Friday, November 8, 2024

Latest Posts

ಸಕ್ಕರೆ ಖಾಯಿಲೆ ಇದ್ದಾಗ ಯಾವ ಹಣ್ಣನ್ನು ಸೇವಿಸಬೇಕು, ಯಾವ ಹಣ್ಣನ್ನು ಸೇವಿಸಬಾರದು..?

- Advertisement -

Health Tips: ಸಕ್ಕರೆ ಖಾಯಿಲೆ ಅನ್ನೋದು ಇಂದಿನ ಕಾಲದವರಿಗೆ ಕಾಮನ್. ಅದರಲ್ಲೂ ಕಾಲೇಜು ಮೆಟ್ಟಿಲೇರುವ ಮಕ್ಕಳಿಗೂ ಶುಗರ್ ಬರುತ್ತದೆ. ಆದರೆ ಇದು ಅನುಭವಿಸುವವರಿಗೆ ನಾರ್ಮಲ್ ಅಂತೂ ಖಂಡಿತ ಅಲ್ಲ. ಸಕ್ಕರೆ ಪ್ರಮಾಣವನ್ನು ಕಂಟ್ರೋಲ್ ಮಾಡದಿದ್ದಲ್ಲಿ, ಅಚಾನಕ್ ಆಗಿ ಪ್ರಾಣ ಹೋಗಬಹುದು. ಹಾಗಾಗಿ ಸದಾ ಸಕ್ಕರೆ ಪ್ರಮಾಣ ಕಂಟ್ರೋಲ್‌ನಲ್ಲಿ ಇರಿಸಿಕೊಳ್ಳಿ. ಹಾಗಾಗಿ ನಾವಿಂದು ಸಕ್ಕರೆ ಖಾಯಿಲೆ ಇದ್ದಾಗ, ಯಾವ ಹಣ್ಣನ್ನು ಸೇವಿಸಬೇಕು, ಯಾವ ಹಣ್ಣನ್ನು ಸೇವಿಸಬಾರದು ಅಂತಾ ಹೇಳಲಿದ್ದೇವೆ.

ಮೊದಲನೇಯದಾಗಿ ಸಕ್ಕರೆ ಖಾಯಿಲೆ ಇದ್ದವರು ಯಾವ ಹಣ್ಣು ತಿನ್ನಬೇಕು ಅಂತಾ ತಿಳಿಯೋಣ. 

ನೇರಳೆ ಹಣ್ಣು: ನೇರಳೆ ಹಣ್ಣು ಮತ್ತು ಇದರ ಬೀಜ ಸಕ್ಕರೆ ಖಾಯಿಲೆ ಇರುವವರಿಗೆ ಅತ್ಯುತ್ತಮ ಆಹಾರವಾಗಿದೆ. ಈ ಹಣ್ಣಿನ ಸೇವನೆಯಿಂದ ಸಕ್ಕರೆ ಪ್ರಮಾಣ ಕಂಟ್ರೋಲಿನಲ್ಲಿರುತ್ತದೆ. ಕೆಲವರು ನೇರಳೆ ಹಣ್ಣಿನ ಬೀಜವನ್ನು ಒಣಗಿಸಿ, ಪುಡಿ ಮಾಡಿ, ಅದರ ಕಶಾಯ ಮಾಡಿ ಕುಡಿದು. ಸಕ್ಕರೆ ಖಾಯಿಲೆಯನ್ನೇ ತೆಗೆದು ಹಾಕಿದ್ದಾರೆ. ಆದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಅಗತ್ಯಕ್ಕಿಂತ ಹೆಚ್ಚು ಇದರ ಸೇವನೆ ಮಾಡುವಂತಿಲ್ಲ. ಮಿತವಾಗಿ ಸೇವಿಸಿ.

 ಬೆರ್ರೀಸ್: ಸ್ಟ್ರಾಬೇರಿ, ರಾಸ್‌ಬೇರಿ, ಬ್ಲೂಬೇರಿ ಇತ್ಯಾದಿ ಹಣ್ಣುಗಳು ಸಕ್ಕರೆ ಖಾಯಿಲೆ ಇರುವವರಿಗೆ ತುಂಬಾ ಉತ್ತಮ.

ಸೇಬು ಹಣ್ಣು: ಕೆಂಪು ಮತ್ತು ಹಸಿರು ಸೇಬುಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಅದರಲ್ಲೂ ಕೆಂಪು ಸೇಬಿಗಿಂತ, ಹಸಿರು ಸೇಬುಹಣ್ಣನ್ನು ನೀವು ಸೇವಿಸಿದ್ದಲ್ಲಿ, ನಿಮ್ಮ ಶುಗರ್ ಲೆವಲ್ ಕಂಟ್ರೋಲಿನಲ್ಲಿರುತ್ತದೆ. ಏಕೆಂದರೆ, ಇದರಲ್ಲಿ ಫೈಬರ್ ಅಂಶವಿದ್ದು, ಇದು ಸಕ್ಕರೆ ಪ್ರಮಾಣ ನಿಯಂತ್ರಿಸಲು ಅನುಕೂಲ ಮಾಡಿಕೊಡುತ್ತದೆ.

ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣಿನಲ್ಲಿ ವಿಟಾಮಿನ್ ಸಿ ಇರುತ್ತದೆ. ಇದು ಕೂಡ ಸಕ್ಕರೆ ಖಾಯಿಲೆ ಇರುವವರಿಗೆ ಲಾಭಕಾರಿಯಾಗಿದೆ.

ಪೀಚ್: ಪೀಚ್ ಹಣ್ಣನ್ನು ಸೇವಿಸಿದರೆ, ಸಕ್ಕರೆ ಪ್ರಮಾಣ ಕಂಟ್ರೋಲಿನಲ್ಲಿರುತ್ತದೆ. ನೀವು ಪೀಚ್ ಜ್ಯೂಸ್ ಮಾಡಿಯೂ ಸೇವಿಸಬಹುದು.

ಸಕ್ಕರೆ ಖಾಯಿಲೆ ಇರುವವರು ಮಾವಿನ ಹಣ್ಣಿನ ಸೇವನೆ ಮಾಡಬಾರದು. ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿಯೇ ಸಕ್ಕರೆ ಖಾಯಿಲೆ ಇರುವವರ ಸಕ್ಕರೆ ಪ್ರಮಾಣ ಬೇಸಿಗೆಯಲ್ಲಿಯೇ ಹೆಚ್ಚಾಗುತ್ತದೆ. ಮಾವಿನ ಹಣ್ಣನ್ನು ಮಿತವಾಗಿ ಸೇವಿಸಿದರೆ ಉತ್ತಮ.

ಎರಡನೇಯದಾಗಿ ಬಾಳೆಹಣ್ಣಿನ ಸೇವನೆಯೂ ಸಕ್ಕರೆ ಖಾಯಿಲೆ ಇರುವವರಿಗೆ ಉತ್ತಮವಲ್ಲ. ದ್ರಾಕ್ಷಿ, ಚಿಕ್ಕು, ಸೀತಾಫಲ ಹಣ್ಣುಗಳನ್ನು ಸಹ ಹೆಚ್ಚು ತಿನ್ನುವಂತಿಲ್ಲ. ಈ ಎಲ್ಲ ಹಣ್ಣುಗಳನ್ನು ಮಿತವಾಗಿ ಸೇವಿಸಬಹುದು.

- Advertisement -

Latest Posts

Don't Miss