Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ“ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ ವಿವರಿಸಿದ್ದಾರೆ ನೋಡಿ.
ಈ ಬಗ್ಗೆ ಮಾತನಾಡಿರುವ ರೂಪಾ ಅಯ್ಯರ್, ನಾನು ನಿರ್ದೇಶಕಿಯಾಗಿ ಬೆರಳೆಣಿಕೆಯಷ್ಟು ಸಿನಿಮಾ ಮಾಡಿದ್ದೀನಿ. ಏಕೆಂದರೆ, ನಾನು ಸಿನಿಮಾವನ್ನೇ ಜೀವನ ಮಾಡಿಕ“ಂಡಿಲ್ಲ. ಬೇರೆ ಬೇರೆ ಕೆಲಸಗಳಲ್ಲಿ ನಾನು ಭಾಗಿಯಾಗಿರುವ ಕಾರಣ, ಬರೀ ಸಿನಿಮಾ ಕಡೆಗೇ ನಾನು ಗಮನ ನೀಡಲಾಗುವುದಿಲ್ಲ. ಹಾಗಾಗಿ ಕೆಲವೇ ಕೆಲವು ಸಿನಿಮಾಗಳನ್ನು ನಾನು ನಿರ್ದೇಶಿಸಿದ್ದೇನೆ ಎಂದಿದ್ದಾರೆ ರೂಪಾ ಅಯ್ಯರ್.
ಈ ಮುನ್ನ ರೂಪಾ ಅವರು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಭಾರತಕ್ಕೆ ಬಂದು ನಮ್ಮ ಮನೆ ಅನ್ನೋ ಟ್ರಸ್ಟ್ ಸ್ಥಾಪಿಸಿದ್ದಾರೆ. ವಿಶೇಷ ಚೇತನ ಮಕ್ಕಳನ್ನು ಬೆಂಬಲಿಸುವ ಸಲುವಾಗಿ ಈ ಟ್ರಸ್ಟ್ ಸ್ಥಾಾಪಿಸಲಾಗಿದೆ. ಭರತನಾಟ್ಯ ಕಲಾವಿದೆಯಾಗಿರುವ ರೂಪಾ ಅವರು ಆ ಕಾಲಕ್ಕೆ ಮಾಡೆಲಿಂಗ್ ಮಾಡ್ತಿದ್ರು. ಫ್ಯಾಷನ್ ಶೋ ಮಾಡ್ತಿದ್ರು. ಹೀಗೆ ಹಲವು ಟ್ಯಾಲೆಂಟ್ ಇರುವ ರೂಪಾ ಅವರು ಆಧ್ಯಾತ್ಮಿಕ ಚಿಂತಕರು ಹೌದು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




