ಮನೆಯ ಬಳಿ ಗಿಡ- ಮರಗಳನ್ನು ಬೆಳೆಸಿದರೆ, ಮನೆಯ ಅಂದ ಇನ್ನಷ್ಟು ಹೆಚ್ಚುತ್ತದೆ. ಆದ್ರೆ ಕೆಲ ಗಿಡಗಳನ್ನು ನಾವು ನೆಡಬಾರದು. ಹಾಗಾಗಿ ಇಂದು ನಾವು ಯಾವ ಗಿಡವನ್ನ ಮನೆಯ ಬಳಿ ಬೆಳೆಸಬೇಕು, ಮತ್ತು ಯಾವ ಗಿಡವನ್ನ ಮನೆಯ ಬಳಿ ಬೆಳೆಸಬಾರದು ಅಂತಾ ಹೇಳಲಿದ್ದೇವೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮೊದಲನೇಯದಾಗಿ ತುಳಸಿಗಿಡ ಮನೆಯ ಮುಂದೆ ನೆಡಬೇಕು. ಆದ್ರೆ ಅದು ದಕ್ಷಿಣ ದಿಕ್ಕಿಗಿರಬಾರದು. ಈ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಇನ್ನು ತೆಂಗಿನ ಮರವನ್ನ ಕೂಡ ನೀವು ಬೆಳೆಸಬಹುದು. ತೆಂಗಿನ ಮರ ಮತ್ತು ತುಳಸಿ ಗಿಡ ಸಮೃದ್ಧವಾಗಿ ಬೆಳೆದಷ್ಟು ಮನೆಗೆ ಒಳ್ಳೆಯದು ಅಂತಾ ಹೇಳಲಾಗುತ್ತದೆ.
ಪಾರಿಜಾತ ಮರ ಬೆಳೆಸುವುದು ಕೂಡ ಒಳ್ಳೆಯದು. ಆದ್ರೆ ಅದನ್ನ ಮನೆಯ ಹಿಂಭಾಗಕ್ಕೆ ನೆಟ್ಟು ಬೆಳೆಸಬೇಕು. ಮನೆಯ ಮುಂಭಾಗದಲ್ಲಿ ಎಂದಿಗೂ ಪಾರಿಜಾತ ಮರವಿರಬಾರದು. ಇಷ್ಟೇ ಅಲ್ಲದೇ, ಅರಳಿ ಮರ, ಬೇವಿನ ಮರ, ಮಾವಿನ ಮರವೆಲ್ಲ ಮನೆಯ ಹಿಂದಿದ್ದರೆ ಉತ್ತಮ. ಯಾಕಂದ್ರೆ ಈ ಮರದ ಬೇರುಗಳು ಪಸರಿಸುವುದರಿಂದ, ಇದು ಮನೆಯ ಪಾಯಕ್ಕೆ ಧಕ್ಕೆ ತರುವ ಸಾಧ್ಯತೆ ಇದೆ.
ಇದಷ್ಟೇ ಅಲ್ಲದೇ, ಮನೆಯ ಮುಂದೆ ಬಳ್ಳಿ ಇರುವ ಹೂವುಗಳನ್ನು ನೆಡಬಾರದು. ಆದರೆ ಮನೆಯ ಹಿಂದೆ ನೆಡಬಹುದು. ಯಾಕಂದ್ರೆ ಬಳ್ಳಿ ಬಿಡುವ ಗಿಡಗಳು ಕೋಲಿಗೆ, ಕಂಬಕ್ಕೆ ಹೀಗೆ ಯಾವುದಾದರೂ ವಸ್ತುವಿನ ಬೆಂಬಲದೊಂದಿಗೆ ಹಬ್ಬುತ್ತದೆ. ಅದಕ್ಕೆ ತನ್ನ ಬಲದ ಮೇಲೆ ಬೆಳೆಯಲಾಗುವುದಿಲ್ಲ. ಆದ್ದರಿಂದ ಮನೆಯ ಮುಂದೆ ಬಳ್ಳಿ ಬಿಡುವ ಗಿಡ ನೆಟ್ಟರೆ, ಆ ಮನೆಯ ಒಡೆಯ ಅಥವಾ ಮಗ ಜೀವನದಲ್ಲಿ ಉದ್ಧಾರವಾಗಲು ಸಾಧ್ಯವಾಗುವುದಿಲ್ಲ.
ಇನ್ನು ಹುಣಸೇ ಮರ, ಅರಳಿಮರ, ಪಾಪಸ್‌ಕಳ್ಳಿ, ಹೀಗೆ ಮುಂತಾದ ಗಿಡಗಳನ್ನು ಯಾವುದೇ ಕಾರಣಕ್ಕೂ ಮನೆಯ ಮುಂದೆ ಬೆಳೆಸದಿರಿ. ಇದರಿಂದ ಮನೆಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )