ಆರ್ಥಿಕ ಹಾಗೂ ಸಾಮಾಜಿಕ ಮಂಡಳಿ ಸಂಸ್ಥೆಯಾದ ಮಹಿಳಾ ಸ್ಥಿತಿಗತಿ ಆಯೋಗದ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಭಾರತವು ಪ್ರತಿಷ್ಠಿತ ಈಸಿಓಎಸ್ಓಸಿಯಲ್ಲಿ ಸದಸ್ಯತ್ವ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಭಾರತದ ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕ್ಕೆ ಸಿಕ್ಕ ಪ್ರತಿಫಲವಾಗಿದೆ ಅಂತಾ ಹೇಳಿದ್ರು. ಅಲ್ಲದೇ ಭಾರತಕ್ಕೆ ಸದಸ್ಯತ್ವ ನೀಡಲು ಮತಚಲಾಯಿಸಿದ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಟಿ.ಎಸ್ ತಿರುಮೂರ್ತಿ ಧನ್ಯವಾದ ಅರ್ಪಿಸಿದ್ರು.
ಈ ಚುನಾವಣೆಯಲ್ಲಿ ಭಾರತ, ಅಪ್ಘಾನಿಸ್ತಾನ ಹಾಗೂ ಚೀನಾ ರಾಷ್ಟ್ರಗಳು ಸ್ಪರ್ಧಿಸಿದ್ದವು. 54 ಸದಸ್ಯರುಳ್ಳ ಈ ಆಯೋಗದ ಚುನಾವಣೆಯಲ್ಲಿ ಅಫ್ಘಾನಿಸ್ಥಾನ ಭಾರತಕ್ಕೆ ಪೈಪೋಟಿ ನೀಡಿತು. ಆದ್ರೆ ಚೀನಾ ಮಾತ್ರ ಚುನಾವಣೆಯಲ್ಲಿ ಅತೀ ಕಡಿಮೆ ಮತ ಗಳಿಸಿತು. ಭಾರತ 2021ರಿಂದ ಮುಂದಿನ ನಾಲ್ಕು ವರ್ಷಗಳ ಕಾಲ ಆಯೋಗದ ಸದಸ್ಯನಾಗಿ ಮುಂದುವರಿಯಲಿದೆ.