Friday, November 21, 2025

Latest Posts

ಪೊಲೀಸ್ ಪಾತ್ರಕ್ಕೆ ಸಿಕ್ಕ ಪ್ರಶಂಸೆ ಬಗ್ಗೆ ಭೀಮ ಪ್ರಿಯಾ ಮಾತು : Bheema Priya Podcast

- Advertisement -

Sandalwood: ಗಿರಿಜಾ ಅಂತಾನೇ ಫೇಮಸ್ ಆಗಿರುವ ಭೀಮ ಕಲಾವಿದೆ ಪ್ರಿಯಾ ಅವರು ತಮಗೆ ಸಿನಿಮಾದಲ್ಲಿ ಸಿಕ್ಕ ಪೊಲೀಸ್ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಈ ಅವಕಾಶ ಸಿಕ್ಕಿದ್ದು ಹೇಗೆ ಅಂತಾ ವಿವರಿಸಿದ್ದಾರೆ.

ಪ್ರಿಯಾ ಅವರ ಪತಿ ಅವಿನಾಶ್ ಸಿನಿಮಾದ ವಿಷಯ ಮಾತನಾಡಲು ದುನಿಯಾ ವಿಜಿ ಅವರ ಬಳಿ ಹೋಗಿದ್ದಾಗ, ಪತ್ನಿ ಪ್ರಿಯಾ ಕೂಡ ಕಲಾವಿದೆ ಅಂತಾ ವಿಜಿ ಅವರಿಗೆ ಹೇಳುತ್ತಾರೆ. ಆಗ ನನ್ನ 1 ಸಿನಿಮಾದಲ್ಲಿ ನಿಮ್ಮ ಪತ್ನಿಗೆ 1 ಪಾತ್ರ ಇದೆ ಎಂದಿದ್ದರಂತೆ. ಆದರೆ ವರ್ಷ ಕಳೆದರೂ ಯಾವುದೇ ಕರೆ ಬಾರದ ಕಾರಣ ಪ್ರಿಯಾ ಅವರು ಸುಮ್ಮನಿದ್ದರು.

ಆದರೆ ಬಳಿಕ ಅನುಭಂಧ ಅವಾರ್ಡ್ ಕಾರ್ಯಕ್ರಮದಲ್ಲಿ ವಿಜಿ ಅವರು ಮತ್ತೆ ಪ್ರಿಯಾ ಅವರನ್ನು ಭೇಟಿ ಮಾಡಿ, ಮತ್ತೆ ಆ ಪಾತ್ರ ನೀಡುತ್ತೇನೆಂದು ಹೇಳಿದರಂತೆ. ಆಗ ಮತ್ತೆ ಪ್ರಿಯಾ ಅವರಿಗೆ ಪೋಲೀಸ್ ಪಾತ್ರಕ್ಕೆ ಬಣ್ಣ ಹಚ್ಚುವ ಆಸೆ ಚಿಗುರಿತು. ಬಳಿಕ ಭೀಮಾ ಸಿನಿಮಾದಲ್ಲಿ ಗಿರಿಜಾ ಅನ್ನೋ ಆಫೀಸರ್ ಆಗಿ ಪ್ರಿಯಾ ಅವರು ನಟಿಸಿದ್ದರು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss