ಸುದೀಪ್ ಅವರಿಗೆ ಇತ್ತೀಚೆಗೆ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿತ್ತು. ಆದರೆ, ಸುದೀಪ್ ಅವರು ಅಷ್ಟೇ ನಯವಾಗಿ ಅದನ್ನು ಬೇಡ ಅಂದಿದ್ದರು. ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ ಸುದೀಪ್. ಹೌದು, ತುಮಕೂರು ವಿವಿ ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿದ ಬಳಿಕ ಸುದೀಪ್ ಅದನ್ನು ಒಲ್ಲೆ ಎಂದಿದ್ದರು. ಸಹಜವಾಗಿಯೇ ಎಲ್ಲರಿಗೂ ಅವರ ಆ ನಡೆ ಇಷ್ಟವಾಗಿತ್ತು. ಅಭಿಮಾನಿಗಳೂ ಸಹ ಸುದೀಪ್ ಅವರ ನಡೆಯನ್ನು ಬೆಂಬಲಿಸಿದ್ದರು. ಈ ಕುರಿತಂತೆ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಸ್ಪಷ್ಟನೆ ನೀಡಿದ್ದು ಇಷ್ಟು.
ನಾನಿನ್ನು ಏನೂ ಮಾಡಿಲ್ಲ. ಒಂದಷ್ಟು ಸಿನಿಮಾಗಳನ್ನು ಮಾಡಿದ್ದೇನೆ ಅಷ್ಟೇ. ಲೈಫಲ್ಲಿ ನಾನು ಮಾಡೋದು ತುಂಬಾ ಇದೆ. ನಾನು ಮುಂದೆ ಏನಾದರೂ ಸಾಧನೆ ಅಂತ ಮಾಡಿದಾಗ ಮಾತ್ರ, ನಾನೇ ಪತ್ರ ಬರೆದು ಡಾಕ್ಟರೇಟ್ ಕೊಡಿ ಅಂತ ಕೇಳುತ್ತೇನೆ. ಆದರೆ, ತುಮಕೂರು ವಿವಿ ನನ್ನ ಕೆಲಸ ಗುರುತಿಸಿ ನೀಡಿರುವ ಡಾಕ್ಟರೇಟ್ ಮೇಲೆ ನಿಜವಾಗಿಯೂ ಗೌರವ ಇದೆ” ಎಂದಿದ್ದಾರೆ.
ಅದೇನೆ ಇರಲಿ, ಸುದೀಪ್ ಹಿಂದಿನಿಂದಲೂ ಅಷ್ಟೇ, ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸಲು ಮುಂದಾಗಿಲ್ಲ. ಅದನ್ನು ಅಷ್ಟೇ ಪ್ರೀತಿಯಿಂದ ನಿರಾಕರಿಸುತ್ತಾರೆ. ಹಾಗಾಗಿ, ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಹೋಗಬೇಕು ಅಂದುಕೊಂಡವರು. ಹಾಗಾಗಿ ಸುದೀಪ್ ತಮ್ಮ ಸಿನಿಮಾ ಆಯ್ತು ತಾವಾಯ್ತು ಅಂದುಕೊಂಡು ಕೆಲಸ ಮಾಡಿಕೊಂಡವರು.