ಇಂದಿನ ಡಿಜಿಟಲ್ ಯುಗದಲ್ಲಿ ಫೋನ್ ಮತ್ತು ಲ್ಯಾಪ್ಟಾಪ್ಗಳನ್ನು ಗಂಟೆಗಟ್ಟಲೆ ಬಳಸುವುದು ಸಾಮಾನ್ಯ. ಆದರೆ ದೀರ್ಘಕಾಲ ಬಳಕೆಯಿಂದ ಸಿಸ್ಟಮ್ಸ್ ಸ್ಲೋ ಆಗೋದು, ಅಪ್ಲಿಕೇಶನ್ಗಳು ಕ್ರ್ಯಾಶ್ ಆಗುವುದು ಮತ್ತು ಕೆಲವೊಮ್ಮೆ safty ಅಪಾಯ ಸಾಧ್ಯವಾಗುತ್ತದೆ. ತಜ್ಞರ ಪ್ರಕಾರ, ಈ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ನಿಯಮಿತವಾಗಿ ರಿ ಸ್ಟಾರ್ಟ್ ಮಾಡುವುದು ಅತ್ಯಂತ ಮುಖ್ಯ.
ಫೋನ್ ಮತ್ತು ಲ್ಯಾಪ್ಟಾಪ್ಗಳನ್ನು ದೀರ್ಘಕಾಲದವರೆಗೆ ಆನ್ ಇಟ್ಟಾಗ RAM ನಲ್ಲಿ ತಾತ್ಕಾಲಿಕ ಫೈಲ್ಗಳು ತುಂಬಿಕೊಳ್ಳುತ್ತವೆ. ಹಿನ್ನೆಲೆಯಲ್ಲಿ ಕೆಲಸ ಮಾಡುವ ಅನೇಕ ಅಪ್ಲಿಕೇಶನ್ಗಳು ಸಾಧನದ ಮೇಲೆ ಹೆಚ್ಚುವರಿ ಹೊರೆಯನ್ನು ಹಾಕುತ್ತವೆ. ಇವು ನಿಮ್ಮ ಫೋನ್ ಅಥವಾ ಲ್ಯಾಪ್ಟಾಪ್ನ ವೇಗವನ್ನು ನಿಧಾನಗೊಳಿಸುತ್ತವೆ. ರಿ ಸ್ಟಾರ್ಟ್ ಮಾಡಿದಾಗ ಈ ತಾತ್ಕಾಲಿಕ ಫೈಲ್ಗಳು ಮತ್ತು ಅನಗತ್ಯ ಪ್ರಕ್ರಿಯೆಗಳು ಮುಚ್ಚಲ್ಪಟ್ಟು, RAM ಕ್ಲೀನ್ ಆಗುತ್ತೆ …
ರಿ ಸ್ಟಾರ್ಟ್ ಮಾಡುವುದರಿಂದ ಸಾಧನಕ್ಕೆ ಹೊಸ ಉಸಿರು ಸಿಗುತ್ತದೆ. ವೇಗ ಸುಧಾರಿಸುತ್ತದೆ, ಬ್ಯಾಟರಿ ಬಾಳಿಕೆ ಹೆಚ್ಚುತ್ತದೆ ಮತ್ತು ಬಳಕೆ ಇನ್ನಷ್ಟು ಸುಗಮವಾಗುತ್ತದೆ. ಜೊತೆಗೆ, ಕೆಲವು ಅಪ್ಡೇಟ್ಗಳು ಮತ್ತು ಭದ್ರತಾ ಪ್ಯಾಚ್ಗಳು ಸಂಪೂರ್ಣವಾಗಿ ಅನ್ವಯಿಸಬೇಕಾದರೆ ಮರುಪ್ರಾರಂಭ ಅವಶ್ಯಕ. ಇದರಿಂದ ಸಾಧನಕ್ಕೆ ಹೆಚ್ಚುವರಿ ಭದ್ರತೆ ದೊರೆಯುತ್ತದೆ…
ಸ್ಮಾರ್ಟ್ಫೋನ್ ಅನ್ನು ವಾರಕ್ಕೆ ಒಮ್ಮೆ ಮತ್ತು ಲ್ಯಾಪ್ಟಾಪ್ ಅನ್ನು 3-4 ದಿನಗಳಿಗೆ ಒಮ್ಮೆ ಮರುಪ್ರಾರಂಭಿಸುವ ಸರಳ ಅಭ್ಯಾಸ ಸಾಧನದ ಜೀವನಾವಧಿ, ವೇಗ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತದೆ. ದಿನನಿತ್ಯದ ಸಣ್ಣ ರಿ ಸ್ಟಾರ್ಟ್ ಅಭ್ಯಾಸವು ನಿಮ್ಮ ಸಾಧನವನ್ನು ಹೆಚ್ಚು ಕಾಲ ಸಮರ್ಥವಾಗಿ ಕೆಲಸ ಮಾಡುವಂತೆ ಮಾಡುತ್ತದೆ…
ವರದಿ : ಗಾಯತ್ರಿ ನಾಗರಾಜ್




