Spiritual: ನಾವಿಂದು ಮನೆಯಲ್ಲಿ ಮುಸ್ಸಂಜೆ ಬಳಿಕ ಕಸ ಗುಡಿಸಿದರೆ, ನಮ್ಮ ಹಿರಿಯರು ಮುಸ್ಸಂಜೆ ಬಳಿಕ ಕಸ ಗುಡಿಸಿದರೆ, ಮನೆಗೆ ದರಿದ್ರ ಅಂತಾ ಬೈತಾರೆ. ಯಾಕಂದ್ರೆ ಅವರ ಹಿರಿಯರು ಕೂಡ ಹೀಗೆ ಬೈಯ್ಯುತ್ತಿದ್ದರು. ಆದರೆ ಮುಸ್ಸಂಜೆ ಬಳಿಕ ಯಾಕೆ ಹಿಂದಿನ ಕಾಲದಲ್ಲಿ ಕಸ ಗುಡಿಸುತ್ತಿರಲಿಲ್ಲ ಅಂತಾ ಹಲವರಿಗೆ ತಿಳಿದಿಲ್ಲ.
ಹಿಂದಿನ ಕಾಲದಲ್ಲಿ ವಿದ್ಯುಸ್ ಸೌಕರ್ಯ ಇರಲಿಲ್ಲ. ಯಾವುದೇ ಕೆಲಸವಿರಲಿ ಅದನ್ನು ಬೆಳಕಿನಲ್ಲೇ ಮಾಡಿ ಮುಗಿಸಬೇಕಿತ್ತು. ಮನೆಯ ಸ್ವಚ್ಛತೆ, ನಮ್ಮ ಸ್ವಚ್ಛತೆ ಎಲ್ಲವೂ. ಮುಸ್ಸಂಜೆಯಾಗುತ್ತಿದ್ದಂತೆ, ದೇವರ ನಾಮಸ್ಮರಣೆ ಮಾಡುತ್ತಿದ್ದರು. ಶ್ಲೋಕ, ಭಜನೆ ಹೇಳುತ್ತಿದ್ದರು. ಬಳಿಕ ಬೇಗ ಆಹಾರ ಸೇವಿಸಿ, ಮಲಗುತ್ತಿದ್ದರು.
ಕತ್ತಲಲ್ಲಿ ಕಸ ಗುಡಿಸಿದರೆ, ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳು, ನಾಣ್ಯ ಇತ್ಯಾದಿ ಕಳೆದು ಹೋದರೆ, ಮತ್ತೆ ಅದು ಸಿಗುವುದು ಕಷ್ಟವಾಗಿತ್ತು. ಹಾಗಾಗಿ ರಾತ್ರಿ ಕಸ ಗುಡಿಸಬಾರದು ಅಂತಾ ಹೇಳಲಾಗುತ್ತಿತ್ತು. ಅಲ್ಲದೇ, ಮುಂಚೆ ಎಲ್ಲ ಲೆಕ್ಕದ ಧವಸ ಧಾನ್ಯಗಳನ್ನು ಬಳಸಲಾಗುತ್ತಿತ್ತು. ಹಾಗಾಗಿ ಹೆಣ್ಣು ಮಕ್ಕಳು ಕಾಳುಗಳನ್ನು ಸಹ ಲೆಕ್ಕ ಹಾಕಿ, ಯಾವುದೂ ವ್ಯರ್ಥವಾಗದಂತೆ ಕೂಡಿಸಿರಿ, ಬಳಸುತ್ತಿದ್ದರು.
ಹೀಗಾಗಿ ಧವಸ ಧಾನ್ಯಗಳು ಹಾಳಾಗಬಾರದು ಎಂಬ ಕಾರಣಕ್ಕೆ ರಾತ್ರಿ ಕಸ ಗುಡಿಸಲು ಬಿಡುತ್ತಿರಲಿಲ್ಲ. ಅಲ್ಲದೇ, ಹೆಣ್ಣು ಮಕ್ಕಳು ಬೆಳಿಗ್ಗೆಯಿಂದ ಸಂಜೆಯವರೆಗೂ ಮನೆಕೆಲಸ ಮಾಡಿ ಮಾಡಿ ಸುಸ್ತಾಗಿರುತ್ತಿದ್ದರು. ಅವರಿಗೆ ವಿಶ್ರಾಂತಿ ಸಿಗಲಿ ಎಂಬ ಕಾರಣಕ್ಕೆ, ಆ ನಿಯಮ ಮಾಡಿರಬಹುದು. ಇದೀಗ ನಮಗೆ ವಿದ್ಯುತ್ ವ್ಯವಸ್ಥೆ ಇದೆ. ಹಾಗಾಗಿ ಮನೆ ತುಂಬ ಗಲೀಜಾಗಿದ್ದು, ಕಸ ಗುಡಿಸಲೇಬೇಕು ಎಂಬ ಅನಿವಾರ್ಯತೆ ಇದ್ದಲ್ಲಿ, ಕಸ ಗುಡಿಸಬಹುದು.




