Sunday, May 26, 2024

Latest Posts

ಅಪರಿಚಿತ ವ್ಯಕ್ತಿಯ ಮುಂದೆ ಬೆತ್ತಲೆಯಾದ ಮಹಿಳೆ.. ಪತಿಗೆ ಫೋಟೋ ಕಳುಹಿಸಿ 10 ಲಕ್ಷಕ್ಕೆ ಡಿಮ್ಯಾಂಡ್

- Advertisement -

News: ಮಹಿಳೆಯೊಬ್ಬಳು ಫಂಕಿ ಅನ್ನೋ ಹೆಸರಿನ ಆ್ಯಪ್‌ನಲ್ಲಿ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಂಡು, ಆತನ ಎದುರು ಮೊಬೈಲ್‌ನಲ್ಲೇ ಬೆತ್ತಲಾಗಿದ್ದಾಳೆ. ಆ ವ್ಯಕ್ತಿ ಆಕೆಯ ಫೋಟೋವನ್ನು ತೆಗೆದು, ಆಕೆಗೆ ಮತ್ತು ವಿದೇಶದಲ್ಲಿರುವ ಆಕೆಯ ಪತಿಗೆ ಫೋಟೋ ಕಳಿಸಿ, ನೀವು 10 ಲಕ್ಷ ರೂಪಾಯಿ ಹಣ ನೀಡದಿದ್ದಲ್ಲಿ, ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಚೆನ್ನೈ ಮೂಲದ ಮಹಿಳೆಯ ಪತಿ ವಿದೇಶದಲ್ಲಿ ನೆಲೆಸಿರುತ್ತಾನೆ. ಮತ್ತು ಆ ಮಹಿಳೆ ಚೆನ್ನೈನಲ್ಲಿ ಒಬ್‌ಬಂಟಿಯಾಗಿ ನೆಲೆಸಿದ್ದಾಳೆ.  ಹಾಗಾಗಿ ಆಕೆ ಫಂಕಿ ಆ್ಯಪ್ ಮೂಲಕ ರಾಜಸ್ತಾನ ಮೂಲದ, 33 ವರ್ಷದ ಫಾರೂಕ್ ಅಲಿ ಎಂಬಾತನೊಂದಿಗೆ ಸ್ನೇಹ ಬೆಳೆಸಿದ್ದಾಳೆ. ಆ ಸ್ನೇಹ ಕಾಮಕ್ಕೆ ತಿರುಗಿ ಆತ ಆಕೆಗೆ ವೀಡಿಯೋ ಕಾಲ್ ಮಾಡಿ, ಬೆತ್ತಲೆಯಾಗುವಂತೆ ಹೇಳಿದ್ದಾನೆ. ಆಕೆ ಕೂಡ ಆತನ ಮಾತಿಗೆ ಓಗೊಟ್ಟು, ಆತನ ಮುಂದೆ ಬೆತ್ತಲಾಗಿದ್ದಾಳೆ. ಆತನೂ ಆಕೆಗೆ ಬೆತ್ತಲೆ ಫೋಟೋ, ವೀಡಿಯೋ ಕಳಿಸುತ್ತಿದ್ದ. ಈ ವೇಳೆ ಫಾರೂಕ್ ಫೋಟೋ ತೆಗೆದುಕೊಂಡು, ಆಕೆಗೆ ಮತ್ತು ವಿದೇಶದಲ್ಲಿರುವ ಆಕೆಯ ಪತಿಗೆ ಫೋಟೋ ಕಳಿಸಿ, 10 ಲಕ್ಷ ರೂಪಾಯಿಗಾಗಿ ಬೇಡಿಕೆ ಇಟ್ಟಿದ್ದಾನೆ.

ದುಡ್ಡು ಕೊಡದಿದ್ದಲ್ಲಿ, ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಕಾರಣಕ್ಕೆ ಮಹಿಳೆ ಫಾರೂಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ನೀಡಿದ್ದು, ಚೆನ್ನೈ ಪೊಲೀಸರು ಫಾರೂಕ್‌ನನ್ನು ಬಂಧಿಸಿದ್ದಾರೆ.

ನಾನು ಗೆದ್ದರೆ ರೈತರಿಗೆ ನೀರು ತರುವೆ: ರಾಜುಗೌಡ ಭರವಸೆ

ಪ್ರಜ್ವಲ್ ರೇವಣ್ಣ ದುಬೈ ಬಿಟ್ಟು ಇನ್ನು ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿಎಂ ಸಿದ್ದರಾಮಯ್ಯ

ರಾಯ್ ಬರೇಲಿಯಲ್ಲಿ ರಾಮಪತ್ರ ಸಲ್ಲಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

- Advertisement -

Latest Posts

Don't Miss