Wednesday, July 23, 2025

Latest Posts

ಚಳಿಗಾಲದಲ್ಲಿ ಬಾಧಿಸುವ ರೋಗಗಳು; ಆರೋಗ್ಯ ರಕ್ಷಣೆ ಹೇಗಿರಬೇಕು..?

- Advertisement -

Health

ಚಳಿಗಾಲದಲ್ಲಿ ಕೆಲವೊಂದು ರೋಗಗಳು, ಆರೋಗ್ಯ ಸಮಸ್ಯೆ ಬಾಧಿಸುವುದು ಸಹಜ. ಸಾಮಾನ್ಯವಾಗಿ ಚಳಿಗಾಲದಲ್ಲಿ ಬರುವ ರೋಗಗಳು ನೆಗಡಿ, ಕೆಮ್ಮು, ಗಂಟಲು ನೋವು, ಕಿವಿನೋವು,ಅಸ್ತಮಾ ಮತ್ತು ನ್ಯುಮೋನಿಯಾ ರೋಗಗಳು ಕಂಡುಬರುತ್ತವೆ. ಸ್ಟ್ರೆಪ್ರೋಕೋಕಸ್ ನ್ಯುಮೋನಿಯಾ ಬ್ಯಾಕ್ಟಿರಿಯಾ ಮತ್ತು ಹೀಮೊಫಿಲಸ್ ಇನ್ ಪ್ಲ್ಯೂ ಯೆಂಝಾ ವೃರಸ್ ಪ್ರಮುಖ ಕಾರಣ. ಈ ರೋಗಾಣುಗಳು ಶೀತಲ ವಾತಾವರಣದಲ್ಲಿ ಹೆಚ್ಚು ಸಮಯ ಸಕ್ರಿಯವಾಗಿ ಬದುಕಿರುವುದರಿಂದ  ರೋಗಪೀಡಿತ ಮನುಷ್ಯನ ಸೀನು, ಸಿಂಬಳ, ಮಲದ ಸಂಪರ್ಕದಿಂದ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಅಥವಾ ಜೀರ್ಣಾಂಗವ್ಯೂಹದ ಮುಖಾಂತರ ಪ್ರವೆಶಿಸಿ ರೋಗೋತ್ಪತ್ತಿ ಮಾಡುತ್ತದೆ.

ಋತುಮಾನಗಳು ಬದಲಾದಾಗ ಕೆಲವೊಂದು ಆಹಾರ ಪದ್ಧತಿಯನ್ನು ಬದಲಾಯಿಸಿಬೇಕಾಗುತ್ತದೆ. ಆಹಾರ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರ ಜೊತೆಗೆ ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕು. ಶೀತಕಾಲವು ಸಹಜವಾಗಿ ಕಫವನ್ನು ವೃದ್ಧಿಸುತ್ತದೆ. ಈ ಕಾಲದಲ್ಲಿ ಜೀರ್ಣಶಕ್ತಿ ಅಧಿಕವಾಗಿರುತ್ತದೆ ಹಾಗಾಗಿ ಗೋಧಿ, ಉದ್ದಿನ ಆಹಾರಗಳನ್ನು ಸೇವಿಸುವುದರಿಂದ ಹಸಿವನ್ನು ನಿಯಂತ್ರಿಸಬಹುದು. ಮತ್ತು ಬೆಳಗ್ಗೆ ಎದ್ದ ತಕ್ಷಣ ಬಿಸಿನೀರನ್ನು ಕುಡಿಯುವುದು, ಶುಂಠಿ, ಕರಿಮೆಣಸು, ಲವಂಗ, ತುಳಸಿ ಎಲೆಗಳನ್ನು ಹಾಕಿ ನೀರಲ್ಲಿ ಕುದಿಸಿ ಕುಡಿಯುವುದರಿಂದ ಕಫ, ಕೆಮ್ಮು ಕಡಿಮೆಯಾಗುತ್ತದೆ. ಶೀತ ವಾತವರಣದಿಂದ ಪಾದ, ತುಟಿ, ಚರ್ಮ ಒಣಗುತ್ತದೆ. ಹೋರ ಹೋಗುವ ಮೊದಲು ದೇಹವನ್ನು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುವುದು, ತುಟಿಗಳಿಗೆ ತುಪ್ಪವನ್ನು ಲೇಪನ ಮಾಡುವುದು, ಮನೆ ಒಳೆಗೆ ಮತ್ತು ಹೊರಗೆ ಚಪ್ಪಲಿಗಳನ್ನು ಧರಿಸವುದು, ದೇಹವನ್ನು ಆದಷ್ಟು ಹತ್ತಿ, ಉಣ್ಣೆ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು.

ದೇಹ ಸಧೃಡವಾಗಿಲು ಆಹಾರ ಪಥ್ಯಪಾಲನೆ, ಯಥೋಚಿತ ಶಕ್ತ್ಯಾನುಸಾರ ವ್ಯಾಯಾಮ ಮಾಡುತ್ತಿರುವುದು ಒಳ್ಳೆಯದು. ಚಳಿಯಿಂಧ ರಕ್ಷನೆ ಪಡೆಯುವುದಕ್ಕೆ ದೇಹದಲ್ಲಿ ರೋಗನಿರೋಧಕ ಗುಣಗಳನ್ನು ವೃದ್ಧಿಮಾಡಲು ಆಮ್ಲಯುಕ್ತ ಹಣ್ಣುಗಳ ಸೇವನೆ ಅತ್ಯಂತ ಪ್ರಯೋಜನಕಾರಿಯಾಗಿದೆ. ನಿಯಮಿತವಾಗಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಕಫ, ಚಳಿ ನಿವಾರಿಸಬಹುದು. ಆಹಾರ ಶೈಲಿಯನ್ನ ಚಳಿಗಾಲದಲ್ಲಿ ಬದಲಾಯಿಸಿ ಕ್ರಮಬದ್ಧವಾದ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು.

ಉತ್ತಮ ಆರೋಗ್ಯಕಾಗಿ ಈರುಳ್ಳಿ …!

ಬ್ರೌನ್ ರೈಸ್ ನ ಪ್ರಯೋಜನಗಳು ತಿಳಿಯಿರಿ…!

 

- Advertisement -

Latest Posts

Don't Miss