Tuesday, September 16, 2025

Latest Posts

ಅವಳಿ ನಗರದಲ್ಲಿ ಕಾನೂನು ಮೀರಿದ ಬಾರ್‌, ಪಬ್‌ ವಿರುದ್ಧ ಕ್ರಮ ಯಾವಾಗ ಅಧಿಕಾರಿಗಳೇ?

- Advertisement -

Hubli News: ಹುಬ್ಬಳ್ಳಿ : ಧಾರವಾಡ ಜಿಲ್ಲೆ, ಶಿಕ್ಷಣ ಕಾಶಿ ಎಂದೇ ಕರೆಯಲ್ಪಡುವ ಹುಬ್ಬಳ್ಳಿ- ಧಾರವಾಡ ರಾಜ್ಯ ಹಾಗೂ ದೇಶದ ನಾನಾ ಕಡೆಯಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಿದ್ದಾರೆ. ತಮ್ಮ ಮಕ್ಕಳು ವಿದ್ಯಾವಂತರಾಗಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲಿ ಎಂಬ ನಿರೀಕ್ಷೆ ಪೋಷಕರಧಿದ್ದಾದರೆ, ತಾವು ಸಾಧನೆ ಮಾಡಿ ಸಮಾಜದ ಶಕ್ತಿಯಾಗಬೇಕೆಂಬ ಹಂಬಲ ಮಕ್ಕಳದ್ದು. ಆದರೆ ಅದೇ ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡಿ ನಶೆಗೆ ಆಹ್ವಾನಿಸುತ್ತಿವೆ ಇಲ್ಲಿನ ಬಾರ್‌, ಪಬ್‌ಗಳು…!

ಅವಳಿ ನಗರದ ಅಮರಗೋಳದಲ್ಲಿರುವ ‌ ರಾಯಲ್ ರಿಟ್ಜ್ ಗೋಕುಲ್ ರಸ್ತೆಯಲ್ಲಿರುವ ಐಸ್ ಕ್ಯೂಬ್ ಹಾಗೂ ಬಾಂಬೆ 63 ಎನ್ನುವ ಪಬ್‘ ಗಳ ಹಾವಳಿ ಅಂತೂ ಹೇಳತಿರದಾಗಿದೇ.

ಇದೇನು ಹೊಸತಲ್ಲ:
ವಾಣಿಜ್ಯ ನಗರಿ ಕತ್ತಲಾಗುತ್ತಿದ್ದಂತೆ ತನ್ನ ಕರಾಳ ಮುಖವನ್ನು ತೆರೆದುಕೊಳ್ಳುತ್ತಿದೆ. ಅದರಲ್ಲೂ ವೀಕೆಂಡ್‌ ಶುಕ್ರವಾರದಿಂದ-ಭಾನುವಾರದ ವರೆಗೆ ಮಹಾನಗರದಲ್ಲಿ ರಾತ್ರಿ ಹೊತ್ತು ಪಬ್‌, ಬಾರ್‌ಗಳದ್ದೇ ದರ್ಬಾರು. ಅದರಲ್ಲೂ ಪರವಾನಗಿಯೇ ಇಲ್ಲದ ಪಬ್‌ಗಳು ನಗರದಲ್ಲಿಹಲವಿದೆ. ಮದ್ಯ, ನಿಷೇಧಿತ ಮಾದಕಗಳನ್ನು ಸೇವಿಸಿ ನಶೆ ಏರಿಸಿಕೊಂಡ ವಿದ್ಯಾರ್ಥಿ, ಯುವ ಸಮುದಾಯ ಡಿಜೆ ಸದ್ದಿಗೆ ಕುಣಿಯುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ರಾತ್ರಿ 11 ಗಂಟೆಯೊಳಗೆ ಬಂದ್‌ ಆಗಬೇಕಿರುವ ಪಬ್‌, ಬಾರ್‌ಗಳು 2 ಗಂಟೆಯ ವರೆಗೂ ಕಾರ್ಯಾಚರಿಸುತ್ತಿವೆ. ನಗರದ ರಾತ್ರಿ ಚಟುವಟಿಕೆಯ ಬಗ್ಗೆ ಗೊತ್ತಿರುವ ಪೊಲೀಸ್‌ ಇಲಾಖೆ, ಅಬಕಾರಿ ಇಲಾಖೆ ಮಾತ್ರ ಜಾಣಮೌನವಾಗಿದೆ.

ಟೀನೇಜ್‌ನವರೂ ಭಾಗಿ:
ವೀಕೆಂಡ್‌ನಲ್ಲಿ ಪಬ್‌ಗಳಿಗೆ ಬರುವ ಗ್ರಾಹಕರಲ್ಲಿ ಟೀನೇಜ್‌ನವರು ಭಾಗಿಯಾಗುತ್ತಿದ್ದಾರೆ. ಪರವಾನಗಿ ಇಲ್ಲದ ಪಬ್‌ಗಳು ಈ ವಿದ್ಯಾರ್ಥಿಗಳಿಗೆ ಮುಲಾಜಿಲ್ಲದೆ ಎಂಟ್ರಿ ಕೊಡುತ್ತಿವೆ. ನಗರದ ಕೆಲವೊಂದು ಪಬ್‌, ಬಾರ್‌ನಲ್ಲಿಮದ್ಯ ಮಾತ್ರವಲ್ಲದೆ ಗಾಂಜಾ, ಎಂಡಿಎಂಎ, ಕೊಕೇನ್‌ ಸೇರಿದಂತೆ ಮಾದಕ ವಸ್ತುಗಳ ಸೇವನೆ, ಸರಬರಾಜು ನಡೆಯುತ್ತಿರುವ ಬಗ್ಗೆಯೂ ಆಪಾದನೆಗಳು ಕೇಳಿ ಬರುತ್ತಿದ್ದು, ನಗರ ಪೊಲೀಸ್‌ ಕಮಿಷನರ್‌ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು AAP ಪಕ್ಷದ ಕಾರ್ಯಕರ್ತರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss