Thursday, June 19, 2025

Latest Posts

ಡಿ-ಬಾಸ್ ನಟನೆಯ “ಕ್ರಾಂತಿ” ರಿಲೀಸ್ ಯಾವಾಗ..?

- Advertisement -

ಚಾಲೆಂಜಿAಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ..ರಾಬರ್ಟ್ ಸಿನಿಮಾ ಬಳಿಕ ರಿಲೀಸಾಗಲಿರೋ ಡಿಬಾಸ್ ನಟನೆಯ ಸಿನಿಮಾ ಇದು. ಸಾಕಷ್ಟು ವಿಷಯಗಳಿಂದ ಕುತೂಹಲ ಹುಟ್ಟಿಸಿರೋ ಈ ಸಿನಿಮಾದ ಅಪ್ಡೇಟ್ಸ್ಗಾಗಿ ಡಿ-ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲೂ ಸಹ ಕಮೆಂಟ್ಸ್ ಮೂಲಕ ಚಿತ್ರತಂಡಕ್ಕೆ ಫ್ಯಾನ್ಸ್ ಪ್ರಶ್ನೆ ಮಾಡ್ತಿದ್ದಾರೆ. ಕ್ರಾಂತಿ ಸಿನಿಮಾ ಟ್ರೆöÊಲರ್ ಯಾವಾಗ ರಿಲೀಸ್ ಮಾಡ್ತೀರಾ ಹಾಗೂ ರಿಲೀಸ್ ಡೇಟ್ ಯಾವಾಗ ಅಂತ..

‘ ಕ್ರಾಂತಿ ‘ ಚಿತ್ರದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಸಿನಿಮಾ ತಂಡ ನಿರತವಾಗಿದೆ. ಜೊತೆಗೆ ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಕೂಡ ಹಾಕಿಕೊಂಡಿದೆ.

ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಹುಟ್ಟು ಹಾಕಿದೆ. ದರ್ಶನ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕ್ರಾಂತಿ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್, ಸುಮಲತಾ ಅಂಬರೀಷ್ ಕೂಡ ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದೊಡ್ಡ ತಾರಾಗಣವೇ ಚಿತ್ರದಲ್ಲಿದೆ ಎನ್ನಲಾಗಿದೆ.

ಸದ್ಯ ಚಿತ್ರದ ಕೊನೆಯ ಹಂತದ ಶೂಟಿಂಗ್‌ನಲ್ಲಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಕ್ರಾಂತಿ ತೆರೆಕಾಣುವ ಸಾಧ್ಯತೆಯಿದೆ ಎಂದು ಸದ್ಯ ಗಾಂಧೀನಗರದಲ್ಲಿ ಸುದ್ದಿ ಇದೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಟ್ರೆöÊಲರ್ ಹಾಗೂ ಚಿತ್ರದ ರಿಲೀಸ್ ಡೇಟ್ ಬಗ್ಗೆ ಮಾಹಿತಿ ತಿಳಿಸಬೇಕಿದೆ.

- Advertisement -

Latest Posts

Don't Miss