ಬೇಕಾಗುವ ಸಾಮಗ್ರಿ: 1 ಬೌಲ್ ಹುಳಿ ಮೊಸರು, ಸಣ್ಣ ಬೌಲ್ ಕಡಲೆಹುಡಿ, 1 ಸ್ಪೂನ್ ಖಾರದ ಪುಡಿ, ಸ್ನಲ್ಪ ಅರಿಶಿನ ಪುಡಿ, 1 ಸ್ಪೂನ್ ಧನಿಯಾ ಪುಡಿ, 1 ಬೌಲ್ ಮೆಂತ್ಯೆ ಎಲೆ, 4 ಸ್ಪೂನ್ ಸಾಸಿವೆ ಎಣ್ಣೆ, 2 ಮೆಣಸು, 1 ಸ್ಪೂನ್ ಜೀರಿಗೆ, ಸ್ವಲ್ಪ ಹಿಂಗು, ಕೊತ್ತೊಂಬರಿ ಕಾಳು, ಕರಿಬೇವು, 1ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಠ್, ಈರುಳ್ಳಿ, ಉಪ್ಪು.
ಮಾಡುವ ವಿಧಾನ: 1 ಬೌಲ್‌ನಲ್ಲಿ ಮೊಸರ, ಕಡಲೆ ಹುಡಿ, ಖಾರದ ಪುಡಿ, ಅರಿಶಿನ, ಧನಿಯಾ ಪುಡಿ ಹಾಕಿ ಮಿಕ್ಸ್ ಮಾಡಿ ಇರಿಸಿ. ಈಗ ಗ್ಯಾಸ್ ಆನ್ ಮಾಡಿ, ಅದರಲ್ಲಿ ಎಣ್ಣೆ ಮತ್ತು ಮೆಂತ್ಯೆ ಎಲೆ ಹಾಕಿ ಹುರಿಯಿರಿ. ಬಳಿಕ ಮಿಕ್ಸ್ ಮಾಡಿದ ಮಿಶ್ರಣವನ್ನು ಸೇರಿಸಿ. ಅವಶ್ಯಕತೆ ಇರುವಷ್ಟು ನೀರು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಕುದಿ ಬಂದ ಬಳಿಕ, ಇದಕ್ಕೆ ತಡ್ಕಾ ಹಾಕಬೇಕು.
ಇದಕ್ಕಾಗಿ 1 ಪ್ಯಾನ್‌ನಲ್ಲಿ ಎಣ್ಣೆ ಸಾಸಿವೆ, ಜೀರಿಗೆ, ಹಿಂಗು, ಮೆಣಸು, ಕರಿಬೇವು ಎಲ್ಲ ಹಾಕಿ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಠ್, ಈರುಳ್ಳಿ, ಖಾರದ ಪುಡಿ ಹಾಕಿ ಹುರಿಯಿರಿ. ಬಳಿಕ ಈ ಮಿಶ್ರಣವನ್ನು ಕಡಿಗೆ ಹಾಕಿ. ಇದರ ಜತೆ ಅವಶ್ಯಕತೆ ಇದ್ದರೆ ಉಪ್ಪು, ಕಸೂರಿ ಮೇಥಿ, ಗರಂ ಮಸಾಲೆ ಹಾಕಿ ಮಿಕ್ಸ್ ಮಾಡಿ. 5 ನಿಮಿಷ ಮಂಜದ ಉರಿಯಲ್ಲಿ ಕುದಿಸಿದರೆ, ರಾಜಸ್ತಾನಿ ಕಡಿ ರೆಡಿ. ಇದನ್ನು ನೀವು ಬಿಸಿ ಬಿಸಿ ಅನ್ನದ ಜತೆ ಸೇವಿಸಬಹುದು. ಚಳಿಗಾಲದಲ್ಲಿ ಇದನ್ನು ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ.

