District News:ಹುಬ್ಬಳ್ಳಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಆರಂಭವಾಗಿದ್ದೇ ತಡ ಬಸ್ ನಿಲ್ದಾಣ ಹಾಗೂ ಬಸ್ ಸಂಪೂರ್ಣ ತುಂಬಿ ತುಳಕುತ್ತಿವೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಷ್ಟು ಅವಘಡಗಳು ಸಂಭವಿಸುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬುವಂತೆ ಬಸ್ಸಿನಲ್ಲಿ ಸೀಟ್ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ತನ್ನ ಕೈಗೆ ಗಾಯ ಮಾಡಿಕೊಂಡಿದ್ದಾನೆ.
ಹೌದು..ಶಕ್ತಿ ಯೋಜನೆ ಎಫೆಕ್ಟ್ ಮಾತ್ರ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಬಸ್ ಗಾಗಿ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಹುಬ್ಬಳ್ಳಿಯ ಹೊಸುರ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಸೀಟ್ ಹಿಡಿಯಲು ಸರ್ಕಸ್ ಮಾಡುತ್ತಿದ್ದಾರೆ. ಕಿಟಕಿಯಲ್ಲಿ ಹತ್ತಿ ಸೀಟ್ ಹಿಡಿಯುತ್ತಿರುವ ವಿದ್ಯಾರ್ಥಿಗಳ ಪರದಾಟದ ವಿಡಿಯೋ ಕರ್ನಾಟಕ ಟಿವಿ ಮಾಧ್ಯಮಕ್ಕೆ ಲಭ್ಯವಾಗಿದೆ.
ಇನ್ನೂ ಕಿಟಕಿಯಲ್ಲಿ ಸೀಟ್ ಹತ್ತೋ ವೇಳೆ ಕಿಟಕಿಯ ವಿಂಡೋ ರಾಡ್ ನಿಂದ ವ್ಯಕ್ತಿಯೊಬ್ಬನಿಗೆ ಕೈಗೆ ಪೆಟ್ಟು ಬಿದ್ದಿದ್ದು, ಕಿಟಕಿಯಲ್ಲಿ ಹತ್ತಿ ಸೀಟ್ ಹಿಡಿಯುವ ವೇಳೆ ಅವಘಡ ಸಂಭವಿಸಿದೆ. ಶಕ್ತಿ ಯೋಜನೆಯಲ್ಲಿ ಮಹಿಳೆಯರ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನಲೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಅವಳಿನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ: ದಂಡ ವಿಧಿಸಿದ ಪಾಲಿಕೆ ಅಧಿಕಾರಿಗಳು
30 ವರ್ಷ ಭಾರತಾಂಬೆಯ ಸೇವೆ ಸಲ್ಲಿಸಿ ಬಂದ ಯೋಧನಿಗೆ ಗ್ರಾಮದಲ್ಲಿ ಅದ್ದೂರಿ ಸಂಭ್ರಮ