Political News: ಮಂಡ್ಯದಲ್ಲಿಂದು ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಎಂದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದ ಸಿಎಂ ಯಾರಾದರೆ ನನಗೇನು..? ಎಷ್ಟು ವರ್ಷ ಇದ್ದರೆ ನನಗೇನು..? ನನಗೂ ಅದಕ್ಕೂ ಸಂಬಂಧವೇ ಇಲ್ಲವೆಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಅಲ್ಲದೇ ಕಾಂಗ್ರೆಸ್‌ಸಿಗರು, ಕೇಂದ್ರ ಸಚಿವರಾಗಿ ಕುಮಾರಸ್ವಾಮಿಯವರು ಏನು ಅಭಿವೃದ್ಧಿ ಮಾಡಿದ್ದಾರೆಂದು ಕೇಳುತ್ತಿದ್ದಾರೆ. ಚರ್ಚಿಸಲು ಆಹ್ವಾನಿಸಿದ್ದಾರೆ. ಇದಕ್ಕೆ ಏನೆನ್ನುತ್ತೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಹೆಚ್ಡಿಕೆ, ನನಗೆ ಯಾರ ಆಹ್ವಾನ ಬೇಕಿಲ್ಲ. ಹೇಗೆ, ಎಲ್ಲಿ ಅಭಿವೃದ್ಧಿ ಮಾಡಬೇಕು..? ಹೇಗೆ ಕ್ರಮ ಕೈಗ“ಳ್ಳಬೇಕು ಎಂದು ನನಗೆ ತಿಳಿದಿದೆ ಎಂದು ತಿರುಗೇಟು ನೀಡಿದ್ದಾರೆ.
ಅಲ್ಲದೇ, ಜನತೆಯ ಅಹ್ವಾಲು ಸ್ವೀಕರಿಸಿ, ನನಗೆ ಸಮಯ ಸಿಕ್ಕಾಗ, ಅಭಿವೃದ್ಧಿ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ. ಯಾರೋ ಕಟ್ಟಿದ ಶಾಲೆಯನ್ನು ಸರ್ಕಾರ ಇನ್ಯಾರಿಗೋ ಗುತ್ತಿಗೆ ನೀಡಲು ತಯಾರಾಗಿದೆ. ಯಾರಪ್ಪಂದು ಎಂದು ಗುತ್ತಿಗೆ ನೀಡುತ್ತಾರೆಂದು ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.