Tuesday, October 3, 2023

Latest Posts

ಡಿಕೆಶಿ ಆಸ್ತಿ 840 ಕೋಟಿ, ಅಮಿತ್ ಶಾ ಆಸ್ತಿ ಎಷ್ಟು..?

- Advertisement -

ಮೋದಿ-ಶಾ ಸೇಡಿನ ರಾಜಕಾರಣವೋ..? ಇಲ್ಲ ಕಾನೂನು ಪ್ರಕಾರವವೋ ಕನಕಪುರ ಬಂಡೆ ಇಡಿ ಬಂಧನಕ್ಕೆ ಒಳಪಟ್ಟಿದ್ದಾರೆ. ಹಳೇ ಮೈಸೂರು ಭಾಗದ ಒಕ್ಕಲಿಗರು ಇದೀಗ ಮೋದಿ-ಶಾ ವಿರುದ್ಧ ಸಿಡಿದೆದ್ದಿದ್ದಾರೆ. ಡಿಕೆಶಿ 840 ಕೋಟಿ ಘೋಷಿತ ಆದಾಯ ಈಗ ಎಲ್ಲಾ ಕಡೆ ಚರ್ಚೆಯಾಗ್ತಿದೆ. ಈ ನಡುವೆ ಅಮಿತ್ ಶಾ ಆಸ್ತಿ ಎಷ್ಟು ಅನ್ನೋ ಕುತೂಹಲ ಸಹಜ.

ಎಷ್ಟಿದೆ ಗೊತ್ತಾ ಬಿಜೆಪಿ ಚಾಣಕ್ಯ ಅಮಿತ್ ಶಾ ಆಸ್ತಿ..?

ಅಮಿತ್ ಶಾ ಬಿಜೆಪಿ ರಾಷ್ಟ್ರಾಧ್ಯಕ್ಷ, ಕೇಂದ್ರ ಗೃಹ ಸಚಿವ, ಮೋದಿ ಪ್ರಧಾನಿ ಮಾಡಿದ ಹಿಂದಿನ ಸೂತ್ರಧಾರ.. 2019 ರ ಚುನಾವಣೆಯಲ್ಲಿ ಅಮಿತ್ ಶಾ ಘೋಷಣೆ ಮಾಡಿಕೊಂಡ ಆಸ್ತಿ ಎಷ್ಟು ಅನ್ನೋದನ್ನ ನೋಡೊದಾದ್ರೆ ಎಲ್ಲರೂ ಹುಬ್ಬೇರಿಸುವಷ್ಟು ಏನಿಲ್ಲ. ಆಗಂತ ಅಮಿತ್ ಬರೀ ಲಕ್ಷಾಧೀಶ್ವರ ಅಲ್ಲ, ಬರೊಬ್ಬರಿ 38 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಹೌದು ಪತ್ನಿ ಹಾಗೂ ಮಕ್ಕಳು ಸೇರಿದಂತೆ ಅಮಿತ್ ಶಾ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

ಷೇರು ಮಾರುಕಟ್ಟೆ ಮೇಲೆ ಶಾ ಹೂಡಿಕೆ

ಅಮಿತ್ ಆಸ್ತಿ ಘೋಷಣೆ ಪ್ರಕಾರ ಹೆಚ್ಚು ಹಣವನ್ನ ಕಂಪನಿ ಷೇರುಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಅಮಿತ್ ಶಾ ಚಿಕ್ಕಂದಿನಿಂದಲೂ ಷೇರು ಮಾರುಕಟ್ಟೆ ಮೇಲೆ ಒಲವು ಹೀಗಾಗಿ ಇನ್ನೂರಕ್ಕೂ ಹೆಚ್ಚು ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಆಸ್ತಿಗೆ ಹೊಲಿಕೆ ಮಾಡಿದ್ರೆ ಅಮಿತ್ ಶಾ ಆಸ್ತಿ ತೀರಾ ಕಡಿಮೆ ಆದ್ರೆ. ಅಮಿತ್ ಶಾ ಪುತ್ರನ ಕಂಪನಿಗೆ ಅಡ್ಡದಾರಿಯಲ್ಲಿ ಹಣ ಮಾಡಿಕೊಟ್ಟಿದ್ದಾರೆ ಅನ್ನುವ ಆರೋಪ ಇದೆ.

ಯಸ್ ವೀಕ್ಷಕರೆ ನಿಮ್ಮ ಪ್ರಕಾರ ಅಕ್ರಮ ಹಣ ಸಂಪಾದನೆ ಮಾಡಿರೋದು ಅಮಿತ್ ಶಾ ನಾ..? ಅಥವಾ ಡಿಕೆ ಶಿವಕುಮಾರ್ ..? ಈ ಬಗ್ಗೆ ಕಾಮೆಂಟ್ ಮಾಡಿ

- Advertisement -

Latest Posts

Don't Miss