Saturday, November 15, 2025

Latest Posts

ಈ ವಾರ ಔಟ್ ಆಗೋದ್ಯಾರು? ಇವರಿಗೆ ಕಿಚ್ಚನ ಕ್ಲಾಸ್ ಪಕ್ಕಾ!

- Advertisement -

ಬಿಗ್ ಬಾಸ್ ಕನ್ನಡ ಸೀಸನ್ 12ರ ಏಳನೇ ವಾರದ ವೀಕೆಂಡ್ ಎಪಿಸೋಡ್ ಇಂದು ಪ್ರಸಾರವಾಗಲಿದೆ. ಕಿಚ್ಚನ ಪಂಚಾಯ್ತಿಯಲ್ಲಿ ಸ್ಪರ್ಧಿಗಳ ನಡೆ ಮತ್ತು ನಡೆದ ಘಟನೆಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಈ ವಾರವೂ ಮನೆಯಲ್ಲಿ ಹಲವು ಬೆಳವಣಿಗೆಗಳು ಗಮನ ಸೆಳೆದಿವೆ.

ಈ ವಾರ ಸ್ಪರ್ಧಿಗಳಲ್ಲಿ ಪ್ರಮುಖ ಘಟನೆಗಳಲ್ಲಿ, ಜಾನ್ವಿ ಎರಡು ತಪ್ಪುಗಳನ್ನು ಮಾಡಿದ್ದಾರೆ. ಎಲ್ಲರಿಗೂ ಹಾಲು ಹಂಚಬೇಕು ಎಂದು ಇದ್ದರೂ ಕೆಲವನ್ನು ತೆಗೆದುಕೊಂಡಿದ್ದಾರೆ. ಇದರ ಜೊತೆಗೆ ಕಲರ್ಸ್ ಚಾನೆಲ್ ಸ್ಪರ್ಧಿಗಳನ್ನು ಉಳಿಸುತ್ತಾರೆ ಎಂದು ತಪ್ಪಾಗಿ ಹೇಳಿದ್ದರಿಂದ ಸಣ್ಣ ವಿವಾದ ಉಂಟಾಗಿದೆ. ಇದೊಂದು ಗಂಭೀರ ವಿಷಯವಾಗಿದೆ ಮತ್ತು ಸುದೀಪ್ ಈ ವಿಚಾರವನ್ನು ವಿಶೇಷವಾಗಿ ಚರ್ಚಿಸುವ ಸಾಧ್ಯತೆ ಇದೆ.

ಇನ್ನೊಂದು ಚರ್ಚೆಗೆ ಕಾರಣವಾಗಿರುವ ವಿಷಯವೆಂದರೆ ಧ್ರುವಂತ್, ರಕ್ಷಿತಾ ಅವರನ್ನು ಹಲವಾರು ಬಾರಿ ಹೀಯಾಳಿಸಿ ಮಾತನಾಡಿದ್ದಾರೆ. ಅಲ್ಲದೆ, ಹುಡುಗಿಯರ ಬಗ್ಗೆ ಮಾಡಿದ ಕೆಲ ಕಾಮೆಂಟ್‌ಗಳು ವಿವಾದಾಸ್ಪದವಾಗಿವೆ. ಮನೆಯವರಲ್ಲಿ ಈ ವರ್ತನೆಗೆ ವಿರೋಧ ವ್ಯಕ್ತವಾಗಿದೆ. ಚೇಂಜಿಂಗ್ ರೂಮ್‌ನಲ್ಲಿ ಮೈಕ್ ಇಲ್ಲದೆ ಕೆಲವು ವಿಷಯಗಳನ್ನು ಜಾನ್ವಿ ಜೊತೆ ಮಾತನಾಡಿದ್ದ ಎಂದು ಅಶ್ವಿನಿ ಹೇಳಿಕೊಂಡಿದ್ದಾರೆ. ಈ ವಿಷಯವೂ ಸುದೀಪ್ ಚರ್ಚೆ ಮಾಡಲು ಮುಂದು ಬಂದಂತಹದ್ದು. ಅಲ್ಲದೆ, ಕಳಪೆ ಹಾಗೂ ಉತ್ತಮ ನಿರ್ಧಾರ ನೀಡುವ ಪ್ರಕ್ರಿಯೆಯಲ್ಲಿ, ಅಶ್ವಿನಿ ಗೌಡ, ಸುಧಿ ಮೊದಲಾದವರು ಮಾತು ಹೇಳಿ ತೀರ್ಮಾನ ತೆಗೆದುಕೊಂಡಿದ್ದು, ಮನೆದಾರರಲ್ಲಿ ಚರ್ಚೆ ಹುಟ್ಟಿಸಿದೆ.

ಈ ನಡುವೆ, ರಕ್ಷಿತಾ ಶೆಟ್ಟಿ ಗಿಲ್ಲಿಯ ಪ್ರಭಾವದಿಂದ ಆಟದಲ್ಲಿ ತಪ್ಪು ಮಾಡಿದ ವಿಷಯ ಹಾಗೂ ಪಿಸು ಧ್ವನಿಯಲ್ಲಿ ಮಾತು ನಡೆಸಿರುವ ಪ್ರಕರಣ ಕೂಡ ಗಮನ ಸೆಳೆಯುತ್ತಿದೆ. ಗಿಲ್ಲಿ ವೈಯ್ಸ್ ಕ್ಯಾಪ್ಟನ್ ಎಂದುಕೊಂಡು ಕ್ಯಾಪ್ಟನ್ ರೂಂ ಒಳಗೆ ಹೋಗುವ ಕೆಲಸ ಮಾಡುತ್ತಿದ್ದರೂ, ಇತರರು ಒಳಗೆ ಹೋಗುವಂತಿಲ್ಲ. ಈ ಕಾರಣಕ್ಕೂ ಕೆಲವು ಗೊಂದಲಗಳು ಮನೆಯವರಲ್ಲಿ ಸೃಷ್ಟಿಯಾಗಿವೆ.

ಸುದೀಪ್ ಈ ವಾರಾಂತ್ಯ ಎಪಿಸೋಡ್‌ನಲ್ಲಿ, ಈ ಎಲ್ಲಾ ಘಟನೆಗಳನ್ನು ವಿವರವಾಗಿ ವಿಶ್ಲೇಷಿಸಿ, ಸ್ಪರ್ಧಿಗಳಿಗೆ ಪಾಠ ನೀಡಲಿದ್ದಾರೆ. ಮನೆಯಲ್ಲಿ ನಡೆದ ನಡತೆ, ತಪ್ಪುಗಳು ಮತ್ತು ನಿಯಮ ಉಲ್ಲಂಘನೆಗಳ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಸ್ಪರ್ಧಿಗಳಿಗೂ ಹೇಗೆ ಕ್ಲಾಸ್‌ ತೆಗೆದುಕೊಳ್ಳುತ್ತಾರೆಂದು ವೀಕ್ಷಕರು ಕಾದು ಕುಳಿತಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss