ತುಪ್ಪ ಅಥವಾ ಬೆಣ್ಣೆ ಯಾವುದು ಒಳ್ಳೇದು? ಯಾವುದು ಆರೋಗ್ಯಕರ!: Health Tips by Dr.Prakash Rao

Health Tips: ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು ತುಪ್ಪ ಮತ್ತು ಬೆಣ್ಣೆ ಎರಡರಲ್ಲಿ ಯಾವುದರ ಸೇವನೆಯಿಂದ ಆರೋಗ್ಯ ಉತ್ತಮವಾಗಿರುತ್ತದೆ ಅನ್ನೋ ಬಗ್ಗೆ ವಿವರಿಸಿದ್ದಾರೆ.

ಇಂದಿನ ದಿನಗಳಲ್ಲಿ ಶುಗರ್ ಹೆಚ್ಚಾಗುತ್ತಿದೆ. ಅದೇ ರೀತಿ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿಯೂ ಹೆಚ್ಚಾಗುತ್ತಿದೆ. ಅಲ್ಲದೇ ಎಣ್ಣೆ ಪದಾರ್ಥಗಳನ್ನು ಹೆಚ್ಚು ತಿನ್ನಬಾರದು, ಇದರಿಂದ ಅನಾರೋಗ್ಯಕರ ತೂಕ ಹೆಚ್ಚಾಗುತ್ತದೆ ಅನ್ನೋ ವಿಷಯವನ್ನೂ ಜನರು ಅರಿತಿದ್ದಾರೆ. ಬೇರೆ ಪದಾರ್ಥಗಳ ಸೇವನೆಯಿಂದಲೂ ಅನಾರೋಗ್ಯಕರ ತೂಕ ಹೆಚ್ಚಾಗುತ್ತಿದ್ದರೂ, ಜನ ತುಪ್ಪ-ಬೆಣ್ಣೆ ಸೇವನೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಹಾಗಾಗಿ ಈ ಬಗ್ಗೆ ವಿವರಿಸಿರುವ ಡಾ. ಪ್ರಕಾಶ್ ರಾವ್ ಅವರು, ತುಪ್ಪ- ಬೆಣ್ಣೆ ಸೇವನೆಯಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ ಅನ್ನೋ ಭ್ರಮೆ ಇದೆ. ತುಪ್ಪವನ್ನು ಕ್ಲಾರಿಫೈಡ್ Butter ಅಂತಾ ಹೇಳಲಾಗುತ್ತದೆ. ಅಂದ್ರೆ ಬೆಣ್ಣೆಯನ್ನೇ ಕಾಸಿ ತುಪ್ಪ ಮಾಡಲಾಗುತ್ತದೆ. ಆದರೆ ತುಪ್ಪ ಎಂದಿಗೂ ನಮ್ಮ ದೇಹದಲ್ಲಿ ಅನಾರೋಗ್ಯಕರ ತೂಕ ಹೆಚ್ಚು ಮಾಡುವುದಿಲ್ಲ.

ತುಪ್ಪ ಬಳಸಿ ನಾವು ಅಡುಗೆ ತಯಾರಿಸಬಹುದು. ಅದನ್ನು ಹಾಕಿ ಬಿಸಿ ಬಿಸಿ ಆಹಾರ ಸೇವನೆ ಮಾಡಬಹುದು. ಉದಾಹರಣೆಗೆ ಬಿಸಿ ಬಿಸಿ ಅನ್ನಕ್ಕೆ, ಗಂಜಿಗೆ, ಹಾಲಿಗೆ, ಚಪಾತಿ, ದೋಸೆ, ಇಡ್ಲಿ ಹೀಗೆ ಬಿಸಿ ಪದಾರ್ಥಕ್ಕೆ ನಾವು ತುಪ್ಪ ಹಾಕಿ ಸೇವನೆ ಮಾಡಬಹುದು. ಇದರಿಂದ ನಮ್ಮ ದೇಹ ಆರೋಗ್ಯವಾಗಿರುತ್ತದೆ. ಆದರೆ ತುಪ್ಪ-ಬೆಣ್ಣೆ ಬಳಸುವಾಗ ನಾವು ಜಾಗರೂಕರಾಗಿರಬೇಕು. ಪ್ರತಿದಿನ ಕಡಿಮೆ ಪ್ರಮಾಣದಲ್ಲಿ ನಾವು ತುಪ್ಪ-ಬೆಣ್ಣೆ ಎರಡನ್ನೂ ಸೇವಿಸಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author