Wednesday, December 3, 2025

Latest Posts

‘ಸಿದ್ದರಾಮಯ್ಯ CM ಸ್ಥಾನ ಬಿಡೋದು ಪಕ್ಕಾ’: ಸತೀಶ್ ಜಾರಕಿಹೊಳಿ!

- Advertisement -

ಏಕಾಏಕಿ ಸಿದ್ದರಾಮಯ್ಯನವರಿಗೆ ವೈರಾಗ್ಯದ ಮಾತುಗಳು ಆರಂಭವಾಗಿದೆ. ರಾಜಕೀಯ ಏನು ನಮ್ಮ ಅಪ್ಪನ ಆಸ್ತಿನಾ? ರಾಜಕಾರಣ, ಅಧಿಕಾರ ಶಾಶ್ವತವಾ? ಅಂತ ವೈರಾಗ್ಯದ ಮಾತುಗಳನ್ನಾಡಿದ್ದು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದು ಸರಿಯಾಗಿದೆ. ಒಂದೇ ಪಕ್ಷದಲ್ಲಿದ್ದೇವೆ. ಇದೆಲ್ಲ ಸ್ವಾಭಾವಿಕ. ಇಲ್ಲಿ ಯಾರು ಕೂಡ ಶಾಶ್ವತವಲ್ಲ. 30 ತಿಂಗಳ ನಂತರ ಬಿಡಬೋದು ಇಲ್ಲ, 30 ತಿಂಗಳ ಮೊದಲೇ ಬಿಡಬೋದು. ಸಿಎಂ ಸ್ಥಾನ ಬಿಡೋದು ಪಕ್ಕ. ಯಾವತ್ತಾರ್ದ್ರು ಬಿಡ್ಲೇಬೇಕು. ಈ ಅವಧಿಗೂ ಬಿಡಬಹುದು ಗೊತ್ತಿಲ್ಲ. ಎಲ್ಲ ಹೈಕಮ್ಯಾಂಡ ಮೇಲೆ ಅವಲಂಬನೆಯಾಗಿದೆ.

ಹೈಕಮ್ಯಾಂಡ್ ಬಗ್ಗೆ ನಮ್ಮನ್ನ ಕೇಳಿದ್ರೆ ಆಗಲ್ಲ. ಒಂದ್ ಸರಿ ಆದ್ರೂ 10 ಸರಿ ಆದ್ರೂ ಬಿಡ್ಲೇಬೇಕು ಅಂದ್ರೆ ಬಿಡ್ಲೇಬೇಕು. ಅದು ಯಾವಾಗ ಅಂತ ಹೈಕಮ್ಯಾಂಡ್ ಗೆ ಗೊತ್ತು, ವರಿಷ್ಠರಿಗೆ ಗೊತ್ತು. ಅವ್ರು ಯಾವಾಗ ಹೇಳ್ತಾರೋ ಆಗ್ಲೇ ಗೊತ್ತಾಗೋದು. ಎಲ್ಲ ಕಾರ್ಯಕರ್ತರು, ಶಾಸಕರು ಕಕ್ಷದಲ್ಲಿ ಒಳ್ಳೆ ವಾತಾವರಣ ಇರಬೇಕು ಅಂತ ಬಯಸುತ್ತಾರೆ. ನೋಡೋಣ ಅಷ್ಟೇ ಎಂದಿದ್ದಾರೆ.

ಮಂಗಳೂರಿನಲ್ಲಿ ಕಾರ್ಯಕ್ರಮ ಇದೆ. ಅಲ್ಲಿ ರಾಜ್ಯ ರಾಜಕೀಯದ ಬಗ್ಗೆ ಚರ್ಚೆಯಾಗತ್ತಾ ಅನ್ನೋ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ ಅದು ರಾಜಕೀಯ ಅಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ಅಷ್ಟೇ. ರಾಜಕೀಯ ಚರ್ಚೆ ನನಗೆ ಗೊತ್ತಿಲ್ಲ. ಕಾರ್ಯಕ್ರಮಕ್ಕೆ ಹೋಗುವುದು ಮಾತ್ರ ನಮ್ಮ ಉದ್ದೇಶ ಎಂದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss