ಕೊರೊನಾ ಎಂಬ ಮಹಾಮಾರಿ ಬೆನ್ನು ಬಿಡದ ಬೇತಾಳದಂತೆ ಕಾಡುತ್ತಿದೆ. ಇಡೀ ಮನುಕುಲವೇ ಕೊರೊನಾದಿಂದ ತತ್ತರಿಸಿ ಹೋಗಿದೆ. ಇದೀಗ ಓಮಿಕ್ರಾನ್ ಅನ್ನೋ ಭೂತದ ಕಾಟ ಶುರುವಾಗಿದೆ. ನೆಗಡಿ ಕೆಮ್ಮು ಬಂದ್ರೆ ತಕ್ಷಣ ಚೆಕಪ್ ಮಾಡಿಸಿಕೊಂಡು, ತಾವು ಹುಷಾರಾಗಿ ಇದ್ದೀವಾ ಅಲ್ಲವಾ ಅಂತಾ ಜನ ಚೆಕ್ ಮಾಡಿಕೊಳ್ತಾರೆ. ಅದರಲ್ಲೂ ವಿಮಾನದಲ್ಲಿ ಪ್ರಯಾಣಿಸುವವರು ಎರಡು ಡೋಸ್ ವ್ಯಾಕ್ಸಿನ್ ಪಡೆದ ಮೇಲೂ, ಕೊರೊನಾ ಚೆಕಪ್ ಮಾಡಿಸಿಕೊಂಡೇ ಹೋಗುತ್ತಾರೆ.
ಆದ್ರೂ ಕೂಡ ವಿಮಾನದಲ್ಲಿ ಚಲಿಸುತ್ತಿದ್ದ ಯುಎಸ್‌ನ ಮಹಿಳೆಗೆ ಕೊರೊನಾ ತಗುಲಿದ್ದು ಕಂಡುಬಂದಿದೆ. ಶಿಕ್ಷಕಿಯಾಗಿರುವ ಮಾರಿಸಾ ಫೋಟಿಯೋ ಎಂಬಾಕೆಗೆ ಕೊರೊನಾ ವೈರಸ್ ತಗುಲಿದೆ. ವಿಚಿತ್ರ ಎಂದರೆ ಆಕೆ ಪ್ರಯಾಣಿಸುವ ಮುನ್ನ, 2 ಪಿಸಿಆರ್ ಟೆಸ್ಟ್, ಮತ್ತು 5 ರ್ಯಾಪಿಡ್ ಟೆಸ್ಟ್ ಮಾಡಿಸಿದ್ದಾರೆ. ಅದೆಲ್ಲ ರಿಸಲ್ಟ್ ನೆಗೆಟಿವ್ ಬಂದಿದೆ. ಅಲ್ಲದೇ ಎರಡು ವ್ಯಾಕ್ಸಿನ್ ಜೊತೆ ಬೂಸ್ಟರ್ ಡೋಸ್ ಕೂಡ ಪಡೆದುಕೊಂಡಿದ್ದಾರೆ. ಆದ್ರೆ ಆಕೆ ವಿಮಾನ ಹತ್ತುವ 10 ನಿಮಿಷ ಮುನ್ನ ಆಕೆಗೆ ಗಂಟಲು ಕೆರೆತ ಶುರುವಾಗಿದೆ.
ಅದರ ಬಗ್ಗೆ ಅಷ್ಟು ಲಕ್ಷ್ಯ ಕೊಡದ ಮಾರಿಸಾ, ವಿಮಾನವೇರಿ ಪ್ರಯಾಣಿಸಿದ್ದಾರೆ. ಅರ್ಧ ಗಂಟೆ ಬಳಿಕ, ಗಂಟಲು ಕೆರೆತ ಹೆಚ್ಚಾಗಿದ್ದು, ವಿಮಾನದಲ್ಲಿರುವ ಬಾತ್‌ರೂಮ್‌ಗೆ ಹೋಗಿ ಮಾರಿಸಾ, ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಅಲ್ಲಿ ಪಾಸಿಟಿವ್ ಎಂದು ತೋರಿಸಿದೆ. ಅಲ್ಲಿನ ಸಿಬ್ಬಂದಿಗಳು ಆಕೆಗಾಗಿ ಸಪರೇಟ್ ಸೀಟ್ ಇದೆಯಾ ಎಂದು ನೋಡಿದ್ದಾರೆ. ಆದ್ರೆ ಸಪರೇಟ್ ಸೀಟ್ ಇಲ್ಲದ ಕಾರಣ. ಈಕೆಯನ್ನು ಬಾತ್‌ರೂಮ್‌ನಲ್ಲಿಯೇ 3 ಗಂಟೆ ಇರಲಾಗುತ್ತದೆಯೇ ಎಂದು ಕೇಳಿದ್ದಾರೆ. ಇದಕ್ಕೆ ಒಪ್ಪಿದ ಮಾರಿಸಾ ಮೂರು ಗಂಟೆ ಬಾತ್‌ರೂಮ್‌ನಲ್ಲೇ ಇದ್ದರು.
ಈ ಬಗ್ಗೆ ಸ್ಥಳೀಯ ಮಾಧ್ಯಮಗಳ ಜೊತೆ ಮಾತನಾಡಿದ ಮಾರಿಸಾ, ನನಗೆ ಅಳು ಬರುತ್ತಿತ್ತು. ಯಾಕಂದ್ರೆ ಆಗಷ್ಟೇ ನನ್ನ ಕುಟುಂಬಸ್ಥರು ನನ್ನ ಜೊತೆ ಡಿನ್ನರ್ ಮಾಡಿದ್ದರು. ವಿಮಾನದಲ್ಲಿ ನನ್ನೊಂದಿಗೆ ಹಲವಾರು ಸಹ ಪ್ರಯಾಣಿಕರಿದ್ದರು. ಅವರ ಬಗ್ಗೆ ಯೋಚನೆಯಾಯಿತು ಎಂದು ಹೇಳಿದರು. ಮಾರಿಸಾ 10 ದಿನ ಕ್ವಾರಂಟೈನ್‌ನಲ್ಲಿದ್ದು, ವೈದ್ಯರು ಹೇಳಿದ ಹಾಗೆ ಔಷಧಿ, ಊಟವನ್ನು ತೆಗೆದುಕೊಳ್ಳುತ್ತಿದ್ದು, ಈಗ ಸಂಪೂರ್ಣ ಗುಣಮುಖರಾಗಿದ್ದಾರೆ.