ರಾಜಸ್ತಾನದ ಜೈಪುರನ್ನು ಪಿಂಕ್ ಸಿಟಿ ಎಂದು ಜೋಧ್ಪುರವನ್ನು ಬ್ಲ್ಯೂ ಸಿಟಿ ಅಂತಾ ಕರೆಯಲು ಕಾರಣವೇನು..?

Rajasthan: ಇಡೀ ದೇಶದಲ್ಲಿ ನೀವೆಲ್ಲೇ ಹೋದರು ನಿಮಗೆ ಎಲ್ಲ ನಗರಗಳಲ್ಲಿಯೂ ಬಣ್ಣ ಬಣ್ಣದ ಮನೆಗಳು ಕಾಣ ಸಿಗುತ್ತದೆ. ಆದರೆ ರಾಜಸ್ತಾನದ ಜೈಪುರ್‌ನಲ್ಲಿ ಮಾತ್ರ, ಎಲ್ಲ ಮನೆಗಳ, ಅಂಗಡಿಗಳ ಬಣ್ಣ ಗುಲಾಬಿಯೇ ಆಗಿದೆ. ಹಾಗಾದ್ರೆ ಯಾಕೆ ಇಡೀ ನಗರಕ್ಕೆ ಗುಲಾಬಿ ಬಣ್ಣದಿಂದ ಶೃಂಗರಿಸಿದ್ದು..? ಯಾಕೆ ಈ ನಗರವನ್ನು ಗುಲಾಬಿ ಬಣ್ಣದ ನಗರವೆಂದು ಕರೆಯುತ್ತಾರೆ ಅಂತಾ ತಿಳಿಯೋಣ ಬನ್ನಿ..

1876ರಲ್ಲಿ ಬ್ರಿಟನ್‌ನ ಪ್ರಿನ್ಸ್ ಆಫ್ ವೆಲ್ಸ್ ಭಾರತಕ್ಕೆ ಬರುವವರಿದ್ದರು. ಹಾಗಾಗಿ ಜೈಪುರದ ಮಹಾರಾಜ ಸವಾಯಿ ರಾಮ್‌ ಸಿಂಗ್ ಎಂಬುವವರು ಅವರನ್ನು ಸ್ವಾಗತಿಸಲು, ಇಡೀ ನಗರಕ್ಕೆ ಪಿಂಕ್ ಬಣ್ಣದ ಪೇಂಟಿಂಗ್ ಮಾಡಿಸಿದರು. ಅಂದಿನಿಂದ ಇಂದಿನವರೆಗೂ ಯಾರೂ ಗುಲಾಬಿ ಬಿಟ್ಟು ಬೇರೆ ಬಣ್ಣವನ್ನು ಬಳಸುವುದಿಲ್ಲ. ಹಾಗೆ ಬಳಸಿದರೆ, ಅದು ಆ ನಗರಕ್ಕೆ ಮಾಡುವ ಅವಮಾನವೆಂದೇ ಭಾವಿಸಲಾಗುತ್ತದೆ.

ಜೋಧ್‌ಪುರನ್ನು ಬ್ಯೂ ಸಿಟಿ ಅಂತಾ ಹೇಳೋದ್ಯಾಕೆ..?

ರಾಜಸ್ಥಾನದ ಯಾವ ಸ್ಥಳದಲ್ಲಿ ಜೋಧಪುರ ಇದೆಯೋ, ಅಲ್ಲಿ ಸಿಕ್ಕಾಪಟ್ಟೆ ಬಿಸಿಲು ಇದೆ. ಹಾಗಾಗಿ ಆ ಬಿಸಿಲಿನ ಬೇಗೆಯನ್ನು ತಡೆಯಲು ಅಲ್ಲಿನ ಜನ ಮನೆಗೆ ಸುಣ್ಣದ ಜತೆ ನೀಲಿ ಬಣ್ಣದ ಪೇಂಟಿಂಗ್ ಮಾಡಿಸುತ್ತಾರೆ. ನೀಲಿ ಬಣ್ಣ ,ಸೂರ್ಯನ ಶಾಖವನ್ನು ತಡೆಹಿಡಿದು, ತಂಪು ನೀಡುತ್ತದೆ. ಎಸಿ ರೀತಿ ತಂಪು ಸಿಗುತ್ತದೆ. ಅಲ್ಲದೇ ಕ್ರಿಮಿ ಕೀಟಗಳನ್ನು ಸಹ ದೂರವಿಡುತ್ತದೆ. ಇದರಿಂದ ಪ್ರಕೃತಿಯ ರಕ್ಷಣೆಯೂ ಆಗುತ್ತದೆ. ಈ ಕಾರಣಕ್ಕೆ ಜೋಧಪುರಕ್ಕೆ ನೀಲಿ ನಗರಿ ಎಂದು ಕರೆಯಲಾಗುತ್ತದೆ.

About The Author