ನಿನ್ನೆ ಮೈಸೂರಿನಲ್ಲಿ ಡಿಕೆಶಿ ಕೈಯನ್ನ ಸಿಎಂ ಸಿದ್ದರಾಮಯ್ಯ ಮೇಲಕ್ಕೆತ್ತಿದ್ರು. ಇದಾದ ಬಳಿಕ ಅದ್ಯಾವ ಮ್ಯಾಜಿಕ್ ಆಯ್ತೋ ಗೊತ್ತಿಲ್ಲ. ಸಿದ್ದರಾಮಯ್ಯ ಸರ್ಕಾರಕ್ಕೆ ಬಂಡೆ ರೀತಿ ರಕ್ಷಾ ಕವಚವಾಗಿ ಡಿಕೆಶಿ ನಿಂತಿದ್ದಾರೆ. ಸುರ್ಜೇವಾಲ ಬಳಿ ತಮ್ಮ ಪರವಾಗಿ ಬ್ಯಾಟಿಂಗ್ ಮಾಡಿರೋ ಆಪ್ತರಿಗೆ, ಬಿಸಿಮುಟ್ಟಿಸುವ ಕೆಲಸ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮಗಳೊಟ್ಟಿಗೆ ಮಾತನಾಡುವಾಗ, ಪಕ್ಷದ ರೀತಿ ರಿವಾಜುಗಳ ಬಗ್ಗೆ ಆಪ್ತರಿಗೆ ಪಾಠ ಮಾಡಿದ್ದಾರೆ. ಮೊದಲು ಪಾರ್ಟಿ ಡಿಸಿಪ್ಲೀನ್ ತರಬೇಕು. ಯಾವ ಲೀಡರ್ ಶಿಪ್ ಚೇಂಜ್ ವಿಚಾರವೂ ಇಲ್ಲ. ಸಿಎಂ ಬದಲಾವಣೆ ವಿಚಾರವಾಗಿ ಯಾವುದೇ ಚರ್ಚೆ ಇಲ್ಲ. ನಮಗೆ 2028 ಮುಖ್ಯವಾಗಿದೆ.
ಯಾವ ನಾಯಕತ್ವ ಬದಲಾವಣೆಯೂ ಇಲ್ಲ. ಸಿಎಂ ಸಿದ್ದರಾಮಯ್ಯನವರ ಕೈ ಬಲಪಡಿಸುತ್ತೇವೆ. ನನಗ್ಯಾರು ಸಿಎಂ ಆಗ್ತೀನಿ ಅಂತಾ ಹೇಳುವ ಅವಶ್ಯಕತೆ ಇಲ್ಲ. ಇಕ್ಬಾಲ್ ಹುಸೇನ್ ಇವತ್ತೋ ನಾಳೆನೋ ನೋಟಿಸ್ ಇಶ್ಶೂ ಮಾಡ್ತೀನಿ. ಮೀಡಿಯಾಗಳ ಎದುರು ಯಾರೂ ಕೂಡ ಹೋಗಬಾರದು ಅಷ್ಟೆ. ಬಿ.ಆರ್. ಪಾಟೀಲ್, ರಾಜುಕಾಗೆ ಸೇರಿದಂತೆ ಹಲವು ಶಾಸಕರಿಗೆ ಡಿಕೆಶಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸುರ್ಜೆವಾಲ ಮೀಟಿಂಗ್ ಬಗ್ಗೆಯೂ ಪ್ರತಿಕ್ರಿಯಿಸಿದ್ದು, ಇದು ಸಂಘಟನೆಯ ವರ್ಷ ಅಂತಾ ಬೆಳಗಾವಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ. ದೆಹಲಿಯ ಮೀಟಿಂಗ್ನಲ್ಲೂ ಪ್ರತ್ಯೇಕವಾಗಿ ಮಾತನಾಡಿದ್ದಾರೆ. ಇದು ಪಕ್ಷ ಸಂಘಟನೆ ವಿಚಾರವಾಗಿ ಸಭೆ ನಡೆಯುತ್ತಿದೆ ಅಷ್ಟೆ ಅಂತಾ ಡಿಕೆಶಿ ಹೇಳಿದ್ರು.
ಮಾಧ್ಯಮಗಳ ಎದುರು ತುಂಬಾ ಸ್ಟ್ರಿಕ್ಟ್ ಆಗಿ ಮಾತಾಡುತ್ತಾ, ಡ್ಯಾಮೇಜ್ ಕಂಟ್ರೋಲ್ ಗೆ ಡಿಕೆಶಿ ಮುಂದಾಗಿದ್ದಾರೆ. ಆದರೆ ಡಿಕೆಶಿ ಮನದಲ್ಲೇ ಎಣೆಯುತ್ತಿರುವ ರಣತಂತ್ರ ಏನು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.