ಭಾರತೀಯ ಸಂಪ್ರದಾಯದಲ್ಲಿ ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ಹಬ್ಬ ಹರಿದಿನ, ಹುಟ್ಟುಹಬ್ಬದ ಸಂಭ್ರಮವಿದ್ದಾಗ, ಮದುವೆ ನಿಶ್ಚಯವಾಗಾದಾಗ, ಮಗು ಹುಟ್ಟಿದಾಗ, ಇತ್ಯಾದಿ ಸಂದರ್ಭಗಳಲ್ಲಿ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಇನ್ನು ವಾರದ ಪ್ರಕಾರ ದೇವಸ್ಥಾನಕ್ಕೆ ಹೋಗುತ್ತೇವೆ. ಹಾಗಾದ್ರೆ ದೇವಸ್ಥಾನಕ್ಕೆ ಹೋಗುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ದೇವಸ್ಥಾನಕ್ಕೆ ಹೋಗುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆಯಂತೆ. ನಾವು ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಹೋಗುವುದರಿಂದ ವ್ಯಾಯಾಮವಾಗುತ್ತದೆ. ರಕ್ತ ಸಂಚಲನೆ ಸರಿಯಾಗಿರುತ್ತದೆ ಅಲ್ಲಿ ದೇವರ ಮುಂದೆ ಕುಳಿತು ಧ್ಯಾನ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಅಲ್ಲದೇ ನಾವು ಹಣೆಗೆ ಕುಂಕುಮವನ್ನು ಹಚ್ಚುವುದರಿಂದ ತಲೆನೋವು, ಒತ್ತಡ, ಮಾನಸಿಕ ಹಿಂಸೆ ಈ ರೀತಿ ಯಾವುದೇ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ.
ಇನ್ನು ಗಂಟೆ ಸದ್ದಿನಿಂದ ಇಂದ್ರೀಯಗಳ ಶಕ್ತಿ ಹೆಚ್ಚುತ್ತದೆ. ದೇವಸ್ಥಾನದಲ್ಲಿ ಆರತಿ ಬೆಳಗುತ್ತಾರೆ. ಹೋಮ ಹವನಗಳು ಕೂಡ ನಡೆಯುತ್ತದೆ. ಇದರಿಂದ ಕೀಟಾಣುಗಳೆಲ್ಲ ನಾಶಗೊಂಡು, ಸುತ್ತಮುತ್ತಲಿನ ವಾತಾವರಣ ಉತ್ತಮವಾಗಿರುತ್ತದೆ. ಇದರಿಂದ ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಾಗಿ, ದೇಹಕ್ಕೆ ಸೋಂಕು ತಗುಲುವುದು ಕಡಿಮೆಯಾಗುತ್ತದೆ.
ಈ ಎಲ್ಲ ಕಾರಣಗಳಿಂದ ದೇವಸ್ಥಾನಕ್ಕೆ ಹೋಗುವುದು ಉತ್ತಮ ಎನ್ನಲಾಗಿದೆ. ಇದು ಧಾರ್ಮಿಕವಗಿಯೂ ಮತ್ತು ವೈಜ್ಞಾನಿಕವಾಗಿಯೂ ಉತ್ತಮವೆಂದು ಪರಿಗಣಿಸಲಾಗಿದೆ.
