ನಿಮ್ಮ ಹಣವನ್ನು ಎಲ್ಲಿ ಹೂಡೋದು ಸೂಕ್ತ? SIP ನಲ್ಲಿ LOSS ಆಗುತ್ತಾ?: Dr Bharath Chandra Podcast

Money Saving Tips: ಆರ್ಥಿಕ ಸಲಹೆಗಾರರಾಗಿರುವ ಡಾ.ಭರತ್ ಚಂದ್ರ ಅವರು ಹಣ ಉಳಿಸಿ, ಬೆಳೆಸೋದು ಹೇೆಗೆ ಅನ್ನೋ ಬಗ್ಗೆ ವಿವರಿಸಿದ್ದಾರೆ.

ಭರತ್ ಚಂದ್ರ ಅವರು ಮ್ಯೂಚುವಲ್ ಫಂಡ್‌ನಲ್ಲಿ ನಾವು ಮಾಡುವ ಎಸ್‌ಐಪಿ ಬಗ್ಗೆ ವಿವರಿಸಿದ್ದು, ಇದರಿಂದ ಲಾಭನಾ..? ನಷ್ಟಾನಾ ಅಂತಾ ಹೇಳಿದ್ದಾರೆ. ಡಾ.ಭರತ್ ಚಂದ್ರ ಅವರ ಪ್ರಕಾರ, ಗಳಿಸುವುದು ಸರಳ. ಆದರೆ ಉಳಿಸೋದು ಮತ್ತು ಬೆಳೆಸೋದು ಸುಲಭವಲ್ಲ. ಅದಕ್ಕಾಗಿ ಕೆಲವು ಪ್ರಯತ್ನಗಳನ್ನು ನಾವು ಮಾಡಬೇಕಾಗುತ್ತದೆ.

ನಾವು ಕೆಲಸ ಮಾಡುವಾಗಲೇ ಉಳಿತಾಯ ಮಾಡಿ, ಹೂಡಿಕೆ ಮಾಡಿದ್ದಲ್ಲಿ ವೃದ್ಧಾಪ್ಯದಲ್ಲಿ ಸಮಸ್ಯೆ ಬರುವುದಿಲ್ಲ. ಆದರೆ ನೀವು ಕೆಲಸ ಮಾಡುವಾಗ ಹೂಡಿಕೆ ಮಾಡದೇ, ಹಣ ಬೆಳೆಸದೇ ಇದ್ದಲ್ಲಿ ಖಂಡಿತ ವೃದ್ಧಾಪ್ಯದಲ್ಲಿ ಹಣದ ಸಮಸ್ಯೆ ಎದುರಿಸಬೇಕಾಗುತ್ತದೆ ಅಂತಾರೆ ಡಾ.ಭರತ್ ಚಂದ್ರ.

ಹಾಗಾಗಿ ಕೆಲಸ ಸಿಕ್ಕ ತಕ್ಷಣದಿಂದಲೇ ತಿಂಗಳಿಗೆ 3ರಿಂದ 4 ಸಾವಿರ ರೂಪಾಯಿಯನ್ನು ನನ್ನದಲ್ಲವೆಂದು ತಿಳಿದು, ಉತ್ತಮವಾಗಿರುವ ಮ್ಯೂಚುವಲ್ ಫಂಡ್‌ನಲ್ಲಿ ಪ್ರತೀ ತಿಂಗಳು ಹೂಡಿಕೆ ಮಾಡಬೇಕು. ಇದನ್ನು ಎಸ್‌ಐಪಿ ಎನ್ನಲಾಗತ್ತೆ. ಅಂದ್ರೆ ಸಿಸ್ಟಮೆಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್. ನೀವು ಈ ವರ್ಷ 3 ಸಾವಿರ  ಹೂಡಿಕೆ ಮಾಡಿದ್ದಲ್ಲಿ, ಮುಂದಿನ ವರ್ಷ 10 ಪರ್ಸೆಂಟ್‌ನಂತೆ, ನಿಮ್ಮ ಸಂಬಳ ಹೆಚ್ಚಾದಂತೆ ನೀವು ಎಸ್‌ಐಪಿ ಹಣ ಹೆಚ್ಚು ಹೂಡಿಕೆ ಮಾಡಬೇಕು. ಇದರಿಂದ ವೃದ್ಧಾಪ್ಯದಲ್ಲಿ ಕೋಟಿ, ಕೋಟಿ ಗಳಿಕೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ವೀಕ್ಷಿಸಿ.

About The Author