ಟಗರು ಸಿದ್ದುಗೆ ಸಾಟಿ ಯಾರು? ನಾಯಕತ್ವವೇ ಕಾಂಗ್ರೆಸ್‌ ಬಲ

ಸಿದ್ದರಾಮಯ್ಯನವರಿಗೆ ಸಿದ್ದರಾಮಯ್ಯನವರೇ ಸಾಟಿ. ಅವರು ಉತ್ತಮ ನಾಯಕರಿಗೆ ಅವಕಾಶ ನೀಡಿದರೆ ಮುಂದಿನ 15 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲೇ ಮುಂದುವರಿಯಲಿದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ್ದಾರೆ.

ದಿ. ದೇವರಾಜು ಅರಸು ಅವರ ಆಡಳಿತದ ದಾಖಲೆಯನ್ನು ಸಿದ್ದರಾಮಯ್ಯನವರು ಸಮರ್ಥವಾಗಿ ಮೀರಿಸಿದ್ದಾರೆ. ತಮ್ಮ ನಾಯಕತ್ವ ಗುಣ ಹಾಗೂ ಆಡಳಿತ ಸಾಮರ್ಥ್ಯದಿಂದ ಉತ್ತಮ ಆಡಳಿತ ನೀಡಿದ್ದಾರೆ. ಇದುವರೆಗೆ 15 ಬಾರಿ ಬಜೆಟ್ ಮಂಡಿಸಿರುವುದು ಅವರ ಸಾಧನೆಗೆ ಸಾಕ್ಷಿ ಎಂದು ಹೇಳಿದರು.

ಕಾಂಗ್ರೆಸ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿರುವುದರಿಂದ ನಾಳೆ ಅಥವಾ ನಾಡಿದ್ದೇ ಅವರು ಅಧಿಕಾರ ಬಿಟ್ಟು ಕೊಡಲಿ ಎಂದು ಕೇಳುತ್ತಿಲ್ಲ ಒಳ್ಳೆಯವರಿಗೆ ಅಧಿಕಾರ ಅವರ ನಾಯಕತ್ವದಲ್ಲೇ ಕೊಟ್ಟಾಗ ಪಕ್ಷ ಮತ್ತಷ್ಟು ದಿನ ಇರುತ್ತದೆ ಎಂದರು. ಅಧಿಕಾರದಲ್ಲಿಅವರ ಮಾರ್ಗದರ್ಶನ ನಮ್ಮ ಪಕ್ಷಕ್ಕೆ ಅತ್ಯವಶ್ಯಕವಾಗಿ ಬೇಕಾಗಿದೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಗಳಾಗಿ ಮುಂದುವರಿಯಬೇಕಾ? ಡಿ.ಕೆ.ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿಗಳಾಗಬೇಕಾ? ಎಂಬ ನಿರ್ಧಾರವನ್ನು ಹೈಕಮಾಂಡ್ ತೀರ್ಮಾನ ಮಾಡಲಿದ್ದು, ನಾನಾಗಲಿ, ಶಾಸಕರಾಗಲಿ ಸಿಎಂ ಮಾಡುವ ಕೆಲಸ ಅಲ್ಲ, ನನಗೆ ಇರುವ ಮಾಹಿತಿ ಪ್ರಕಾರ ಹೈಕಮಾಂಡ್ ಶೀಘ್ರದಲ್ಲೇ ಸಿಎಂ ಹಾಗೂ ಡಿಸಿಎಂ ಸಭೆ ಕರೆದು ಚರ್ಚೆ ಮಾಡುತ್ತಾರೆಂಬ ಮಾಹಿತಿ ಇದ್ದು ಹೈಕಮಾಂಡ್ ಮುಂದಿನ ಮುಖ್ಯಮಂತ್ರಿ ತೀರ್ಮಾನಿಸಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ವರದಿ : ಲಾವಣ್ಯ ಅನಿಗೋಳ

About The Author