ಮೇಟಿಯವರು ಬದುಕಿದ್ದಾಗಲೇ ಯಾಕೆ ಮೆಡಿಕಲ್ ಕಾಲೇಜು ಕಟ್ಟಲಿಲ್ಲ..?: ಬಸವರಾಜ್ ಬೊಮ್ಮಾಯಿ

Political News: ಬಾಗಲಕೋಟೆಯ ಉಪಚುನಾವಣೆ ರಣಕಣ ರಂಗೇರಿದ್ದು, ಎಲ್ಲ ಪಕ್ಷಗಳು ಗೆಲುವು ಸಾಧಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ವೀರಣ್ಣ ಪರವಾಗಿ ಮಾಜಿ ಸಿಎಂ ಬಸವರಾಜ್ ಬ“ಮ್ಮಾಯಿ ಪ್ರಚಾರ ಮಾಡಿದ್ದಲ್ಲದೇ, ಪ್ರೆಸ್‌ಮೀಟ್ ನಡೆಸಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆ ನವನಗರಕ್ಕೆ ಕಾಂಗ್ರೆಸ್ ಕಾಲದಲ್ಲಿ ಎಷ್ಟು ಕೊಟ್ಟಿದ್ದೀರಿ ಸ್ಪಷ್ಟಪಡಿಸಿ, ಚರಂತಿಮಠ ಶಾಸಕರಾಗಿದ್ದಾಗ, ಕಾರಜೋಳ ನೀರಾವರಿ ಮಂತ್ರಿಯಾಗಿದ್ದಾಗ ನಾನು ಸಿಎಂ ಆಗಿದ್ದಾಗ ಬಾಗಲಕೋಟೆಗೆ ಹೆಚ್ಚಿನ ಅನುದಾನ ನೀಡಿದ್ದೇವೆ. ಈಗ ಮೇಟಿಯವರ ಕೊನೆಯ ಆಸೆಯಂತೆ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು ಹೇಳುತ್ತಾರೆ. ಅವರು ಜೀವಂತ ಇದ್ದಾಗ ಯಾಕೆ ಮಾಡಲಿಲ್ಲ.? ಎಂದು ಪ್ರಶ್ನಿಸಿದ್ದಾರೆ.

ನಾವಿದ್ದಾಗ ನಾಲ್ಕು ಮೆಡಿಕಲ್ ಕಾಲೇಜು ಮಾಡಿದ್ದೇವು. ಇವರ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಈಗ ಚುನಾವಣೆ ಸಂದರ್ಭದಲ್ಲಿ ದುಡ್ಡು ಬಳಸಿ ಮೆಡಿಕಲ್ ಕಾಲೇಜು ಮಾಡುವುದಾಗಿ ಹೇಳುತ್ತಿದ್ದಾರೆ. 2023 ರ ಚುನಾವಣೆಗೂ 2026ರ ಚುನಾವಣೆಗೆ ಬಹಳ ವ್ಯತ್ಯಾಸ ಇದೆ. ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎನ್ನುವ ವಿಶ್ವಾಸ ಇದೆ. ಅವರು ಹಣ ಚೆಲ್ಲುತ್ತಾರೆ. ಈಗ ರಾಜಶಕ್ತಿ ಪ್ರಜಾಶಕ್ತಿ ನಡುವೆ ಸಂಘರ್ಷ ನಡೆಯುತ್ತಿದೆ. ಇದರಲ್ಲಿ ಪಜಾಶಕ್ತಿ ಗೆಲ್ಲುತ್ತದೆ. ಈ ಚುನಾವಣೆಯನ್ನು ಜನ ಸಾಮಾನ್ಯರು, ನಮ್ಮ ಕಾರ್ಯಕರ್ತರೇ ಮಾಡುತ್ತಾರೆ ಎಂದು ಮಾಜಿ ಸಿಎಂ ಹೇಳಿದ್ದಾರೆ.

ಸಿಎಂ ಆಗಿಯೇ ಸಿದ್ದರಾಮಯ್ಯ 30 ಸಾವಿರ ಅಂತರದಿಂದ ಸೋತಿದ್ದಾರೆ. ನಾವು ನಾಲೈದು ಬಾರಿ ನಮ್ಮ ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಬಾದಾಮಿ ಜನ ಅವರ ಕೈ ಹಿಡಿದರು. ಅವರು ಮತ್ತೊಮ್ಮೆ ಬಾದಾಮಿಗೆ ಯಾಕೆ ಬರಲಿಲ್ಲ. ಈ ಸರ್ಕಾರದ ಬಳಿ ಹಣ ಇಲ್ಲ. ನಾವು ಜಮೀನು ವಶಪಡಿಸಿಕೊಳ್ಳುವುದಿಲ್ಲ. ಮುಳುಗಡೆ ಮಾಡಿ ಕೊಡುವುದಿಲ್ಲ. ಎಂದು ಹೇಳಿದ್ದರು. ಈಗ ಸ್ಕಿನ್ ಗೇಟ್ ಹಾಕುತ್ತೇವೆ ಎನ್ನುತ್ತಾರೆ.

ನೀರು ಹಿಡಿಯದಿದ್ದರೆ ರೈತರಿಗೆ ಏನು ಪ್ರಯೋಜನ. ಇಷ್ಟು ಬಹಿರಂಗವಾಗಿ ಜನರಿಗೆ ದಾರಿ ತಪ್ಪಿಸುವ ಕೆಲಸ ಈ ಸಕಾರ ಮಾಡುತ್ತಿದೆ. ಯುಪಿಎ ಸರ್ಕಾರ ಆರ್ ಆಂಡ್ ಆರ್ ಪಾಲಿಸಿ ಇದೆ. ಅದರ ಪಕಾರ ಇವರು ಕೆಲಸ ಮಾಡಬೇಕು. ಸಂಪೂರ್ಣ ಆರ್. ಆಂಡ್ ಆರ್ ಕೆಲಸ ಮುಗಿಸಿ ಆರು ತಿಂಗಳ ನಂತರ ನೀರು ಹಿಡಿದು ಯೋಜನೆ ಕಾರ್ಯಗತ ಮಾಡಬೇಕೆಂಬ ನಿಯಮ ಇದೆ. ಅದನ್ನು ಮಾಡಲು 75 ಸಾವಿರ ಕೋಟಿ ಬೇಕು ಎಂದು ಬಸವರಾಜ್ ಬ“ಮ್ಮಾಯಿ ಹೇಳಿದ್ದಾರೆ.

ಆಲಮಟ್ಟಿ ಡ್ಯಾಂ ಮೂರು ರಾಜ್ಯಗಳ ವ್ಯಾಜ್ಯ ಇದೆ. ಎರಡು ರಾಜ್ಯಗಳ ವಾದ ಮಂಡನೆಯಾಗಿದೆ. ಕೋರ್ಟ್‌ನಲ್ಲಿರುವ ಪ್ರಕ್ರಿಯೆಗೆ ಕರ್ನಾಟಕದ ವಕೀರಲು ಏನು ಮಾಡಿದ್ದಾರೆ. ಡ್ಯಾಮ್ ಎತ್ತರ 524 ಮೀಟರ್ ಎತ್ತರ ಮಾಡುವ ಕುರಿತು ಮಹಾರಾಷ್ಟ್ರದವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದರು. ಅದನ್ನು ನಾನು ಸದನದಲ್ಲಿ ಹೇಳಿದಾಗ ಇವರು ಅಫಿಡವಿಟ್ ಹಾಕಿದ್ದಾರೆ.

ಗ್ಯಾರೆಂಟಿ ಯೋಜನೆಗಳು ಸ್ವಂತ ಆರ್ಥಿಕ ಬಲವರ್ಧನೆ ಮಾಡಿ ಎಷ್ಟಾದರೂ ಕೊಡಲಿ, ಎಲ್ಲ ಅಭಿವೃದಿ ನಿಲ್ಲಿಸಿ ಸಾಲ ಮಾಡಿ ಯಾವುದೇ ರೀತಿಯ ಅಭಿವೃದ್ಧಿ ಮಾಡದ ಪರಿಸ್ಥಿತಿಗೆ ತಂದರೆ ಯಾವ ಗ್ಯಾರೆಂಟಿ ಬಂದರೇನು ಎಂದು ಮಾಜಿ ಸಿಎಂ ಬಸವರಾಜ್ ಬ“ಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

About The Author