Web Story: ನೀವು ಆರ್ಮಿ, ಏರ್‌ಫೋರ್ಸ್, ನೇವಿ ಅವರು ಸೆಲ್ಯೂಟ್ ಮಾಡುವ ರೀತಿಯನ್ನು ನೋಡಿರಬಹುದು. ಅವರ ಸೆಲ್ಯೂಟ್ ಬೇರೆ ಬೇರೆ ರೀತಿಯಲ್ಲಿರುತ್ತದೆ. ಹಾಗಾದ್ರೆ ಈ ಬೇರೆ ಬೇರೆ ಸೆಲ್ಯೂಟ್ ಅರ್ಥವೇನು ಅಂತಾ ತಿಳಿಯೋಣ ಬನ್ನಿ..
ಆರ್ಮಿ ಸೆಲ್ಯೂಟ್: ಆರ್ಮಿಯ ಸೆಲ್ಯೂಟ್ ಸ್ಟ್ರೇಟ್ ಆಗಿರುತ್ತದೆ. ಅಂದ್ರೆ ನಾವು ಯಾವುದೇ ಶಸ್ತ್ರವನ್ನು ಹಿಡಿದಿಲ್ಲ, ನಿಶಸ್ತ್ರವಾಗಿದ್ದೇವೆ ಎಂದರ್ಥ. ಈ ಸೆಲ್ಯೂಟ್‌ನ್ನು ನಾನು ನಿಮಗೆ ಸಮರ್ಪಿಸುತ್ತೇನೆ. ನಿಮಗೆ ಗೌರವಿಸುತ್ತೇನೆ ಎಂದರ್ಥ.
ನೇವಿ ಸೆಲ್ಯೂಟ್: ನೇವಿ ಸೆಲ್ಯೂಟ್ ಅಂದ್ರೆ, ನೇವಿಯವರು ಶಿಪ್ ಮತ್ತು ಸಬ್‌ಮರಿನ್‌ನಲ್ಲಿ ಕೆಲಸ ಮಾಡುತ್ತಾರೆ. ಮಷಿನ್‌ನಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ಬಿಳಿ ವಸ್ತ್ರ ಧರಿಸಿ, ಕೆಲಸ ಮಾಡಬೇಕಾಗುತ್ತದೆ. ಗ್ರೀಸ್ ಬಳಸಿ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಕೈ ಗಲೀಜಾಗಿರುತ್ತದೆ. ಗ್ರೀಸ್ ಕಲೆ ಇರುತ್ತದೆ. ಹಾಗಾಗಿ ಆ ಕಲೆ ಯಾರಿಗೂ ಕಾಣದಿರಲಿ ಎಂದು ನೇವಿಯವರು ಕೈ ಅಡ್ಡ ಹಿಡಿದು ಸೆಲ್ಯೂಟ್ ಮಾಡುತ್ತಾರೆ.
ಏರ್ಫೋರ್ಸ್ ಸೆಲ್ಯೂಟ್: ಏರ್ಫೋರ್ಸ್ ಸೆಲ್ಯೂಟ್ ನಲ್ಲಿ ಹೆಬ್ಬೆರಳು ಮಡಿಚಿರುತ್ತದೆ. ಉಳಿದ ಬೆರಳು ಆಕಾಶದೆಡೆಗೆ ನೇರವಾಗಿರುತ್ತದೆ. ಅಂದ್ರೆ, ಅದು ಪ್ಲೇನ್ ರೀತಿ ಕಾಣುತ್ತದೆ. ಅಂದ್ರೆ ನಾವು ಏರ್‌ಫೋರ್ಸ್‌ನವರು ಹಾರುತ್ತೇವೆ ಎಂದರ್ಥ.




