Friday, December 13, 2024

Latest Posts

ಪುಷ್ಪ-2 ಪ್ರಿಮಿಯರ್ ಶೋ ವೇಳೆ ಕಾಲ್ತುಳಿತದಲ್ಲಿ ಮಹಿಳೆ ಸಾವು ಕೇಸ್: ನಟ ಅಲ್ಲು ಅರ್ಜುನ್ ಅರೆಸ್ಟ್

- Advertisement -

Tollywood News: ಪುಷ್ಪ 2 ಸಿನಿಮಾ ಪೇಡ್ ಪ್ರಿಮಿಯರ್ ಶೋನಲ್ಲಿ ಕಾಲ್ತುಳಿತ ಉಂಟಾಗಿ, ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಇಂದು ನಟ ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಲಾಗಿದೆ.

ಅಲ್ಲು ಅರ್ಜುನ್ ಸೇರಿ ಇತರರ ವಿರುದ್ಧ ದೂರು ದಾಖಲಿಸಲಾಗಿತ್ತು. ಅಲ್ಲು ಅರ್ಜುನ್ ಸೇರಿ, ಅವರ ಬಾಡಿಗಾರ್ಡ್ ಮತ್ತು ಇನ್ನಿತರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಂಧ್ಯಾ ಚಿತ್ರಮಂದಿರದಲ್ಲಿ ಪ್ರಿಮಿಯರ್ ಶೋ ಇದ್ದ ಕಾರಣ, ಓರ್ವ ವ್ಯಕ್ತಿ ಆತನ ಇಬ್ಬರು ಮಕ್ಕಳು ಮತ್ತು ಪತ್ನಿಯ ಜೊತೆ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬಂದಿದ್ದ.

ಅಂದು ಅಲ್ಲಿ ಅಲ್ಲು ಅರ್ಜುನ್ ಬರುತ್ತಾರೆ, ಪುಷ್ಪ 2 ಸಿನಿಮಾ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಲಾಗಿತ್ತು. ನೆಚ್ಚಿನ ನಟನೊಂದಿಗೆ ಆತನ ನಟನೆ ಸಿನಿಮಾವೂ ನೋಡಬಹುದು ಎಂಬ ಖುಷಿಯಲ್ಲಿ ಕುಟುಂಬ ಆ ದಿನ ಥಿಯೇಟರ್‌ಗೆ ಬಂದಿತ್ತು. ಆದರೆ ಅಲ್ಲಿ ನೆರೆದಿದ್ದ ಇತರ ಅಭಿಮಾನಿಗಳು ಅಲ್ಲು ಅರ್ಜುನ್ ಅವರನ್ನು ನೋಡಿ, ಹುಚ್ಚೆದ್ದು ಕುಣಿದಿದ್ದು, ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಶುರು ಮಾಡಿದ್ದರು.

ಆಗ ಕಾಲ್ತುಳಿತ ಉಂಟಾಗಿ, ಓರ್ವ ಮಹಿಳೆ ಸಾವನ್ನಪ್ಪಿದರೆ, ಆಕೆಯ ಪುತ್ರ ಸಾವು ಬದುಕಿನ ನಡುವೆ ಹೋರಾಡುವಷ್ಟು ತೀವ್ರವಾಗಿ ಅಸ್ವಸ್ಥಗೊಂಡಿದ್ದನು. ಈ ಬಗ್ಗೆ ಅಲ್ಲು ಕ್ಷಮೆ ಕೇಳಿ, ಕೇಸ್ ದಾಖಲಿಸಬೇಡಿ ಎಂದು ಮನವಿ ಮಾಡಿದ್ದರು. ಆದರೆ ಅಲ್ಲು ವಿರುದ್ಧ ಕೇಸ್ ದಾಖಲಾಗಿದ್ದು, ಅವರೇಕೆ ಚಿತ್ರ ಮಂದಿರಕ್ಕೆ ಬರಬೇಕಿತ್ತು..? ಅವರು ಬಂದಿದ್ದಕ್ಕೇ ಈ ಅವಘಡ ನಡೆಯಿತು ಎಂದು ಹೇಳಿ, ದೂರು ನೀಡಲಾಗಿತ್ತು. ಇದೀಗ ಅಲ್ಲು ಅರ್ಜುನ್ ಅವರನ್ನು ಚೀಕಟಪಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

- Advertisement -

Latest Posts

Don't Miss