ನಾವು ಹಲವು ತರಕಾರಿಗಳನ್ನ ಸೇವಿಸುತ್ತೇವೆ. ಅವುಗಳಲ್ಲಿ ಕೆಲವು ತರಕಾರಿಗಳ ಸಿಪ್ಪೆ ತೆಗೆದು ಬಳಸುತ್ತೇವೆ. ಮತ್ತು ಕೆಲವು ತರಕಾರಿಗಳ ಸಿಪ್ಪೆ ತೆಗಿಯದೇ ಬಳಸುತ್ತೇವೆ. ಆದ್ರೆ ಕೆಲವರು ಕೇವಲ ರುಚಿಗಾಗಿ ಕೆಲ ತರಕಾರಿಗಳ ಸಿಪ್ಪೆ ತೆಗೆದು ತಿಂತಾರೆ. ಅದರಿಂದ ಏನೂ ಪ್ರಯೋಜನವಿಲ್ಲ ಎನ್ನುತ್ತದೆ ಆಯುರ್ವೇದ. ಹಾಗಾದ್ರೆ ಯಾವ ತರಕಾರಿಯ ಸಿಪ್ಪೆ ತೆಗಿಯದೇ ತಿನ್ನಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಆಯುರ್ವೇದದ ಪ್ರಕಾರ ಹಲಸಿನ ಕಾಯಿಯನ್ನ ಬಿಟ್ಟು ಉಳಿದೆಲ್ಲ ತರಕಾರಿಯನ್ನ ಸಿಪ್ಪೆ ಸಮೇತ ತಿನ್ನಬೇಕು ಅಂತಾ ಹೇಳಲಾಗತ್ತೆ. ಆದರೆ ಆ ತರಕಾರಿಯನ್ನ ನೀವು ಸ್ವಚ್ಛವಾಗಿ ತೊಳೆದು ತಿನ್ನಬೇಕು. ಆಲೂಗಡ್ಡೆ, ಸೌತೇಕಾಯಿ, ಇದೆಲ್ಲವನ್ನೂ ಸಿಪ್ಪೆ ಸಮೇತವಾಗಿಯೇ ತಿನ್ನಬೇಕು ಅಂತಾ ಹೇಳತ್ತೆ ಆಯುರ್ವೇದ. ಯಾಕಂದ್ರೆ ಸಿಪ್ಪೆ ತರಕಾರಿಗೆ ಅಂಟಿಕೊಂಡಿರುವ ಭಾಗದಲ್ಲಿಯೇ ಹೆಚ್ಚು ಪೋಷಕಾಂಶವಿರುತ್ತದೆ. ನೀವು ಸಿಪ್ಪೆಯನ್ನ ಬೇರೆ ಮಾಡಿದರೆ, ಪೋಷಕಾಂಶವಿರುವ ಭಾಗ, ಸಿಪ್ಪೆಯೊಂದಿಗೆ ಹೋಗುತ್ತದೆ. ಹಾಗಾಗಿ ಸಿಪ್ಪೆ ಸಮೇತ ತರಕಾರಿ ಸೇವನೆ ಮಾಡಬೇಕು ಅನ್ನುತ್ತೆ ಆಯುರ್ವೇದ.
ಇನ್ನು ಈರುಳ್ಳಿಯನ್ನ ಸಿಪ್ಪೆ ತೆಗೆದು ತಿನ್ನಬಹುದು. ಯಾಕಂದ್ರೆ ತುಂಬಾ ಈಸಿಯಾಗಿ ಈರುಳ್ಳಿ ಸಿಪ್ಪೆ ತೆಗೆಯಬಹುದು. ಅದಕ್ಕೊಸ್ಕರ ಚಾಕು ಬಳಸಬೇಕು ಅಂತೇನಿಲ್ಲ. ಆದ್ರೆ ಸೌತೇಕಾಯಿ ಮತ್ತು ಆಲೂಗಡ್ಡೆ ಸಿಪ್ಪೆ ತೆಗೆಯುವುದಿದ್ದರೆ, ಚಾಕುವನ್ನು ಬಳಸಬೇಕಾಗುತ್ತದೆ. ಅಲ್ಲದೇ ನೀವು ಆಲೂಗಡ್ಡೆಯನ್ನು ಬೇಯಿಸಿದರೂ, ಅದರ ಪೋಷಕಾಂಶವಿರುವ ಭಾಗ, ಸಿಪ್ಪೆಗೆ ಅಂಟಿಕೊಂಡಿರುತ್ತದೆ. ಆ ಕಾರಣಕ್ಕೆ ಸಿಪ್ಪೆಯೊಂದಿಗೆ ಆಲೂಗಡ್ಡೆ ಸೇವಿಸಬೇಕು.