ತಮಿಳುನಾಡು:
ಓ ಹೆಣ್ಣೆ ನಿನಗ್ಯಾರೆ ಸಾಡಿ ಈ ಜಗದಲ್ಲಿ ಎನ್ನುವ ಮತ್ತೆ ಮಹಿಳೆಯರು ರಾಜಕೀಯವಾಗಿ ಔದ್ಯೂಗಿಕವಾಗಿ ಹೀಗೆ ಎಲ್ಲಾ ರಂಗದಲ್ಲಿಯಾ ಸಹ ಉನ್ನತ ಹುದ್ದೆ ಅಲಂಕರಿಸುವ ಮೂಲಕ ನಾವು ಸಹ ಯಾರಿಗಿಂತಲೂ ಕಮ್ಮಿ ಇಲ್ಲ್ ಎನ್ನುವುದನ್ನು ಮತ್ತೆ ಮತ್ತೆ ಖಚಿತ ಪಡಿಸುತ್ತಿದ್ದಾರೆ.ಈಗ ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ ನಂತರ ರಾಜಕೀಯ ಪ್ರವೇಶ ಮಾಡಿರುವ ಹಿರಿಯ ನಟಿ ಖುಷ್ಬೂ ಸುಂದರೆ ಅವರು ತಮಿಳುನಾಡಿನ ಭಾರತೀಯ ಜನತಾ ಪಾರ್ಟಿ ಮುಖಂಡೆ, ಹಿರಿಯ ನಟಿ ಖುಷ್ಬೂ ಸುಂದರ್ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿರುವ ನಟಿ ಖುಷ್ಬೂ ಸುಂದರ್, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆದೇಶ ಪತ್ರವನ್ನು ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಎನ್‌ಸಿಡಬ್ಲ್ಯು ನಿರ್ದೇಶಕರು ಹೊರಡಿಸಿದ ಆದೇಶದಲ್ಲಿ ಈ ನಾಮ ನಿರ್ದೇಶನವು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಿನವರೆಗೆ ಇರಲಿದೆ ಎಂದು ಹೇಳಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಬೆನ್ನಲ್ಲೇ ಖುಷ್ಬೂ ಸುಂದರ್ ಅವರಿಗೆ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲಿರುವ ಶಿವಲಿಂಗೇಗೌಡರಿಗೆ ದೇವರು ಒಳ್ಳೆದು ಮಾಡಲೆಂದು ವ್ಯಂಗ್ಯ ಮಾಡಿದ ರೇವಣ್ಣ