InterNational News:
ವಿವಿಧ ದೇಶಗಳಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆಗಳಾಗಿರಬಹುದು ಅಥವಾ ಮಿಸ್ ವರ್ಲ್ಡ್ ಆಗಿರಲಿ, ಮಿಸ್ ಯೂನಿವರ್ಸ್ ಆಗಿರಲಿ. ಪ್ರತಿಯೊಂದು ಸೌಂದರ್ಯ ಸ್ಪರ್ಧೆಯಲ್ಲಿ, ಸ್ಪರ್ಧಿಗಳು ಮುಖಕ್ಕೆ ಹೆವಿ ಮೇಕಪ್ ಹಚ್ಚುವ ಮೂಲಕ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇಂಗ್ಲೆಂಡಿನ ಯುವತಿಯೊಬ್ಬಳು ಮೇಕಪ್ ಇಲ್ಲದೇನೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾಳೆ.
20 ವರ್ಷದ ಯುವತಿ ಮೆಲಿಸ್ಸಾ ರೌಫ್ ಇಂಗ್ಲೆಂಡ್ನ ಸೌಂದರ್ಯ ಸ್ಪರ್ಧೆಯ ಸೆಮಿಫೈನಲ್ ಸುತ್ತಿನಲ್ಲಿ ಮೇಕಪ್ ಇಲ್ಲದೆ ಸ್ಪರ್ಧಿಸಿ, ಮೇಕಪ್ ಇಲ್ಲದೇನೂ ಸೌಂದರ್ಯ ಸ್ಪರ್ಧೆಯಲ್ಲಿ ಟಾಪ್ ಮಾಡಬಹುದು ಅನ್ನೋದನ್ನು ತೋರಿಸಿದ್ದಾರೆ. ಅದೇ ಸಮಯದಲ್ಲಿ, ಅವರ ನಡೆ ಸೌಂದರ್ಯ ಸ್ಪರ್ಧೆಯ ಸ್ಪರ್ಧಿಗಳ ಮೇಲೂ ಪ್ರಭಾವ ಬೀರಿತು. ಅದರ ನಂತರ ಅವರು ಈಗ ಫೈನಲ್ ತಲುಪಿದ್ದಾರೆ ಅನ್ನೋದು ವಿಶೇಷವಾಗಿದೆ. ಮೆಲಿಸ್ಸಾ ನ್ಯಾಚುರಲ್ ಬ್ಯೂಟಿಯನ್ನು ಪ್ರಮೋಟ್ ಮಾಡುವ ಮೂಲಕ ಫೈನಲ್ ಗೆ ಪ್ರವೇಶಿಸಿದ್ದಾರೆ.