Political News: ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳ ಚುನಾವಣೆಯ ಫಲಿತಾಂಶ ಪ್ರಕಟಗ“ಂಡಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಾಲಹಳ್ಳಿ ಗೋವಿಂದೇಗೌಡ ಗೆಲುವು ಸಾಧಿಸಿದ್ದಾರೆ.
ಫಲಿತಾಂಶದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಗೋವಿಂದೇಗೌಡರು, ಮಾಜಿ ಸ್ಪೀಕರ್ ರಮೇಶ್‌ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಜೀವಕ್ಕೇನಾದರೂ ಅಪಾಾಯವಾದರೆ, ಅದಕ್ಕೆ ರಮೇಶ್ ಕುಮಾರ್ ಕಾರಣ. ರಮೇಶ್ ಕುಮಾರ್ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ನನ್ನ ಮನೆಯಲ್ಲಿ ಲೋಕಾಯುಕ್ತ ದಾಳಿಯಾದಾಗ ರಮೇಶ್ ಕುಮಾರ್ ಹಲವು ಬಾರಿ ಫೋನ್ ಮಾಡಿದ್ದರು ಎಂದು ಆರೋಪಿಸಿದ್ದಾರೆ.
ಲೋಕಾಯುಕ್ತ ಇನ್‌ಪೆಕ್ಟರ್‌ಗೆ ಪದೇ ಪದೇ ಕರೆ ಮಾಡಿ, ಸರಿಯಾಗಿ ಹುಡುಕಿ. ಏನು ಸಿಕ್ಕಿದೆ ಎಂದು ವಿಚಾರಿಸಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಎಂದು ಪೋಲೀಸರು ರಕ್ಷಣೆ ನೀಡಿದ್ದಾರೆ. ನನ್ನ ಮೇಲೆ ಲೋಕಾಯುಕ್ತ ದಾಳಿಗೆ ರಮೇಶ್ ಕುಮಾರ್ ಕಾರಣ ಎಂದು ಗೋವಿಂದೇಗೌಡರು ನೇರವಾಗಿ ಆರೋಪಿಸಿದ್ದಾರೆ.
ರಾಜಕೀಯ ಷಡ್ಯಂತ್ರ ಮಾಡಿ ನನ್ನನ್ನು ಸೋಲಿಸಲು ಪ್ರಯತ್ನಿಸಿದರು. ಆದರೂ ನಾನು ಗೆದ್ದಿದ್ದೇನೆ. ಪ್ರಾಮಾಣಿಕವಾಗಿ ನಾನು ಕಳೆದ ಚುನಾವಣೆಯಲ್ಲಿ ರಮೇಶ್ ಕುಮಾರ್ ಪರ ಕೆಲಸ ಮಾಡಿದ್ದೆ. ಈ ಕುರಿತು ಸಾಯಿಬಾಬಾ ಬಳಿ ನಾನು ಪ್ರಮಾಣ ಮಾಡುತ್ತೇನೆ. ವೈಯಕ್ತಿಕವಾಗಿ ರಮೇಶ್ ಕುಮಾರ್ ನನ್ನನ್ನು ಟಾರ್ಗೇಟ್ ಮಾಡಿದ್ದಾರೆ ಎಂದು ಗೋವಿಂದೇಗೌಡರು ಹೇಳಿದ್ದಾರೆ.