ಡಿ.ಕೆ ಶಿವಕುಮಾರ ಬಂಧನಕ್ಕೆ ಮೋದಿ-ಅಮಿತ್ ಶಾ ಕಾರಣ ಅಂತ ಎಲ್ರೂ ಮಾತನಾಡ್ತಿದ್ದಾರೆ.. ಆದ್ರೆ, ಶಿವಕುಮಾರ್ ಮೇಲಿನ ಸೇಡಿನ ರಾಜಕಾಣಕ್ಕೆ ಸಿದ್ದರಾಮಯ್ಯ ಕಾರಣ ಅನ್ನೋ ಹೊಸ ಚರ್ಚೆ ಈಗ ಹುಟ್ಟುಕೊಂಡಿದೆ.. ಹೌದು.. ಡಿಕೆಶಿ ಬಂಧನದ ಬಂತರ ಕುಮಾರಸ್ವಾಮಿ ಸ್ವತಃ ದೊಡ್ಡಾಲದಹಳ್ಳಿಗೆ ತೆರಳಿ ಡಿಕೆಶಿ ತಾಯಿಗೆ ಸಾಂತ್ವನ ಹೇಳಿ ಬಂದಿದ್ದಾರೆ.. ಜೆಡಿಎಸ್ ನಾಯಕರು ಡಿಕೆ ಶಿವಕುಮಾರ್ ಬೆನ್ನಿಗೆ ನಿಂತಿದ್ದಾರೆ. ಆದ್ರೆ, ಸಿದ್ದರಾಮಯ್ಯ ಮಾತ್ರ ಮಾಧ್ಯಮಗಳ ಮುಂದೆ ಡಿಕೆಶಿ ಬಂಧನ ವಿರೋಧಿಸಿ ಹೇಳಿಕೆ ನೀಡಿದ್ದು ಬಿಟ್ಟರೆ ಡಿಕೆಶಿ ತಾಯಿಗೆ ಸಾಂತ್ವನ ಹೇಳುವ, ಧೈರ್ಯ ತುಂಬುವ ಕೆಲಸ ಮಾಡ್ತಿಲ್ಲ.. ಡಿಕೆಶಿ ಮನೆಗೆ ತೆರಳಿ ಕುಟುಂಬದ ಜೊತೆ ನಾವಿದ್ದೇವೆ ಅಂತ ಧೈರ್ಯ ತುಂಬುವ ಕೆಲಸವನ್ನ ಕಾಂಗ್ರೆಸ್ ಮಾಡಿಲ್ಲ ಅನ್ನೋ ಆರೋಪ ಇದೆ..
ಮತ್ತೊಮ್ಮೆ ಸಿಎಂ ಆಗುವ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ
ಸಿದ್ದರಾಮಯ್ಯ ಯಡಿಯೂರಪ್ಪ ಸಿಎಂ ಆದ ದಿನದಿಂದ ಮಧ್ಯಂತರ ಚುನಾವಣೆಯ ಜಪ ಮಾಡ್ತಿದ್ದಾರೆ.. ಅನರ್ಹ ಶಾಸಕರ ವಿಚಾರಣೆ ಸುಪ್ರೀಂ ಕೋರ್ಟ್ ಮುಂದೆ ಇನ್ನೂ ಬಾರದೆ ಇರೋದನ್ನ ನೋಡಿದ್ರೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯೋ ಸಾಧ್ಯತೆ ಇದೆ.. ಹೀಗಾಗಿ ಸಿದ್ದರಾಮಯ್ಯ ಡಿಕೆಶಿ ಬಂಧನವನ್ನ ಮೇಲ್ನೋಟಕ್ಕೆ ವಿರೋಧಿಸಿ ಒಳಗೊಳಗೆ ಆಪ್ತರಿಗೆ ಮಧ್ಯಂತರ ಚುನಾವಣೆಗೆ ರೆಡಿಯಾಗುವಂತೆ ಸೂಚನೆ ಕೊಟ್ಟಿದ್ದಾರೆ.. ಬಿಜೆಪಿ, ಜೆಡಿಎಸ್ ಸುಮ್ಮನಿದ್ರು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣೆಗೆ ಸಿದ್ದತೆ ನಡೆಸುತ್ತಿದೆ.. ಇದೆಲ್ಲವನ್ನ ನೋಡಿದ್ರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಡಿದ ಆರೋಪ ಹಾಸ್ಯಾಸ್ಪದ ಅನ್ನಿಸಿದ್ರು. ಎಲ್ಲೋ ಒಂದು ಕಡೆ ಡಿಕೆಶಿ ಜೈಲಿಗೆ, ಸಿದ್ದರಾಮಯ್ಯ ಸಿಎಂ ಖುರ್ಚಿಗೆ ಅನ್ನೋ ಲೆಕ್ಕಾಚಾರದ ವಾಸನೆ ಬಡಿಯತೊಡಗಿದೆ.
ಈಗ ಮಧ್ಯಂತರ ಚುನಾವಣೆ ನಡೆದರೆ ಡಿಕೆಶಿ ಸಿಎಂ ಕ್ಯಾಂಡಿಡೇಟ್ ಆಗೋದು ಪಕ್ಕಾ.. ಆದ್ರೆ, ಡಿಕೆಶಿ ಇಡಿ ಕೇಸ್ ನಲ್ಲಿ ಪ್ರಬಲವಾಗಿ ತಗ್ಲಾಕೊಂಡಿರುವ ಕಾರಣ ಮಧ್ಯಂತರ ಚುನಾವಣೆ ಎದುರಾದರೆ ಸಿದ್ದರಾಮಯ್ಯ ನೇತೃತ್ವದಲ್ಲೇ ಫೆಸ್ ಮಾಡ್ಬೇಕು.. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಎರಡಂಕಿ ದಾಟೋದು ಕಷ್ಟ.. ಬಿಜೆಪಿ ಅಧಿಕಾರದ ಲಾಲಾಸಗೆ ಜನ ಕೂಡ ನಿಧಾನವಾಗಿ ಬೇಸತ್ತಿದ್ದಾರೆ. ನೆರೆನಿರ್ವಹಣೆಯಲ್ಲಿ ಮೋದಿ ತೋರಿದ ಉದಾಸಿನತೆ ಬಿಜೆಪಿ ಮೇಲೆ ಬೇಸರ ತರಿಸಿದೆ.. ಈ ಸನ್ನಿವೇಶದಲ್ಲಿ ಚುನವಾಣೆಯಾದರೆ ಕಾಂಗ್ರೆಸ್ ಅಧಿಕಾಕ್ಕೆ ಬರೋದು ಫಿಕ್ಸ್., ಹೀಗಾಗಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗ್ತಿದೆ.
ಈಗ ಚುನಾವಣೆಯಾದರೆ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ..? ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಥವಾ ಅತಂತ್ರ ಫಲಿತಾಂಶನಾ ಕಾಮೆಂಟ್ ಮಾಡಿ..