Wednesday, August 6, 2025

Latest Posts

ಸಿದ್ದರಾಮಯ್ಯಗೆ ತಮ್ಮ ಖುರ್ಚಿಗೆ ಕಂಟಕ ಬಂದಾಗ ಹಿಂದುಳಿದ ವರ್ಗದವರು ನೆನಪಾಗುತ್ತಾರೆ : ಕಾರಜೋಳ

- Advertisement -

Political News: ಸಿದ್ದರಾಮಯ್ಯ ಅವರಿಗೆ ತಮ್ಮ ಖುರ್ಚಿಗೆ ಕಂಟಕ ಬಂದಾಗ ಹಿಂದುಳಿದ ವರ್ಗದವರು ನೆನಪಾಗುತ್ತಾರೆ ಎಂದು ಪಾರ್ಲಿಮೆಂಟ್ ಸದಸ್ಯ ಹಾಗೂ ಮಾಜಿ ಉಪ ಮುಖ್ಯಮಂತ್ರಿಗೋವಿಂದ ಕಾರಜೋಳ ಆರೋಪಿಸಿದರು.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗದವರ ಜಾತಿಗಣತಿಗೆ 2013ರಲ್ಲಿ ಕಾಂತರಾಜ ಆಯೋಗ ರಚಿಸಿ, ಅದರ ವರದಿಯನ್ನು ಅನುಷ್ಠಾನಕ್ಕೆ ತರದೆ ಅನ್ಯಾಯ ಮಾಡಿದ್ದಾರೆ. ಅದನ್ನು ವರದಿ ಎಂದು ಹೇಳದೆ, ಬಚ್ಚಿಟ್ಟಿರುವ ಮಹಾ ಮೋಸಗಾರ ಸಿದ್ದರಾಮಯ್ಯ’ ಎಂದು ಕಿಡಿಕಾರಿದರು.

ಖುರ್ಚಿಗಾಗಿ ಅವರ ನಡುವೆ ಮೂರು-ನಾಲ್ಕು ಗುಂಪುಗಳು ರಚನೆಯಾಗಿದೆ. ಹೀಗಾಗಿ ಸಿದ್ದರಾಮಯ್ಯರು ಹಿಂದುಳಿದ ವರ್ಗ, ಅಹಿಂದ್ ಎನ್ನುವ ಮೋಸದಾಟಕ್ಕೆ ಚಾಲನೆ ನೀಡಿದ್ದಾರೆ ಎಂದು ದೂರಿದರು.

ಪಕ್ಷವೊಂದರ ಪದಾಧಿಕಾರಿಗೆ ಸಂವಿಧಾನಬದ್ಧವಾಗಿ ಚುನಾಯಿತರಾದ ಶಾಸಕರ ಜೊತೆ ಸಭೆ ನಡೆಸಲು ಯಾವುದೇ ಅಧಿಕಾರವಿಲ್ಲ. ಹೀಗಿದ್ದಾಗ ಎಐಸಿಸಿ ಪದಾಧಿಕಾರಿ ರಣದೀಪಸಿಂಗ್ ಸುರ್ಜೇವಾಲ ರಾಜ್ಯದ ಕಾಂಗ್ರೆಸ್ ಶಾಸಕರ, ಸಚಿವರ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಿದ್ದು ಸರಿಯಲ್ಲ. ಇದು ಸಂವಿಧಾನಕ್ಕೆ ಮಾಡಿರುವ ಅವಮಾನದ ಜೊತೆಗೆ, ರಾಜ್ಯದ ಜನತೆಗೆ ಮಾಡಿರುವ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು‌.

- Advertisement -

Latest Posts

Don't Miss