Saturday, July 5, 2025

Latest Posts

10 ದಿನದಲ್ಲಿ ನಿಮ್ಮ ಮುಖದ ಮೇಲಿರುವ ಕಲೆ ಕಡಿಮೆಯಾಗಲು ಹೀಗೆ ಮಾಡಿ..

- Advertisement -

ನಮ್ಮಲ್ಲಿ ಹಲವರಿಗೆ ಮೊಡವೆಯಾಗುವುದಕ್ಕಿಂತ, ಅದರ ಕಲೆ ಉಳಿದುಕೊಳ್ಳುವುದೇ ಸಮಸ್ಯೆ. ಹಾಗಾಗಿ ಮೊಡವೆ ಕಲೆ ತೆಗಿಯಲು, ಹಲವು ಕ್ರೀಮ್ ಬಳಸುತ್ತಾರೆ. ಫೇಶಿಯಲ್ ಮಾಡಿಸುತ್ತಾರೆ. ತರಹೇವಾರಿ ಫೇಸ್‌ಪ್ಯಾಕ್ ಹಾಕುತ್ತಾರೆ. ಆದ್ರೆ ನಾವಿಂದು 10 ದಿನದಲ್ಲಿ ಮೊಡವೆ ಕಲೆ ಕಡಿಮೆ ಮಾಡುವಂಥ ಟಿಪ್ಸ್ ಹೇಳಲಿದ್ದೇವೆ.

ನಾವಿವತ್ತು ಮುಖದ ಮೇಲಿನ ಮೊಡವೆ ಕಲೆ ನಿವಾರಣೆಗೆ ನೈಟ್‌ ಕ್ರೀಮ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ. ಒಂದು ಸ್ಪೂನ್ ಆಲೋವೆರಾ ಜೆಲ್, ಒಂದು ವಿಟಾಮಿನ್ ಈ ಎಣ್ಣೆ ಮತ್ತು ಎರಡೇ ಎರಡು ಡ್ರಾಪ್ಸ್ ಟೀ ಟ್ರೀ ಎಣ್ಣೆ. ಇವೆಲ್ಲವೂ ಮೆಡಿಕಲ್ ಶಾಪ್ ಮತ್ತು ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ಇವೆಲ್ಲವನ್ನು ಮಿಕ್ಸ್ ಮಾಡಿ, ನಿಮ್ಮ ಮುಖಕ್ಕೆ ಬೇಕಾದಷ್ಟು ಕ್ರೀಮನ್ನ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ ಮಲಗಿ, ಹೀಗೆ 10 ದಿನ ಈ ಕ್ರೀಮ್ ತಯಾರಿಸಿ ಬಳಸಿ. ಒಮ್ಮೆ ಕ್ರೀಮ್ ತಯಾರಿಸಿದ್ರೆ, 3 ದಿನ ಬಳಸಬಹುದು.

ಆ್ಯಲೋವೆರಾ ಜೆಲ್ ನಿಮ್ಮ ಮುಖದ ಕಾಂತಿ ಹೆಚ್ಚಿಸುತ್ತದೆ. ನಿಮ್ಮ ತ್ವಚೆಯ ಕಲರ್ ಲೈಟ್ ಮಾಡತ್ತೆ. ಮೊಡವೆ ಕಲೆಗಳನ್ನ ದೂರ ಮಾಡತ್ತೆ ನಿಮ್ಮ ಮುಖ ಕ್ಲೀನ್ ಮಾಡತ್ತೆ. ಇನ್ನು ವಿಟಾಮಿನ್ ಈ ತೈಲ, ನಿಮ್ಮ ಮುಖದಲ್ಲಿ ಮಾಯ್‌ಸ್ಚರೈಸ್ ಹೆಚ್ಚಿಸುತ್ತೆ. ಟೀ ಟ್ರೀ ಎಣ್ಣೆ, ನಿಮ್ಮ ತ್ವಚೆ ಸಾಫ್ಟ್ ಆಗುವಂತೆ ಮಾಡತ್ತೆ.

ಆದ್ರೆ ಒಂದು ನೆನಪಿರಲಿ, ನೀವು ಈ ಕ್ರೀಮನ್ನ ನಿಮ್ಮ ಕೈಗೆ ಹಚ್ಚಿ ಒಂದು ರಾತ್ರಿ ಬಿಡಿ. ನಿಮ್ಮ ಕೈಗೆ ಏನೂ ಅಲರ್ಜಿಯಾಗದಿದ್ದಲ್ಲಿ ಮಾತ್ರ, ಈ ಕ್ರೀಮ್ ಬಳಸಿ. ಕೆಲವರಿಗೆ ಟೀ ಟ್ರೀ ಎಣ್ಣೆ ಬಳಸಿದ್ರೆ ಅಲರ್ಜಿಯಾಗುತ್ತದೆ. ನಿಮಗೂ ಇದು ಅಲರ್ಜಿಯಾಗಿದ್ದಲ್ಲಿ, ವೈದ್ಯರ ಬಳಿ ವಿಚಾರಿಸಿ, ನಂತರ ಬಳಸುವುದು ಉತ್ತಮ.

ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?

ಜಿಮ್ ಹೋಗುವುದರಿಂದ ಆಗುವ ನಷ್ಟವೇನು ಗೊತ್ತಾ..?

ನಿಮ್ಮ ಕಿಡ್ನಿ ಕಿತ್ತುಕೊಳ್ಳುತ್ತೆ ಇಂಥ ಕೂಲ್ ಡ್ರಿಂಕ್ಸ್..!

- Advertisement -

Latest Posts

Don't Miss