು ಕಂಡು, ಈತನೇ ತನ್ನ ಹಣ ಕದ್ದಿದ್ದಾನೆಂದು ತಿಳಿದು, ಪೋಲೀಸರಿಗೆ ಕರೆ ಮಾಡಿ, ಆತ ಬಂಧನವಾಗುಂತೆ ಮಾಡುತ್ತಾನೆ. ಇದನ್ನೆಲ್ಲ ನೋಡುತ್ತ ದೇವರ ಸ್ಥಾನದಲ್ಲಿ ನಿಂತಿದ್ದ ಭಕ್ತನಿಗೆ ಬಾಯಿ ತಡೆಯಲಾಗದೇ, ಆತ ಪೋಲೀಸರ ಮುಂದೆ ಹೇಳುತ್ತಾನೆ. ನಾನು ಇಲ್ಲಿ ನಿಂತು ಎಲ್ಲರನ್ನೂ ಗಮನಿಸಿದ್ದೇನೆ.
ಮೀನುಗಾರ ಹಣ ಕದ್ದಿಲ್ಲ. ಈಗ ಕೆಲ ಸಮಯಕ್ಕೂ ಮುಂಚೆ ಬಂದಿದ್ದ ಓರ್ವ ಬಡವ ಆ ಹಣ ತೆಗೆದುಕ“ಂಡು ಹೋದ ಎಂದು ಹೇಳುತ್ತಾನೆ. ಪೋಲೀಸರು ಆ ಬಡವನನ್ನು ಹುಡುಕಿ ಹೋಗುತ್ತಾರೆ. ಶ್ರೀಮಂತನ ಹಣ ಶ್ರೀಮಂತನಿಗೆ ವಾಪಸ್ ಸಿಗುತ್ತದೆ. ಬಡವನ ಬಂಧನವಾಗುತ್ತದೆ. ಮೀನುಗಾರ ಮೀನು ಹಿಡಿಯಲು ಸಮುದ್ರಕ್ಕೆ ಹೋಗುತ್ತಾನೆ. ಬಳಿಕ ದೇವರು ವಾಪಸ್ ದೇವಸ್ಥಾನಕ್ಕೆ ಬರುತ್ತಾನೆ. ಮುಂದೇನಾಗುತ್ತದೆ ಎಂದು ಮುಂದಿನ ಭಾಗದಲ್ಲಿ ತಿಳಿಯೋಣ.




