Health tips: ಮುಂಚೆ ಎಲ್ಲಾ ಬರೀ ವಯಸ್ಸಾದವರಿಗೆ ಮಾತ್ರ ಬಿಪಿ, ಶುಗರ್ ಬರುತ್ತಿತ್ತು. ಇದೀಗ ಚಿಕ್ಕಂದಿನಲ್ಲೇ ಬಿಪಿ, ಶುಗರ್ ಲಗ್ಗೆ ಇಡುತ್ತಿದೆ. ಶಾಲೆಗೆ ಹೋಗುವ ಮಕ್ಕಳಿಗೂ ಬಿಪಿ, ಶುಗರ್ ಬರುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮ ಜೀವನ ಶೈಲಿ ಮತ್ತು ನಾವು ಸೇವಿಸುವ ಆಹಾರ. ಇನ್ನು ಬಿಪಿ ಬಂದವರು ಮಾತ್ರೆ ಸೇವಿಸಿ ಸೇವಿಸಿ ಸುಸ್ತಾಗಿ, ತಮ್ಮಷ್ಟಕ್ಕೆ ತಾವೇ ಬಿಪಿ ಮಾತ್ರ ಸೇವಿಸುವುದನ್ನು ಬಿಡುವ ನಿರ್ಧಾರ ಮಾಡುತ್ತಾರೆ. ಹಾಗಾದ್ರೆ ಇದು ತಪ್ಪಾ..? ಸರಿಯಾ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಬಿಪಿ ಮಾತ್ರೆ ಸೇವಿಸುತ್ತಿದ್ದಲ್ಲಿ, ನೀವು ವೈದ್ಯರ ಸಲಹೆ ಇಲ್ಲದೇ, ಮಾತ್ರೆ ಸೇವನೆ ಬಿಡಬಾರದು. ಹೀಗೆ ಮಾಡುವುದರಿಂದ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಮಾತ್ರೆ ಸೇವನೆ ಬಿಡುವ ಮುನ್ನ ವೈದ್ಯರ ಬಳಿ ವಿಚಾರಿಸುವುದು ಉತ್ತಮ.
ಬಿಪಿ ಅದೆಷ್ಟರ ಮಟ್ಟಿಗೆ ಕೆಟ್ಟದ್ದು ಎಂದರೆ, ಬಿಪಿ ನಿಯಂತ್ರಣ ತಪ್ಪಿದರೆ, ನಿಮ್ಮ ಕಿಡ್ನಿ, ಹೃದಯ ಸೇರಿ ದೇಹದ ಮುಖ್ಯ ಭಾಗಗಳಿಗೆ ಸಮಸ್ಯೆ ತರುತ್ತದೆ. ಪ್ರಾಣಹಾನಿ ಮಾಡುವ ಎಲ್ಲ ಸಾಧ್ಯತೆಗಳಿದೆ. ಹಾಗಾಗಿ ಬಿಪಿಯನ್ನು ಎಂದಿಗೂ ನಿರ್ಲಕ್ಷಿಸಬೇಡಿ.
ಯಾವುದೇ ಮಾತ್ರೆಗಳನ್ನು ಸಡನ್ ಆಗಿ ನಿಲ್ಲಿಸಬಾರದು. ಬದಲಾಗಿ ಅದರ ಡೋಸೇಜ್ ಕಡಿಮೆ ಮಾಡಬೇಕು. ಕ್ರಮೇಣ ವೈದ್ಯರ ಸಲಹೆ ಪಡೆದು, ನಿಲ್ಲಿಸಬೇಕು. ಸಡನ್ ಆಗಿ ಮಾತ್ರೆ ನಿಲ್ಲಿಸಿದರೆ, ದೇಹದಲ್ಲಿ ಅಡ್ಡಪರಿಣಾಮವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.