Thursday, May 30, 2024

Latest Posts

ಧೃತರಾಷ್ಟ್ರನೇಕೆ ಕುರುಡನಾಗಿ ಹುಟ್ಟಿದ..?

- Advertisement -

ಮಹಾಭಾರತದಲ್ಲಿ ಬರುವ ಧೃತರಾಷ್ಟ್ರ ಹುಟ್ಟು ಕುರುಡನಾಗಿದ್ದ. ಯಾಕೆ ಆತ ಕುರುಡನಾದ..? ಇದು ಯಾರ ಶಾಪ..? ಯಾಕಾಗಿ ಧೃತರಾಷ್ಟ್ರನಿಗೆ ಶಾಪ ಹಾಕಲಾಯಿತು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..

ಮಹಾಭಾರತದಲ್ಲಿ ಬರುವ ಮೊದಲ ರಾಜನಾದ ಶಂತನುವಿಗೆ ಸತ್ಯವತಿ ಎಂಬ ಪತ್ನಿ ಇದ್ದಳು. ಅವರಿಗೆ ಇಬ್ಬರು ಮಕ್ಕಳಿದ್ದರು, ಅವರ ಹೆಸರು ವಿಚಿತ್ರವೀರ್ಯ ಮತ್ತು ಚಿತ್ರಾಂಗದ. ಯುದ್ಧದಲ್ಲಿ ಹೋರಾಡುತ್ತ, ಚಿತ್ರಾಂಗದ ಪ್ರಾಣ ತ್ಯಾಗ ಮಾಡಿದ. ಆಗ ಭೀಷ್ಮ ಪಿತಾಮಹ, ಕಾಶಿ ನರೇಶನ ಪುತ್ರಿಯರಾದ ಅಂಬಿಕೆ ಮತ್ತು ಅಂಬಾಲಿಕೆಯೊಂದಿಗೆ, ವಿಚಿತ್ರ ವೀರ್ಯನ ವಿವಾಹ ಮಾಡಿಸಿದರು. ಆದರೆ ವಿಚಿತ್ರ ವೀರ್ಯ ಕೆಲ ದಿನಗಳಲ್ಲೇ ರೋಗಗ್ರಸ್ತನಾಗಿ ಪ್ರಾಣ ಬಿಟ್ಟ.

ಅಂಬಿಕೆ ಮತ್ತು ಅಂಬಾಲಿಕೆಗೆ ಮಕ್ಕಳಿರಲಿಲ್ಲ. ಹೀಗಾಗಿ ಸತ್ಯವತಿ ವಂಶಾಭಿವೃದ್ಧಿಗಾಗಿ ಮಹರ್ಷಿ ವೇದ ವ್ಯಾಸರನ್ನ ಕರೆಸಿ, ಕಷ್ಟವನ್ನು ಹೇಳಿಕೊಂಡರು. ಆಗ ಮಹರ್ಷಿಗಳು, ನನ್ನ ದಿವ್ಯ ಶಕ್ತಿಯಿಂದ ಇಬ್ಬರಿಗೂ ಪುತ್ರ ಪ್ರಾಪ್ತಿ ಮಾಡುತ್ತೇನೆಂದು ಹೇಳಿದರು. ಮಹರ್ಷಿಗಳ ದಿವ್ಯ ಶಕ್ತಿಯನ್ನು ತಾಳರಾದರೇ ಅಂಬಿಕಾ ಕಣ್ಣು ಮುಚ್ಚಿದಳು. ಹೀಗಾಗಿ ಅಂಬಿಕಾಳಿಗೆ ಹುಟ್ಟಿದ ಪುತ್ರ ಕುರುಡನಾದ. ಅವನೇ ಧೃತರಾಷ್ಟ್ರ.

ಇಷ್ಟೇ ಅಲ್ಲದೇ, ಧೃತರಾಷ್ಟ್ರನಿಗೆ ಪೂರ್ವ ಜನ್ಮದಲ್ಲಿ ಶಾಪ ಸಿಕ್ಕ ಕಾರಣ, ಆತ ಕುರುಡನಾಗಿ ಜನಿಸಿದ್ದ. ಕಳೆದ ಜನ್ಮದಲ್ಲಿ ಧೃತರಾಷ್ಟ್ರ, ದುಷ್ಟ ರಾಜನಾಗಿದ್ದ. ಅವನಲ್ಲಿ ಕ್ರೂರತ್ವ ತುಂಬಿತ್ತು. ಅವನು ಒಮ್ಮೆ ಸಾನಿಕರೊಂದಿಗೆ ಬೇಟೆಗೆ ಹೋದಾಗ, ಕೊಳದಲ್ಲಿ ಒಂದು ಹೆಣ್ಣು ಮತ್ತು ಒಂದು ಗಂಡು ಬಾತುಕೋಳಿ ತಮ್ಮ ಮಕ್ಕಳೊಂದಿಗೆ ಆಟವಾಡುತ್ತಿತ್ತು. ಆಗ ಕ್ರೂರ ರಾಜ, ಸೈನಿಕರನ್ನು ಕುರಿತು, ಆ ಚಿಕ್ಕ ಬಾತುಕೋಳಿಗಳ ಕಣ್ಣು ಕಿತ್ತು ತೆಗೆದುಕೊಂಡು ಬನ್ನಿ, ಮತ್ತು ಅವುಗಳನ್ನು ಕೊಂದು ಬಿಡಿ ಎಂದು ಆಜ್ಞೆ ಮಾಡಿದ. 

ರಾಜ ಹೇಳಿದಂತೆ ಸೈನಿಕರು ಮಾಡಿದರು. ಆಗ ತಾಯಿ ಬಾತುಕೋಳಿಗೆ ಕೋಪ ಬಂತು. ದುಃಖವಾಯಿತು. ಅದು ರಾಜನನ್ನು ಕುರಿತು, ನಿನ್ನ ಈ ಕ್ರೂರತ್ವಕ್ಕೆ ಮುಂದಿನ ಜನ್ಮದಲ್ಲಿ ನೀನೂ ಇದೇ ರೀತಿ ಮಕ್ಕಳಿಂದ ದೂರವಾಗು. ನನ್ನ ಮಕ್ಕಳ ಕಣ್ಣು ಕಿತ್ತಿದ್ದಕ್ಕೆ, ಮುಂದಿನ ಜನ್ಮದಲ್ಲಿ ನೀನೂ ಕೂಡ ಕುರುಡನಾಗಿ ಜನಿಸು ಎಂದು ಶಾಪ ಕೊಟ್ಟಿತು. ಅದಕ್ಕಾಗಿಯೇ ಧೃತರಾಷ್ಟ್ರ ಕುರುಡನಾಗಿ ಜನಿಸಿದ.

- Advertisement -

Latest Posts

Don't Miss