- Advertisement -
ಬೆಂಗಳುರಿನ ಪಿಣ್ಯದ ಕಾರ್ಖಾನೆಯೊಂದರಲ್ಲಿ ರಬ್ಬರ್ ಟ್ಯೂಬ್ ಕತ್ತರಿಸುವ ಕಾರ್ಖಾನೆಯಲ್ಲಿ 29 ಪ್ರಾಯದ ಮಹಿಳೆಯೊಬ್ಬಳು ರಬ್ಬರ್ ಕತ್ತಿರಿಸುತ್ತಿರುವ ವೇಳೆ ಯಂತ್ರದ ಬ್ಲೇಡ್ ಗೆ ಸಿಲುಕಿ ಆ ಮಹಿಳೆಯ ಕೈ ತುಂಡಾಗಿತ್ತು. ಘಟನೆ ನಡೆದ ಎರಡು ಘಂಟೆಗಳ ನಂತರ ಮಹಿಳೆಯನ್ನು ಸ್ಪರ್ಶ ಆಸ್ಪತ್ರೆಗೆ ತರಲಾಗಿತ್ತು ಈ ಸಮಯದಲ್ಲಿ ಆ ಮಹಿಳೆಗ್ಎ ಸಾಕಷ್ಟು ರಕ್ತಸ್ರಾವವಾಗಿತ್ತು. ದೇಹದಿಂದ ಬೇರ್ಪಟ್ಟ ಕೈಯನ್ನು ಪಾಲಿಥಿನ್ ಚೀಲದಲ್ಲಿ ಹಾಕಿ ಮಂಜುಗಡ್ಡೆಯಲ್ಲಿ ಇರಿಸಿ ಅದನ್ನು ಆಸ್ಪತ್ರಗೆ ತರಲಾಗಿತ್ತು.ಡಾ ಕಾರ್ತಿಕ್ ವಿಶ್ವನಾಥನ್ ಮತ್ತು ಡಾ ರೋಷನ್ ಶೆಟ್ಟಿ ನೆತೃತ್ವದ ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಕೈಯನ್ನು ಮರುಜೋಡಣೆ ಮಾಡಲಾಗಿದೆ.
- Advertisement -