Saturday, July 27, 2024

Latest Posts

ಕ್ರಿಸ್ಮಸ್ ಟ್ರೀ ಡೆಕೊರೇಟ್ ಮಾಡಿದ್ದಕ್ಕೆ ಜೈಲಿಗೆ ಹೋದ ಭೂಪ.. ಅಸಲಿಯತ್ತು ಇಲ್ಲಿದೆ ನೋಡಿ..

- Advertisement -

ಮೊನ್ನೆ ಮೊನ್ನೆ ತಾನೇ ಕ್ರಿಸ್‌ಮಸ್ ಹಬ್ಬ ಮುಗಿದಿದೆ. ಕ್ರಿಸ್‌ಮಸ್ ಹಬ್ಬಕ್ಕೆ ಕ್ರಿಶ್ಚಿಯನ್ ಬಾಂಧವರು ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡೋದು ವಾಡಿಕೆ. ಅಂತೆಯೇ ಇಲ್ಲೊಬ್ಬ ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡಿದ್ದಾನೆ. ಆದ್ರೆ ಆತನನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಯಾಕಂದ್ರೆ ಆತ ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡಿದ್ದು, ಲೈಟ್, ಸ್ಟಾರ್ ಅಥವಾ ಬಾಲ್‌ನಿಂದ ಅಲ್ಲ, ಬದಲಾಗಿ ನೋಟು ಮತ್ತು ಕೊಕೇನ್ ನಿಂದ.

ಮಾರ್ವೆನ್ ಪೊರ್ಸೆಲ್ಲಿ ಎಂಬ ಇಂಗ್ಲೆಂಡ್‌ನ ಡ್ರಗ್ ಡೀಲರ್ ಈ ಕೆಲಸ ಮಾಡಿದ್ದಾನೆ. ಈತ ತನ್ನ ಮನೆಯಲ್ಲಿ ಡ್ರಗ್ಸ್ ಮತ್ತು ನೋಟಿನಿಂದ ಕ್ರಿಸ್‌ಮಸ್‌ ಟ್ರೀ ಡೆಕೊರೇಟ್ ಮಾಡಿ ಫೋಟೋ ತೆಗೆದಿದ್ದಾನೆ. ಅದನ್ನ ಇಂಗ್ಲೇಂಡ್ ಪೊಲೀಸರು ಟ್ರ್ಯಾಕ್ ಮಾಡಿದ್ದಾರೆ. ಮತ್ತು ಆತನ್ನು ಅರೆಸ್ಟ್ ಮಾಡಿದ್ದಾರೆ. ಈತನ ಮನೆಗೆ ನುಗ್ಗಿ ಅರೆಸ್ಟ್ ಮಾಡುವ ಸಮಯದಲ್ಲಿ ಈತನ ಜೊತೆ ಇನ್ನೂ 8 ಜನ ಇದ್ದರು. ಈ ವೇಳೆ 10ವರೆ ಕೋಟಿ ಮೌಲ್ಯದ ಡ್ರಗ್ಸ್ ಸಿಕ್ಕಿದೆ.

ಈ ಅಪರಾಧಿಗಳು ಸಂಘಟಿತರು ಮತ್ತು ಶಸ್ತ್ರ ಸಜ್ಜಿತರೂ ಆಗಿದ್ದರೆಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಇವರು ಸಂವಹನಕ್ಕಾಗಿ ಕೆಲ ವಸ್ತುಗಳನ್ನು ಬಳಸಿದ್ದು, ಆ ವಸ್ತುಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತು ಈ ಅಪರಾಧಿಗಳಿಗೆ 89 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

- Advertisement -

Latest Posts

Don't Miss