Friday, August 29, 2025

Latest Posts

ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರನ್ನ(ಮಿನರಲ್ ವಾಟರ್) ಯಾಕೆ ಕುಡಿಯಬಾರದು..?

- Advertisement -

ನಾವು ಪ್ರವಾಸಕ್ಕೆ ಅಥವಾ ಎಲ್ಲಾದರೂ ಹೊರಗಡೆ ಹೋಗುವಾಗ, ನೀರಿನ ಬಾಟಲಿಯನ್ನ ಮರೆತು ಹೋದರೆ, ಅಂಗಡಿಯಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ಮಿನರಲ್ ವಾಟರ್ ಖರೀದಿ ಮಾಡ್ತೇವೆ. ಮತ್ತು ಅದನ್ನ ಅರ್ಧ ದಿನವಾದರೂ ಇರಿಸಿ, ಕುಡಿಯುತ್ತೇವೆ. ಆದ್ರೆ ಅಂಥ ನೀರು ಅದೆಷ್ಟು ಕೆಟ್ಟದ್ದು ಅನ್ನುವ ಅಂದಾಜು ಕೂಡ ನಮಗರೋದಿಲ್ಲಾ. ಹಾಗಾದ್ರೆ ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರು ಕುಡಿದರೆ, ಆರೋಗ್ಯಕ್ಕಾಗುವ ನಷ್ಟವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರನ್ನ ನಿರ್ಜೀವ ಜಲ ಅಂತಾ ಹೇಳ್ತಾರೆ. ಅಂದ್ರೆ ಇಂಥ ನೀರಿನಲ್ಲಿ ಜೀವವಿರುವುದಿಲ್ಲ. ಇದನ್ನ ದಾಹ ತಣಿಸಲು ಕುಡಿಯಬೇಕಷ್ಟೇ. ಇದರಿಂದ ಆರೋಗ್ಯಕ್ಕೆ ನಷ್ಟವಾಗುವುದೇ ಹೊರತು, ಲಾಭವೇನೂ ಇಲ್ಲ. ಯಾಕೆ ಈ ನೀರಿನಲ್ಲಿ ಜೀವವಿರುವುದಿಲ್ಲ ಅಂದ್ರೆ, ಇದನ್ನ ಯಾವತ್ತೋ ಪ್ಯಾಕ್ ಮಾಡಿರ್ತಾರೆ. ಅದನ್ನ ಮಾರುವವರೆಗೂ ಅದು ಎಷ್ಟೋ ದಿನ ಗೊಡೌನ್‌ನಲ್ಲಿ ಇರುತ್ತದೆ. ಅಂಗಡಿಗೆ ಮಾರಿದ ಮೇಲೆ ಅಂಗಡಿಯಲ್ಲಿ ತುಂಬಾ ದಿನ ಇಡಲ್ಪಡುತ್ತದೆ. ನಂತರ ನಾವು ಅದನ್ನ ಸೇವಿಸುತ್ತೇವೆ. ಇಷ್ಟೆಲ್ಲ ದಿನ ಇಟ್ಟ ನೀರನ್ನ ಕುಡಿದರೆ ನಮ್ಮ ಆರೋಗ್ಯಕ್ಕೆ ಹಾನಿಯೇ ಹೊರತು, ಉತ್ತಮವಲ್ಲ.

ಅಲ್ಲದೇ ಆ ಬಾಟಲಿಯಲ್ಲಿ ನೀರು ಹೆಚ್ಚು ದಿನ ಇರುವುದರಿಂದ, ಪ್ಲಾಸ್ಟಿಕ್ ಅಂಶ ಕೂಡ ನಮ್ಮ ದೇಹ ಸೇರುತ್ತದೆ. ಅದರಿಂದ ಕ್ಯಾನ್ಸರ್ ಸೇರಿ ಹಲವು ರೋಗಗಳು ಉಂಟಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಇಟ್ಟ ನೀರನ್ನು ಎಂದಿಗೂ ಸೇವಿಸಬೇಡಿ. ಸ್ಟೀಲ್, ತಾಮ್ರ, ಅಥವಾ ಗ್ಲಾಸ್ ಬಾಟಲಿಯಲ್ಲಿ ನೀರು ಕುಡಿಯಿರಿ. ಈಗ ಮಣ್ಣಿನ ಬಾಟಲಿಯೂ ಲಭ್ಯವಿದೆ. ಅದರಲ್ಲೂ ನೀರನ್ನು ಕುಡಿಯಬಹುದು.

- Advertisement -

Latest Posts

Don't Miss