www.karnatakatv.net : ಬೆಳಗಾವಿ: ರೈತ ತೀರಿಕೊಂಡು ಒಂದು ವರ್ಷವಾದರೂ ಪರಿಹಾರ ಸಿಕ್ಕಿಲ್ಲ ಸರಕಾರ ರಚನೆ ಮಾಡುವಾಗ ಸಚಿವರು ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕಮಲ ಅರಳಿಸಿದ ಸರ್ಕಾರ ನಿಜವಾಗಿಯೂ ರೈತರ ಕುಟುಂಬ ಮತ್ತು ಅವರ ಮಕ್ಕಳೆಡೆ ನಿರ್ಲಕ್ಷ್ಯ ತೋರುತ್ತಿದ್ದೆಯೇ?ಎಂಬ ಪ್ರಶ್ನೆ ಮೂಡ ತೊಡಗಿದೆ. ರೈತನ ಪ್ರತಿಭಾವಂತ ಮಕ್ಕಳು ಸಾಧನೆ ಮಾಡುವ ಗುರಿಯಿದ್ದರು ಕೂಡ, ಆರ್ಥಿಕ ಪರಿಸ್ಥಿತಿ ಅವರ ಕಾಲೆಳೆಯುತ್ತಿದೆ.
ಈ ಇಬ್ಬರ ಕುಟುಂಬಗಳು ಕೂಡ ಸಮಸ್ಯೆಗೆ ಇಡಾಗಿವೆ. ಇವರ ಕುಟುಂಬಸ್ಥರು ಒಂದಿಲ್ಲೊಂದು ತೊಂದರೆಗಿಡಾಗುತ್ತಿದ್ದಾರೆ. ರೈತ ದೇಶದ ಬೆನ್ನೆಲಬು. ಮನೆಗೆ ಆಧಾರ ಸ್ಥಂಭವಾಗಿ ನಿತ್ಯ ಜಮೀನಿನಲ್ಲಿ ಕೆಲಸ ಮಾಡಿಕೊಂಡು ತನ್ನ ಉಪಜೀವನ ಸಾಗಿಸುತ್ತಿದ್ದ, ಪ್ರಕೃತಿ ವಿಕೋಪದಿಂದ ತಾನು ಬೆಳೆದ ಬೆಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಮಾಡಿದ ಸಾಲವನ್ನು ತೀರಿಸಲಾಗದೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೇಕೊಪ್ಪ ಗ್ರಾಮದ ರೈತ ಈಶ್ವರಪ್ಪ ಚಿಕ್ಕೋಪ್ಪ ನೇಣಿಗೆ ಶರಣಾಗಿ ಬರೋಬರಿ ವರ್ಷ ಕಳೆದರೂ ಸ್ಥಳೀಯ ಅಧಿಕಾರಿಗಳು, ಜಿಲ್ಲಾಡಳಿತ ಮಾತ್ರ ಅವರಿಗೆ ಪರಿಹಾರ ನೀಡಿಲ್ಲ. ಇನ್ನು ಉನ್ನತ ಶಿಕ್ಷಣಕ್ಕಾಗಿ ಮಕ್ಕಳಿಗೆ ಕಲಿಸಲು, ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿ ಅನಸೂಯಾ ಬಳಿ ಕಾಸಿಲ್ಲ. ಸಾಲಗಾರರು ನಿತ್ಯ ಮನೆಗೆ ಬಂದು ಸತಾಯಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಲು ಬಂದಿದ್ದಾರೆ. ನಮಗೆ ಆಸರೇ ನೀಡಿ ಎಂದು ರೈತ ಪತ್ನಿ ಕಣ್ಣಿರು ಹಾಕಿದ್ದಾರೆ.
ತಂದೆ ಆತ್ಮಹತ್ಯೆ ಮಾಡಿಕೊಂಡು ವರ್ಷ ಕಳೆದರೂ ಜಿಲ್ಲಾಡಳಿತದಿಂದ ಪರಿಹಾರ ಸಿಕ್ಕಿಲ್ಲ. ಮಕ್ಕಳು ದಕ್ಷ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದಾರೆ. ಆದರೇ ಇವರಿಗೆ ಶಾಪವಾಗಿದ್ದು ಮಾತ್ರ ಸಾಲ. ಜಿಲ್ಲಾಡಳಿತ ಪರಿಹಾರ ಕೊಟ್ಟರೇ ಸಾಲ ತೀರಿಸಿ ಉನ್ನತ ವಿಧ್ಯಾಭ್ಯಾಸಕ್ಕೆ ಮಾಡಬಹುದಾಗಿದೆ. ಅಧಿಕಾರಿಗಳಿಂದ ಯಾವುದೇ ರೀತಿ ಪ್ರತಿಕ್ರಿಯೆ ಸಿಗುತ್ತಿಲ್ಲ. ಅದ್ಧರಿಂದ ಬೇಗನೆ ಪರಿಹಾರ ಹಣ ನೀಡಬೇಕೆಂಬುದು ರೈತನ ಪುತ್ರಿ ಚೈತ್ರಾ ಚಿಕ್ಕೋಪ್ಪ ಒತ್ತಾಯವಾಗಿದೆ.
ದಿನದಿಂದ ದಿನಕ್ಕೆ ರೈತರ ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೇ ಬಡರೈತನ ಪರಿಸ್ಥಿತಿ ಏನಾಗಿದೆ? ಸರ್ಕಾರದಿಂದ ಘೋಷಣೆಯಾದ ಪರಿಹಾರದ ಅನುದಾನ ಎಲ್ಲಿ ಹೋಯಿತು? ಎಂಬುವುದು ತಿಳಿಯದಾಗಿದೆ.
ನಾಗೇಶ ಕುಂಬಳಿ ಕರ್ನಾಟಕ ಟಿವಿ ಬೆಳಗಾವಿ