ಹಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ಅವರ ನಿಧನದ ನಂತರ, ಅವರ ಸುಮಾರು ₹450 ಕೋಟಿ ಮೌಲ್ಯದ ಆಸ್ತಿ ಯಾರಿಗೆ ಸೇರುತ್ತದೆ? ಎಂಬ ಪ್ರಶ್ನೆ ಅಭಿಮಾನಿಗಳಲ್ಲೂ, ಬಾಲಿವುಡ್ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಇದರ ಮಧ್ಯೆ, ಅವರ ಪತ್ನಿ ಹಾಗೂ ಮಾಜಿ ನಟಿ-ಸಂಸದೆ ಹೇಮಾ ಮಾಲಿನಿ ಮಾಡಿದ ಹೊಸ ಸೋಷಿಯಲ್ ಮೀಡಿಯಾ ಪೋಸ್ಟ್ ಮತ್ತಷ್ಟು ಕುತೂಹಲ ಹುಟ್ಟಿಸಿದೆ.
ಧರ್ಮೇಂದ್ರ ತನ್ನ ಕುಟುಂಬಕ್ಕೆ ರೂ. 450 ಕೋಟಿ ಮೌಲ್ಯದ ಸಂಪತ್ತನ್ನು ಬಿಟ್ಟು ಸೋಮವಾರ ಇಹಲೋಕ ತ್ಯಜಿಸಿದರು. ಧರ್ಮೇಂದ್ರ ಇಬ್ಬರು ಪತ್ನಿಯರು ಮತ್ತು ಆರು ಜನ ಮಕ್ಕಳನ್ನು ಹೊಂದಿದ್ದಾರೆ. ಪ್ರಕಾಶ್ ಕೌರ್ ಮೊದಲ ಹೆಂಡತಿ. ಪ್ರಕಾಶ್ ಕೌರ್ ಅವರಿಗೆ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಅಜಿತಾ ಡಿಯೋಲ್ ಮತ್ತು ವಿಜೇತಾ ಡಿಯೋಲ್ ಇದ್ದಾರೆ.

ಕುಟುಂಬ ದೊಡ್ಡದಾದರೂ, ಧರ್ಮೇಂದ್ರ ಹಾಗೂ ಅವರ ಮಕ್ಕಳ ನಡುವಿನ ಆತ್ಮೀಯ ಬಾಂಧವ್ಯ ಬಗ್ಗೆ ಹಲವು ಬಾರಿ ವರದಿಗಳು ಬಂದಿದ್ದವು. ಆದರೆ ದಿನನಿತ್ಯದ ಬದುಕಿನಲ್ಲಿ ಅವರು ಕೊನೆಯ ದಿನಗಳನ್ನು ಮೊದಲ ಪತ್ನಿ ಪ್ರಕಾಶ್ ಕೌರ್ ಅವರ ಮನೆಯಲ್ಲಿ ಕಳೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಧರ್ಮೇಂದ್ರ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು ₹450 ಕೋಟಿ. ಅದರ ಹಂಚಿಕೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ ಕುಟುಂಬದಲ್ಲಿ ಎರಡು ಶಾಖೆಗಳಿರುವುದರಿಂದ ಈ ವಿಚಾರ ಈಗ ಸಾರ್ವಜನಿಕ ಕುತೂಹಲಕ್ಕೆ ಕಾರಣವಾಗಿದೆ.
ಧರ್ಮೇಂದ್ರ ನಿಧನದ ನಂತರ ಹೇಮಾ ಮಾಲಿನಿ ತಮ್ಮ ಎಕ್ಸ್ ನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಧರ್ಮೇಂದ್ರ ನನ್ನ ಜೀವನದಲ್ಲಿ ಎಲ್ಲವೂ ಆಗಿದ್ದರು. ಪತಿ, ಸ್ನೇಹಿತ, ಮಾರ್ಗದರ್ಶಕ, ಕವಿ, ಮತ್ತು ಪ್ರತಿದಿನ ನನ್ನನ್ನು ಪ್ರೇರೇಪಿಸುವ ವ್ಯಕ್ತಿ. ಇಬ್ಬರು ಹೆಣ್ಣುಮಕ್ಕಳಾದ ಇಶಾ ಮತ್ತು ಅಹಾನಾ ಅವರಿಗೆ ಅವರು ಅತ್ಯಂತ ಪ್ರೀತಿಯ ತಂದೆ. ಅವರ ನಿಧನ ಭರಿಸಲಾಗದ ನಷ್ಟ.
ಸ್ವಪ್ನ ಸುಂದರಿಯ ಹಿನ್ನಲೆಯ ಫೋಟೋಗಳನ್ನು ಹಂಚಿಕೊಂಡ ಅವರು, ಹಲವು ವರ್ಷಗಳ ವೈವಾಹಿಕ ಬದುಕಿನಲ್ಲಿ ಧರ್ಮೇಂದ್ರ ನೀಡಿದ್ದರ ಎಲ್ಲ ನೆನಪುಗಳು ಎಂದಿಗೂ ಮರೆಯಲಾಗದವು ಎಂದಿದ್ದಾರೆ. ಈ ಪೋಸ್ಟ್ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆಸ್ತಿ ಹಂಚಿಕೆ ಹೇಗೆ? ಎಂಬ ಚರ್ಚೆ ಮತ್ತಷ್ಟು ಜೋರಾಗಿದೆ.
ವರದಿ : ಲಾವಣ್ಯ ಅನಿಗೋಳ

