ಕರ್ನಾಟಕ ಟಿವಿ : ಹಣಕಾಸಿನ ಸಮಸ್ಯೆ ಹಿನ್ನೆಲೆ ಆಂಧ್ರಪ್ರದೇಶ ಸರ್ಕಾರ ತಿರುಮಲ ತಿರುಪತಿ ದೇವಸ್ಥಾನಕ್ಕೆ ಸೇರಿದ್ದ ಜಾಗಗಳನ್ನ ಮಾರಾಟ ಮಾಡಿ ಹಣ ಸಂಗ್ರಹಿಸಲು ಮುಂದಾಗಿತ್ತು.. ವಿಪಕ್ಷಗಳು ಹಾಗೂ ಹಿಮದೂ ಧರ್ಮದ ಮುಖಂಡರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ಮುಖ್ಯಮಂತ್ರಿ ಜಗನ್ ತಮ್ಮ ನಿರ್ಧಾರಂದಿಂದ ಹಿಂದೆ ಸರಿದಿದ್ದಾರೆ.. ಆಂಧ್ರ, ತಮಿಳುನಾಡು, ಋಷಿಕೇಶದಲ್ಲಿ ಟಿಟಿಡಿಯ ಆಸ್ತಿ ಇದ್ದು ಅದನ್ನ ಹರಾಜು ಹಾಕಲು ಆಂಧ್ರ ಸರ್ಕಾರ ಮುಂದಾಗಿತ್ತು.. ಜಗನ್ ಮೂಲತಹ ಕ್ರಿಶ್ಚಿಯನ್ನ ಧರ್ಮಕ್ಕೆ ಸೇರಿದ್ದು ಹಿಂದೂ ಧರ್ಮವನ್ನ ಟಾರ್ಗೆಟ್ ಮಾಡ್ತಿದ್ದಾರೆ ಅಂತ ಚಂದ್ರಬಾಬು ನಾಯ್ಡು ಪವನ್ ಕಲ್ಯಾಣ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ರು.. ಈ ಹಿನ್ನೆಲೆ ರಾಜಕೀಯವಾಗಿ ಮುಂದೆ ಹಿನ್ನಡೆ ಸಂಭವಿಸಬಹುದು ಎಂದು ಜಗನ್ ನಿರ್ಧಾರ ಬದಲಿಸಿದ್ದಾರೆ ಎನ್ನಲಾಗ್ತಿದೆ.
ಇನ್ನು ಟಿಟಿಡಿ ಒಂದೇ ದಿನದಲ್ಲಿ 2 ಲಕ್ಷ 40 ಸಾವಿರ ಲಡ್ಡು ಮಾರಾಟ ಮಾಡಿದೆ. ಜನ ತಿರುಪತಿಗೆ ಬರ್ತಿಗೆ ಹೇಗೆ ಸಾಧ್ಯ ಅಂತೀರಾ..? ಟಿಟಿಡಿ 12 ಜಿಲ್ಲಾ ಕೇಂದ್ರಗಳಲ್ಲಿ ಲಡ್ಡು ಮಾರಾಟ ಮಾಡಲು ವ್ಯವಸ್ಥೆ ಮಾಡಿದ್ದು ಭಕ್ತರು ಕೊರೊನಾ ನಡುವೆಯೂ 2.40 ಲಕ್ ಲಡ್ಡು ಮಾರಾಟ ಮಾಡಿದೆ. ಗುಂಟೂರಿನಲ್ಲಿ ಕೊರೊನಾ ಹಿನ್ನೆಲೆ ಲಡ್ಡು ಮಾರಾಟಕ್ಕೆ ಅವಕಾಶ ಕೊಟ್ಟಿಲ್ಲ.
ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ, ಬೆಂಗಳೂರು