Friday, November 28, 2025

Latest Posts

Winter Special: ಹಸಿರು ಬಟಾಣಿಯ ಪರಾಠಾ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: 1 ಕಪ್ ನೆನೆಸಿ ಬೇಯಿಸಿದ ಬಟಾಣಿ, ಎಣ್ಣೆ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಹಿಂಗು, 1 ಸ್ಪೂನ್ ಜೀರಿಗೆ, ಚಾಟ್ ಮಸಾಲೆ, ಕೊತ್ತೊಂಬರಿ ಸೊಪ್ಪು, ಧನಿಯಾ ಪುಡಿ, ಗೋದಿ ಹುಡಿ, ಉಪ್ಪು, ತುಪ್ಪ.

ಮಾಡುವ ವಿಧಾನ: ಬಟಾಣಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ಇದರ ಜತೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಹಾಕಿ ತರಿ ತರಿಯಾಗಿ ರುಬ್ಬಿ. ಬಳಿಕ ಪ್ಯಾನ್ ಬಿಸಿ ಮಾಡಿ, ಎಣ್ಣೆ, ಹಿಂಗು, ಜೀರಿಗೆ, ರುಬ್ಬಿದ ಮಿಶ್ರಣ ಹಾಕಿ ಹುರಿಯಿರಿ. ನಂತರ ಚಾಟ್ ಮಸಾಲೆ, ಕೊತ್ತೊಂಬರಿ ಸೊಪ್ಪು, ಧನಿಯಾ ಪುಡಿ ಎಲ್ಲ ಹಾಕಿ ಮಿಕ್ಸ್ ಮಾಡಿ, ಗ್ಯಾಸ್ ಆಫ್ ಮಾಡಿ.

ನಂತರ ಗೋದಿ ಹುಡಿಯಿಂದ ಚಪಾತಿ ಹಿಟ್ಟು ಕಲಿಸಿ, ಲಟ್ಟಿಸಿ, ಅದರಲ್ಲಿ ಬಟಾಣಿ ಮಿಕ್ಸ್ ಹೂರಣ ಹಾಕಿ. ನಂತರ ಲಟ್ಟಿಸಿ, ತುಪ್ಪದ ಜತೆ ಬೇಯಿಸಿದರೆ, ಹಸಿರು ಬಟಾಣಿಯ ಪರಾಠಾ ರೆಡಿ.

- Advertisement -

Latest Posts

Don't Miss