Wednesday, April 24, 2024

Latest Posts

ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ, ಮೋದಿಗೆ ಬೆಂಬಲಿಸುತ್ತೇನೆ: ಸಂಸದೆ ಸುಮಲತಾ ಅಂಬರೀಷ್

- Advertisement -

Mandya Political News: ಮಂಡ್ಯದ ಕಾಳಿಕಾಂಬಾ ದೇವಸ್ಥಾನದಲ್ಲಿ ಪೂಜೆ ಬಳಿಕ, ಸಂಸದೆ ಸುಮಲತಾ ಅಂಬರೀಷ್ ಸಮುದಾಯ ಭವನದಲ್ಲಿ ಸಭೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಸುಮಲತಾ ಅಂಬರೀಷ್, ಮಂಡ್ಯದ ಮಹಾ ಜನತೆಗೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ. ನನಗೆ ರಾಜಕೀಯ ಅನಿವಾರ್ಯ ಇಲ್ಲ .ಸಾಧನೆಗಳು ನಮ್ಮ ಬಗ್ಗೆ ಮಾತಾಡಬೇಕೂ .. ನಾವು ಸಾಧನೆ ಬಗ್ಗೆ ಮಾತಾಡಬಾರದು. ನಾನು ಏನು ? ನನ್ನ ಐದು ವರ್ಷದ ಸಾಧನೆ ಏನು ? ಏನ್ ಮಾಡಿದರೆ ಮಂಡ್ಯ ಸೊಸೆ… ಏನು ಕೊಡುಗೆ ಅವರದ್ದು. ಇದು ನನ್ನ ಘನತೆ ಅಲ್ಲ, ಮಂಡ್ಯದ ಘನತೆ. ಮಂಡ್ಯದ ಜನತೆಗೆ .. ನಾನು ಋಣಿ, ಮಂಡ್ಯದ ಜನತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನನ್ನ ಮನೆ ಮಕ್ಕಳು. ದರ್ಶನ್ , ಯಶ್ ಗೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.

ನಾನು ಇದ್ರು , ಹೋದ್ರು, ನಿಂತ್ರು , ಗೆದ್ರು , ಸೋತ್ರು ಮಂಡ್ಯದಲ್ಲೇ ಇರ್ತೀನಿ. ನಾನು ತುಂಬಾ ಯೋಚನೆ ಮಾಡಿ ಹೇಳ್ತಾ ಇದೀನಿ. ಅಳೆದೂ ತೂಗಿ ಹೇಳ್ತಾ ಇದೀನಿ. ನಾನು ದ್ವೇಷ ಸಾಧಿಸಬೇಕು ಅಂದ್ರೆ , ನಾನು ಸ್ವಾತಂತ್ರ್ಯ ಅಭ್ಯರ್ಥಿ ಆಗಿ ನಿಲ್ಲಬಹುದು. ನನಿಗೆ ಮಂಡ್ಯ ಬಿಟ್ರೆ ರಾಜಕೀಯ ಬೇಡ. ಹಾಗಾಗಿ ನಾನು ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ನಾನು ಮೋದಿಯವರು ಯಾವುದೇ ಸ್ವಾರ್ಥ ರಾಜಕೀಯ ಮಾಡುತ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ತಮ್ಮ ಅಭಿಪ್ರಾಯ ಹೇಳಿದ್ದಾರೆ.

7ಲಕ್ಷಕ್ಕೂ ಅಧಿಕ ಮತವನ್ನು ಹಾಕಿ ಗೆಲ್ಲಿಸಿದ್ದೀರಿ. ನನ್ನ ರಾಜಕೀಯ ಪ್ರವೇಶ ಆಕಸ್ಮಿಕ. ರಾಜಕೀಯ ನನಗೆ ಯಾವಾಗ್ಲೂ ಅನಿವಾರ್ಯವಲ್ಲ ಈಗಲೂ ಇಲ್ಲ. ಚುನಾವಣೆ ಗೆದ್ದ ಬಳಿಕವೂ ಅಷ್ಟು ಸುಲಭವಾಗಿರಲಿಲ್ಲ. ರೈತರ ಪರವಾಗಿ ಒಂದಷ್ಟು ಕೆಲಸವನ್ನು ಮಾಡಿದ್ದೇನೆ. ನನ್ನ ಕೆಲಸದ ಬಗ್ಗೆ ಸರಿಯಾದ ಪ್ರಚಾರ ಸಿಕ್ಕಿಲ್ಲ. ಕೆ.ಆರ್.ಎಸ್ ಡ್ಯಾಮ್ ವಿಚಾರವಾಗಿ ಒಂದು ಯುದ್ಧವನ್ನೇ ಮಾಡಿದ್ದೇನೆ. ಪಾರ್ಟಿ ಟೀಮ್ ಇಲ್ದೆ ಸ್ವತಂತ್ರ ಅಭ್ಯರ್ಥಿಯಾಗಿ ಇಷ್ಟು ಸಾಧನೆಯನ್ನು ಮಾಡಿದ್ದೇನೆ. ಅಂಬರೀಷ್ ಅವರ ಹೆಸರು ಶಾಶ್ವತವಾಗಿರಬೇಕು ಅನ್ನೋ ಕಾರಣಕ್ಕೆ ಮೈ ಶುಗರ್ ಫ್ಯಾಕ್ಟರಿ ಪರವಾಗಿ ಹೋರಾಡಿದ್ದೇನೆ. ನಿತಿನ್ ಗಡ್ಕರಿಯವರನ್ನು ಸಂಪರ್ಕಿಸಿ ಮಂಡ್ಯ ಹೆದ್ದಾರಿಯ ಕೆಲಸವನ್ನು ಮಾಡಿಸಿದ್ದೇನೆ. ಮಂಡ್ಯ-ಮೈಸೂರು ರೈಲಿನಲ್ಲಿ ಮಹಿಳೆಯರಿಗೆ 2 ವಿಶೇಷ ಬೋಗಿ ಅಳವಡಿಕೆ ಮಾಡಿಸಿದ್ದೇನೆ. ಮಂಡ್ಯ ರೈಲ್ವೆ ನಿಲ್ದಾಣ ಹತ್ತಿರ ಎಸ್ಕಲೇಟರ್ ಮಾಡಿಸಿದ್ದೇನೆ. ನಾನು ಕೆಲಸ ಮಾಡಿಲ್ಲ ಅಂತಾ ಟೀಕೆ ಮಾಡೋವ್ರಿಗೆ ಈವತ್ತು ನೀವು ಉತ್ತರವನ್ನು ಕೊಡಬಹುದು. ಮಳವಳ್ಳಿಯ ಸೊಸೆ ಮಳವಳ್ಳಿಯ ಋಣ ತೀರಿಸಿದ್ದಾರೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ. ಜೊತೆಗೆ  ಹಿಂದಿನ ಚುನಾವಣೆಗೆ ದರ್ಶನ್-ಯಶ್ ಸಹಕಾರವನ್ನು ಸಹ ಸುಮಲತಾ ಅಂಬರೀಷ್ ಹೇಳಿದ್ದಾರೆ.

ಮಂಡ್ಯ ಸೀಟನ್ನು ಬಿಜೆಪಿಗೆ ಉಳಿಸಿಕೊಳ್ಳೋ ಪ್ರಯತ್ನ ಮಾಡ್ದೆ. ನನಗೆ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಸೇರಿ ಹಲವು ಕಡೆ ಸ್ಪರ್ಧಿಸೋಕೇ ಅವಕಾಶ ಬಂದಿತ್ತು ನಾನು ಎಲ್ಲಿಯೂ ಸ್ಪರ್ದಿಸಲ್ಲ. ಅಧಿಕಾರಕ್ಕೆ ಅಂಟಿಕೊಂಡು ಕೂರೊ ಆಸೆ ನನಗಿಲ್ಲ. ಹಲವು ಬೆಂಬಲಿಗರು ಪಕ್ಷೇತರರಾಗಿ ಸ್ಪರ್ಧೆ ಮಾಡಿ ಅಂದ್ರು.ಕಾಂಗ್ರೆಸ್ ನಿಂದ ಸ್ಪರ್ಧಿಸಿ ಅಂತಾನೂ ಅಂದ್ರು.  ನಾನು ಸ್ವಾರ್ಥಿಯಾಗಿದ್ರೆ ಬಿಜೆಪಿ ಯಿಂದ ಟಿಕೆಟ್ ತಗೊಂಡು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ತಿದ್ದೆ. ಸುಮಲತಾ ಅವರ ಅವಶ್ಯಕತೆ ನಮಗೆ ಅವತ್ತೂ ಇರ್ಲಿಲ್ಲ ಇವತ್ತೂ ಇಲ್ಲ ಅಂತ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಸ್ವಾಭಿಮಾನ ಬಿಟ್ಟು ನನಗೆ ಬೆಲೆ ಇಲ್ಲದ ಕಡೆ ನಾನು ಹೋಗೋದಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ರೂ 4000ಕೋಟಿ ಅನುಧಾನ ನೀಡಿದ್ದು ಕೇಂದ್ರ ಬಿಜೆಪಿ ಸರ್ಕಾರ.ಭಾರತವನ್ನು ತಿರುಗಿ ನೋಡುವಹಾಗೆ ಮಾಡಿದ್ದು ನರೇಂದ್ರ ಮೋದಿ. ಈ ಚುನಾವಣೆಯಲ್ಲಿ ಮಾತ್ರ ಸ್ಪರ್ದಿಸಲ್ಲ ಆದ್ರೆ ಮಂಡ್ಯವನ್ನು ಯಾವತ್ತೂ ಬಿಟ್ಟು ಹೋಗಲ್ಲ. ನಾನು ಬಿಜೆಪಿ ಪಕ್ಷವನ್ನು ಸೇರುವ ನಿರ್ಧಾರವನ್ನು ಮಾಡಿದ್ದೇನೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ಅಲ್ ಜಜೀರಾ ವಾಹಿನಿ ನಿಷೇಧ: ಬೆಂಜಮಿನ್ ನೆತನ್ಯಾಹು

ನಿಮ್ಮ ನಡೆಯೇ ನನ್ನದೂ ಆಗಿರಲಿದೆ. ಜೊತೆಯಾಗಿ ಮಂಡ್ಯವನ್ನು ಮತ್ತಷ್ಟು ಅಭಿವೃದ್ದಿ ಪಡಿಸೋಣ: ಸಂಸದೆ ಸುಮಲತಾ

ಅಡ್ಡದಾರಿಯಲ್ಲಿ ಚುನಾವಣೆ ಎದುರಿಸಲು ಹೋದರೆ, ಸೋಲು ಕಟ್ಟಿಟ್ಟ ಬುತ್ತಿ: ಅಮಿತ್ ಶಾ ವಿರುದ್ಧ ಸಿಎಂ ವಾಗ್ದಾಳಿ

- Advertisement -

Latest Posts

Don't Miss