Belagavi News: ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕೃಷ್ಣಾ ನದಿಗೆ ಸತೀಶ್ ಜಾರಕಿಹೊಳಿ ಭೇಟಿ ಕೊಟ್ಟು, ನದಿ ವೀಕ್ಷಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ರಕ್ಷಣಾ ತಂಡ ಕಾಳಜಿ ಕೇಂದ್ರಗಳ ಕುರಿತು ಎಲ್ಲಾ ಪರಿಶೀಲನೆ ಮುಗಿದಿದೆ. ಸದ್ಯಕ್ಕೆ ಯಾವುದೆ ಪ್ರವಾಹ ಪರಿಸ್ಥಿತಿ ಇಲ್ಲಾ. ಮುಂದೆ ಏನಾದರೂ ಸಮಸ್ಯೆಯಾದಲ್ಲಿ ಎಲ್ಲಾ ರೀತಿಯ ತಯಾರಿ ಮಾಡಲಾಗಿದೆ. ಮಹಾರಾಷ್ಟ್ರ ಬಾಗಲಕೋಟೆ ರಾಯಚೂರು ಮೂರು ಕಡೆಯ ಅಧಿಕಾರಿಗಳು ಹೊಂದಾಣಿಕೆಯಲ್ಲಿದ್ದಾರೆ.
ಇನ್ನು ಸ್ವಲ್ಪ ನೀರು ಹೆಚ್ಚಾಗಬಹುದು ಜಾಸ್ತಿ ನೀರಿಕ್ಷೆ ಯಾವುದು ಇಲ್ಲಾ. ಕಾಳಜಿ ಕೇಂದ್ರಗಳು ಇದೆ. ಜನ ಬಂದ್ರೆ ಸ್ಟಾರ್ಟ್ ಮಾಡ್ತೀವಿ. ಸಂಪೂರ್ಣ ಮನೆ ಹಾನಿಯಾದ್ರೆ 5 ಲಕ್ಷ ನೀಡಲು ಆಗಲ್ಲಾ ಮೂರು ಲಕ್ಷದ ವರೆಗೆ ನೀಡ್ತೀವಿ. ಈ ಬಾರಿ 1.5 ಲಕ್ಷ ಹಣ ಹಾಗೂ ಒಂದು ಮನೆ ಮಂಜೂರು ಮಾಡ್ತೀವಿ. ಕಳೆದ 8 ವರ್ಷಗಳಿಂದ ಸೇತುವೆ ಕಾಮಗಾರಿಗಳು ಮುಗಿದಿಲ್ಲಾ. ಈ ಬಾರಿ ಎಲ್ಲಾ ಸೇತುವೆಗಳನ್ನ ಮುಗಿಸ್ತೀವಿ. ಈ ವರ್ಷದ ಅಂತ್ಯಕ್ಕೆ ಕುಡಚಿ ಸೇತುವೆ ಕಾಮಗಾರಿ ಕೂಡ ಮುಗಿಯಲಿದೆ ಎಂದು ಸಂತೀಶ್ ಜಾರಕಿಹೊಳಿ ಹೇಳಿದ್ದಾರೆ.
ದಲಿತರ ಹಣ ದುರ್ಬಳಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ತನಿಖೆ ನಡೆಯುತ್ತಿದೆ ಆರೋಪ ಸಾಬೀತಾಗಲಿ ನೊಡುವ ಎಂದಿದ್ದಾರೆ. ಇನ್ನು ಮುಖ್ಯಮಂತ್ರಿಗಳ ರಾಜೀನಾಮೆ ವಿಚಾರದ ಬಗ್ಗೆ ಮಾತನಾಡಿರುವ ಸತೀಶ್, ಯಾರೋ ಮಾಡಿದ ತಪ್ಪಿಗೆ ಅವರು ಯಾಕೆ ರಾಜೀನಾಮೆ ನೀಡಬೇಕು. ತಪ್ಪು ಮಾಡಿದವರಿಗೆ ಈಗಾಗಲೇ ಶಿಕ್ಷೆ ಆಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.